ಆರ್​ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ 
ದೇಶ

RSS ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆಯವರನ್ನು ಭೇಟಿಯಾದ ಚೀನಾದ ಕಮ್ಯೂನಿಷ್ಟ ಪಾರ್ಟಿ ನಿಯೋಗ

ನವದೆಹಲಿ: ಭಾರತಕ್ಕೆ ಆಗಮಿಸಿರುವ ಚೀನಾದ ಕಮ್ಯೂನಿಷ್ಟ್ ಪಾರ್ಟಿ ನಿಯೋಗವೊಂದು ಮಂಗಳವಾರ(ಜ. 13) ದೆಹಲಿಯಲ್ಲಿ ಆರ್​ಎಸ್ಎಸ್(RSS)​ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆಯವರನ್ನು ಭೇಟಿಯಾಗಿದೆ ಎಂದು ವರದಿಯಾಗಿದೆ.
ಚೀನಾದ ಕಮ್ಯುನಿಸ್ಟ್ ಪಕ್ಷದ ಅಂತಾರಾಷ್ಟ್ರೀಯ ವಿಭಾಗದ ಉಪ ಸಚಿವ ಸನ್ ಹೈಯಾನ್ ನೇತೃತ್ವದ ನಿಯೋಗವು ಬೆಳಗ್ಗೆ 11 ಗಂಟೆ ಸುಮಾರಿಗೆ ಹೊಸಬಾಳೆಯವರನ್ನು ಭೇಟಿಯಾಗಿದೆ. ಸುಮಾರು ಒಂದು ಗಂಟೆಗಳ ಕಾಲ ಸಭೆ ನಡೆಸಿ ಹಲವು ವಿಚಾರಗಳನ್ನು ಚರ್ಚಿಸಿದೆ ಎನ್ನಲಾಗಿದೆ.
ಇದೇ ನಿಯೋಗವು ಸೋಮವಾರ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಗೆ ಭೇಟಿ ನೀಡಿತ್ತು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಜೊತೆ ಅಂತರ-ಪಕ್ಷ ಸಂವಹನವನ್ನು ಮುನ್ನಡೆಸುವ ವಿಧಾನಗಳ ಕುರಿತು ದೀರ್ಘವಾಗಿ ಚರ್ಚಿಸಿತು ಎಂದು ವರದಿಗಳು ಉಲ್ಲೇಖಿಸಿವೆ. ಬಿಜೆಪಿ ಕಚೇರಿಗೆ ಚೀನಾ ನಿಯೋಗ ಭೇಟಿ ನೀಡಿದ್ದ ವೇಳೆ ಭಾರತದಲ್ಲಿರುವ ಚೀನಾದ ರಾಯಭಾರಿ ಕ್ಸು ಫೀಹಾಂಗ್ ಕೂಡ ಹಾಜರಿದ್ದರು (ಏಜೆನ್ಸೀಸ್).