Reptile Breeding ಸಾಂದರ್ಭಿಕ ಚಿತ್ರ
- ಒಂಟಿಯಾಗಿ ವಾಸಿಸುವ ವ್ಯಕ್ತಿಯೊಬ್ಬನ ಮನೆಯ ವಿದ್ಯುತ್ ಬಳಕೆ ಅತಿ ಹೆಚ್ಚಾಗಿ ಬರುತ್ತಿದ್ದ ಹಿನ್ನಲೆ ದಂಧೆಯೊಂದು ಪತ್ತೆಯಾಗಿದೆ
- ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದ ತೈಝೌ ಎಂಬಲ್ಲಿ ಪೊಲೀಸರು ಫ್ಲಾಟ್ ಒಂದರ ಮೇಲೆ ದಾಳಿ
- ಸರೀಸೃಪಗಳ ಸಂತಾನೋತ್ಪತ್ತಿ ಅಕ್ರಮ ದಂಧೆಯಲ್ಲಿ ತೊಡಗಿದ್ದ ವ್ಯಕ್ತಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ
ಚೀನಾ: ಒಂಟಿಯಾಗಿ ವಾಸಿಸುವ ವ್ಯಕ್ತಿಯೊಬ್ಬನ ಮನೆಯ ವಿದ್ಯುತ್ ಬಳಕೆ ಸಾಮಾನ್ಯಕ್ಕಿಂತ ಅತಿ ಹೆಚ್ಚಾಗಿ ಬರುತ್ತಿದ್ದ ಒಂದೇ ಒಂದು ಕಾರಣಕ್ಕೆ ಪೂರ್ವ ಚೀನಾದಲ್ಲಿ ನಡೆಯುತ್ತಿದ್ದ ಬೃಹತ್ ರಹಸ್ಯ ಸರೀಸೃಪಗಳ ಸಂತಾನೋತ್ಪತ್ತಿ (Reptile Breeding) ಜಾಲವೊಂದು ಬಯಲಿಗೆ ಬಂದಿದ್ದು, ಈ ಅಕ್ರಮ ದಂದೆಯಲ್ಲಿ ತೊಡಗಿದ್ದ ವ್ಯಕ್ತಿಗೆ ಅಲ್ಲಿನ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿರುವುದಾಗಿ ವರದಿಯಾಗಿದೆ.
'ಸೌತ್ ಚೀನಾ ಮಾರ್ನಿಂಗ್ ಪೋಸ್ಟ್' ವರದಿ ಮಾಡಿರುವ ಪ್ರಕಾರ, ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದ ತೈಝೌ ಎಂಬಲ್ಲಿ ಪೊಲೀಸರು ಫ್ಲಾಟ್ ಒಂದರ ಮೇಲೆ ದಾಳಿ ನಡೆಸಿದಾಗ ಕೊಠಡಿಗಳಾದ್ಯಂತ ಎತ್ತರಕ್ಕೆ ಜೋಡಿಸಿಡಲಾಗಿದ್ದ ಪ್ಲಾಸ್ಟಿಕ್ ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಲಾಗಿದ್ದ ಬರೋಬ್ಬರಿ 309 ಹೆಬ್ಬಾವುಗಳು ಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ತನಿಖೆಗೆ ಕಾರಣವಾದ ಬೆಟ್ಟದ ತಪ್ಪಲಿನ ಹಾವಿನ ರಹಸ್ಯ
ಸ್ಥಳೀಯ ವೃದ್ಧರೊಬ್ಬರಿಗೆ ಅಲ್ಲಿನ ಬೆಟ್ಟದ ತಪ್ಪಲಿನಲ್ಲಿ ಅಪರೂಪದ ಮತ್ತು ವಿಲಕ್ಷಣವಾದ ದೊಡ್ಡ ಹಾವೊಂದು ಕಂಡುಬಂದಾಗ ಈ ರಹಸ್ಯ ಕಾರ್ಯಾಚರಣೆಯ ತನಿಖೆ ಆರಂಭವಾಯಿತು. ಹೆಬ್ಬಾವುಗಳು ಆ ಪ್ರದೇಶದ ಸ್ಥಳೀಯ ತಳಿಗೆ ಸೇರಿದವುಗಳಲ್ಲದ ಕಾರಣ ಮತ್ತು ಚೀನಾ ಕಾನೂನಿನಡಿ ಅವುಗಳು ಸಂರಕ್ಷಿತ ಜೀವಿಗಳಾಗಿರುವುದರಿಂದ, ಆಸುಪಾಸಿನಲ್ಲೇ ಯಾರೋ ಅಕ್ರಮ ಸಾಕಾಣಿಕೆದಾರರು ಇರಬಹುದು ಎಂದು ಅಧಿಕಾರಿಗಳು ತಕ್ಷಣವೇ ಶಂಕಿಸಿದರು.
ಈ ವೇಳೆ ಸರೀಸೃಪ ತಜ್ಞರೊಬ್ಬರು ಪತ್ತೆದಾರರಿಗೆ ಸುಳಿವನ್ನು ನೀಡಿದ್ದಾರೆ. ಆದಾಗ್ಯೂ, ಹೆಬ್ಬಾವುಗಳು ಬದುಕಲು ನಿರಂತರ ಉಷ್ಣಾಂಶ ಮತ್ತು ಹೆಚ್ಚಿನ ತೇವಾಂಶದ ಅಗತ್ಯವಿರುತ್ತದೆ. ಇದರರ್ಥ ಹಾವುಗಳಿಗಾಗಿ ಕೊಠಡಿಯ ತಾಪಮಾನವನ್ನು 20 ರಿಂದ 30 ಡಿಗ್ರಿ ಸೆಲ್ಸಿಯಸ್ ನಡುವೆ ಕಾಯ್ದುಕೊಳ್ಳಲು ಆ ಸಾಕಾಣಿಕೆದಾರನ ಫ್ಲಾಟ್‌ನಲ್ಲಿ ಭಾರಿ ಪ್ರಮಾಣದ ವಿದ್ಯುತ್ ಬಳಕೆಯಾಗುತ್ತಿರುತ್ತದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಆದಾಗ್ಯೂ, ಈ ಸುಳಿವಿನ ಆಧಾರದ ಮೇಲೆ ಪೊಲೀಸರು ಸ್ಥಳೀಯ ವಿದ್ಯುತ್ ಬಿಲ್‌ಗಳನ್ನು ಪರಿಶೀಲಿಸಿದಾಗ, 'ಗುವೊ' ಎಂಬ ಉಪನಾಮದ ನಿವಾಸಿಯೊಬ್ಬ ಪ್ರಮುಖ ಶಂಕಿತನಾಗಿ ಗುರುತಿಸಲ್ಪಟ್ಟನು. ಅವರು ಅವಿವಾಹಿತನಾಗಿದ್ದು, ಯಾವುದೇ ಉದ್ಯೋಗ ಹೊಂದಿರಲಿಲ್ಲ. ಆತ ತನ್ನ ಎಲ್ಲಾ ವೈಯಕ್ತಿಕ ಪೀಠೋಪಕರಣಗಳನ್ನು ಕೇವಲ ಒಂದು ಮಲಗುವ ಕೋಣೆಗೆ ಸೀಮಿತಗೊಳಿಸಿದ್ದನು. ಉಳಿದಂತೆ ತನ್ನ ಫ್ಲಾಟ್‌ನ ಇತರ ಎರಡು ಮಲಗುವ ಕೋಣೆಗಳು ಮತ್ತು ಲಿವಿಂಗ್ ರೂಮ್ ಅನ್ನು ಸಂಪೂರ್ಣವಾಗಿ ಈ ಬೃಹತ್ ಹಾವಿನ ಸಂಗ್ರಹಕ್ಕಾಗಿಯೇ ಬಳಸಿಕೊಂಡಿದ್ದನು.
ಹೆಚ್ಚಿನ ತನಿಖೆಯಲ್ಲಿ ಗುವೊ ಮತ್ತು ಆತನ ಸಹಚರನೊಬ್ಬ ಸೇರಿ 2014 ರಲ್ಲಿ ನಾಲ್ಕು ಹೆಬ್ಬಾವುಗಳನ್ನು ಖರೀದಿಸಿದ್ದರು ಮತ್ತು ಅಂದಿನಿಂದ ಅವುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಸಲುವಾಗಿ ನೂರಾರು ಹೆಬ್ಬಾವುಗಳನ್ನು ಶಂಕಿಸಿದ್ದಾರೆ ಎಂದು ತಿಳಿದುಬಂದಿದೆ. ತನ್ನನ್ನು ತಾನು ಜೀವಿಗಳ ಸೃಷ್ಟಿಕರ್ತ ಎಂದು ಕರೆದುಕೊಳ್ಳುತ್ತಿದ್ದ ಗುವೊ, ತನಗೆ ಈ ಸರೀಸೃಪಗಳ ಬಗ್ಗೆ ಯಾವುದೇ ಭಯವಿಲ್ಲ ಮತ್ತು ವಿವಿಧ ಬಣ್ಣಗಳನ್ನು ವಿನ್ಯಾಸಗೊಳಿಸುವುದನ್ನು ಇಷ್ಟಪಡುತ್ತೇನೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯವು ಗುವೊ ಮತ್ತು ಇಬ್ಬರು ಸಹಚರರಿಗೆ ಜೈಲು ಶಿಕ್ಷೆ ವಿಧಿಸಿದೆ. ಪೊಲೀಸರು ನಡೆಸಿದ ಈ ವ್ಯಾಪಕ ಕಾರ್ಯಾಚರಣೆಯಲ್ಲಿ ಒಟ್ಟು 436 ಹೆಬ್ಬಾವುಗಳನ್ನು ಯಶಸ್ವಿಯಾಗಿ ವಶಪಡಿಸಿಕೊಳ್ಳಲಾಗಿದೆ.
ಇದು ಸರಿಸುಮಾರು 3.3 ಮಿಲಿಯನ್ ಪೌಂಡ್‌ಗಳಷ್ಟಿದೆ. ಚೀನಾದ ಕ್ರಿಮಿನಲ್ ಕಾನೂನಿನ ಪ್ರಕಾರ, ಈ ಸಂರಕ್ಷಿತ ಪ್ರಾಣಿಗಳನ್ನು ಅಕ್ರಮವಾಗಿ ಸಂತಾನೋತ್ಪತ್ತಿ ಮಾಡುವುದು ಅಥವಾ ಮಾರಾಟ ಮಾಡುವುದರಿಂದ ಗರಿಷ್ಟ ಐದು ವರ್ಷಗಳ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಆದಾಗ್ಯೂ, ಈಗಾಗಲೇ ರಕ್ಷಿಸಲಾದ ಹಾವುಗಳನ್ನು ಸ್ಥಳೀಯ ಮೃಗಾಲಯಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ (ಏಜೆನ್ಸೀಸ್).