Chinmayi Sripaada 
ದೇಶ

ಟಿವಿಕೆ ಸದಸ್ಯನ ಅರೆಸ್ಟ್ ಕೇಸ್: 'ಅಧಿಕಾರ ಎಲ್ಲಿದೆಯೋ ಅಲ್ಲಿಗೆ ಲೈಂಗಿಕ ಅಪರಾಧಿಗಳು ಲಗ್ಗೆ ಇಡುತ್ತಾರೆ' ಎಂದು Chinmayi Sripada ಕಿಡಿ

ಪ್ರಮುಖ ಮುಖ್ಯಾಂಶಗಳು

  • ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಸದಸ್ಯನ ಬಂಧನ
  • ಮಹಿಳಾ ಸುರಕ್ಷತೆ ಮತ್ತು ಪಕ್ಷದ ಸಿದ್ಧಾಂತಗಳ ಬಗ್ಗೆ ಪ್ರಶ್ನಿಸಿದ ಚಿನ್ಮಯಿ ಶ್ರೀಪಾದ
  • ಹೊಸ ರಾಜಕೀಯ ಪಕ್ಷವೊಂದು ಇಂತಹ ಘಟನೆಗಳನ್ನು ಹೇಗೆ ನಿಭಾಯಿಸುತ್ತದೆ ಎಂದು ಟ್ವೀಟ್
ಚೆನ್ನೈ: ತಮಿಳು ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸದಸ್ಯನೊಬ್ಬ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಬಂಧನಕ್ಕೊಳಗಾದ ಘಟನೆ ಬೆಳಕಿಗೆ ಬಂದಿತ್ತು. ಈ ಬಗ್ಗೆ ಖ್ಯಾತ ಗಾಯಕಿ ಮತ್ತು ವಾಯ್ಸ್ ಡಬ್ಬಿಂಗ್ ಕಲಾವಿದೆ ಚಿನ್ಮಯಿ ಶ್ರೀಪಾದ (Chinmayi Sripaada) ಅವರು ಪಕ್ಷದ ಸಿದ್ಧಾಂತಗಳನ್ನು ಪ್ರಶ್ನಿಸಿದ್ದಾರೆ.
ವಿಜಯ್ ಅವರ ಟಿವಿಕೆಯ ಕಾರ್ಯಕರ್ತನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ. ಈ ಬೆಳವಣಿಗೆಯ ನಂತರ, ಮಹಿಳಾ ಸುರಕ್ಷತೆ ಮತ್ತು ನೈತಿಕತೆಯ ಬಗ್ಗೆ ಪಕ್ಷವು ಹೊಂದಿರುವ ನಿಲುವನ್ನು ಚಿನ್ಮಯಿ ಶ್ರೀಪಾದ ಸೋಶಿಯಲ್​ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ.

ವೈರಮುತ್ತು ವಿರುದ್ಧ ಆರೋಪ

ಚಿನ್ಮಯಿ ಶ್ರೀ ಪಾದ ಅವರು ಮಹಿಳೆಯರ ಪರ ಪ್ರತಿ ಬಾರಿ ದನಿ ಎತ್ತಿತ್ತಾರೆ. 2018 ರಲ್ಲಿ ತಮಿಳು ಚಿತ್ರರಂಗದ ಪ್ರಮುಖ ಗೀತರಚನೆಕಾರ ವೈರಮುತ್ತು ಅವರ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪಿಸಿ ಪ್ರತಿಭಟಿಸಿದ್ದರು.
2005ರಲ್ಲಿ ಸ್ವಿಟ್ಜರ್ಲೆಂಡ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ವೈರ ಮುತ್ತು ಅವರು ಕಿರುಕುಳ ನೀಡಿದ್ದರು ಎಂದು ಚಿನ್ಮಯಿ ಬಹಿರಂಗಪಡಿಸಿದರು. ನಟ ರಾಧಾ ರವಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ವಹಿಸಿದ್ದರು. ಈ ಘಟನೆಯ ನಂತರ ಅವರನ್ನು ತಮಿಳು ಚಲನಚಿತ್ರ ಡಬ್ಬಿಂಗ್ ಆರ್ಟಿಸ್ಟ್ ಯೂನಿಯನ್‌ನಿಂದ ವಜಾ ಮಾಡಲಾಯಿತು.

ಎಕ್ಸ್​ ಪೋಸ್ಟ್​ನಲ್ಲಿ ಏನಿದೆ?

ಲೈಂಗಿಕ ಅಪರಾಧಿಗಳು ತಾವು ಮಾಡಿದ ಲೈಂಗಿಕ ದೌರ್ಜನ್ಯಗಳಿಂದ ತಪ್ಪಿಸಿಕೊಳ್ಳಲು ಎಲ್ಲಿ ಅಧಿಕಾರದ ವಾಸನೆ ಬರುತ್ತದೆಯೋ ಅಲ್ಲಿಗೆ ಹೋಗಿ ಸೇರಿಕೊಳ್ಳುತ್ತಾರೆ. ಒಬ್ಬ ವ್ಯಕ್ತಿ TVK ಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆ ಪಕ್ಷವು ಸರಿಯಾದ ಹಿನ್ನೆಲೆ ಪರಿಶೀಲನೆಯನ್ನು ಮಾಡಬೇಕಿತ್ತು. ಬದಲಾವಣೆಯ ಭರವಸೆ ನೀಡಿ ಇಂತಹ ತಪ್ಪುಗಳನ್ನು ಮಾಡಿದರೆ ಹೇಗೆ. ಇನ್ನು ಮಕ್ಕಳು ಮತ್ತು ಮಹಿಳೆಯರಿಗೆ ಯಾವುದೇ ಭರವಸೆ ಉಳಿಯುವುದಿಲ್ಲ. ಎಲ್ಲರೂ ಒಂದೇ ಎಂದು ಪದೇ ಪದೇ ಹೇಳಲು ಯಾರಿಗೂ ನಿಜವಾಗಿಯೂ ಇಷ್ಟವಿಲ್ಲ ಎಂದು ಚಿನ್ಮಯಿ ಟ್ವೀಟ್ ಮಾಡಿದ್ದಾರೆ.
ಹೊಸ ಪಕ್ಷವೊಂದು ಹಳೆಯ ರಾಜಕೀಯ ಪಕ್ಷಗಳ ಕೆಟ್ಟ ಆಚರಣೆಗಳನ್ನೇ ಮುಂದುವರಿಸುತ್ತಿದೆಯೇ?" ಅಲ್ಲದೆ, ಇಂತಹ ಘಟನೆಗಳು ನಡೆದಾಗ ಪಕ್ಷವು ಕೇವಲ ಔಪಚಾರಿಕ ಶಿಸ್ತು ಕ್ರಮ ಕೈಗೊಳ್ಳುವ ಬದಲು, ವ್ಯವಸ್ಥಿತವಾಗಿ ಬದಲಾವಣೆ ತರಬೇಕೆಂದು ಅವರು ಒತ್ತಾಯಿಸಿದ್ದಾರೆ, (ಏಜೆನ್ಸೀಸ್).