Childrens Day 
ದೇಶ

ಮಕ್ಕಳ ದಿನಾಚರಣೆ: ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷಣದಲ್ಲಿ ವಿದ್ಯಾರ್ಥಿಗಳು ಮಿಂಚಿಂಗ್​ Childrens Day

ಪ್ರಮುಖ ಮುಖ್ಯಾಂಶಗಳು

  • ಪುಟ್ಟ ಮಕ್ಕಳು ಅನೇಕ ರೀತಿಯ ವೇಷವನ್ನು ಧರಿಸಿ ಕಂಗೊಳಿಸುತ್ತಾರೆ
  • ನಾನು ಕವಿ, ಸಮಾಜ ಸೇವಕಿ ಮತ್ತು ಸ್ವಾತಂತ್ರ್ಯ ಹೋರಾಟಗಾರ್ತಿ
  • ಟಿಷರು ನನ್ನನ್ನು ಕೊಲ್ಲಬಹುದು. ಆದರೆ, ಅವರು ನನ್ನ ಆಲೋಚನೆಗಳನ್ನು ಕೊಲ್ಲಲು ಸಾಧ್ಯವಿಲ್ಲ
ನವದೆಹಲಿ: ಇಂದು ನವೆಂಬರ್​ 14 ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ವೇಳೆ ಶಾಲೆಯಲ್ಲಿ ಓದುವ ಪುಟ್ಟ ಮಕ್ಕಳು ಅನೇಕ ರೀತಿಯ ವೇಷವನ್ನು ಧರಿಸಿ ಕಂಗೊಳಿಸುತ್ತಾರೆ. ಅಂದಹಾಗೆ, ದೇಶದ ವಿವಿಧ ಸಾಮಾಜಿಕ ಸುಧಾರಕರು ಹಾಗೂ ಯೋಧರಂತೆ ವೇಷವನ್ನು ಧರಿಸಿದ ಕೆಲವೊಂದು ಮಕ್ಕಳು ಭಾವನಾತ್ಮಕವಾಗಿ ಭಾಷಣ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹೊರಹೊಮ್ಮಿದ್ದು, ಇದು ಭಾರತದ ಭೂತಕಾಲವನ್ನು ಅರ್ಥಪೂರ್ಣ ರೀತಿಯಲ್ಲಿ ಜೀವಂತಗೊಳಿಸುತ್ತದೆ.
ಈ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಒಬ್ಬ ಚಿಕ್ಕ ಹುಡುಗಿಯು ನಡೆದುಕೊಂಡು ಬಂದಿದ್ದು, ತನ್ನನ್ನು ಸರೋಜಿನಿ ನಾಯ್ಡು ಎಂದು ಗುರುತಿಸಿಕೊಳ್ಳುವುದರೊಂದಿಗೆ ಪ್ರಾರಂಭವಾಗುತ್ತದೆ. ನಂತರ ತನ್ನ ವಯಸ್ಸನ್ನು ಮೀರಿದ ಸೌಜನ್ಯದಿಂದ ಮಾತನಾಡಲು ಪ್ರಾರಂಭಿಸುತ್ತಾಳೆ. ನಾನು ಕವಿ, ಸಮಾಜ ಸೇವಕಿ ಮತ್ತು ಸ್ವಾತಂತ್ರ್ಯ ಹೋರಾಟಗಾರ್ತಿ. ಸ್ವಾತಂತ್ರ್ಯವು ಕೇವಲ ಕನಸಲ್ಲ, ಬದಲಾಗಿ ನಾವೆಲ್ಲರೂ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕು. ಇದು ಕೇವಲ ಕಲ್ಪನೆಯಾಗಿರಬಾರದು ಎಂದು ಭಾಷಣ ಮಾಡಿದ್ದಾಳೆ.
ನಂತರ ಒಂದು ಪುಟ್ಟ ಬಾಲಕ ವೇದಿಕೆಗೆ ಬಂದಿದ್ದು, ನಾನು ಪಂಡಿತ್ ಜವಾಹರಲಾಲ್ ನೆಹರು ಅವರ ವೇಷವನ್ನು ಧರಿಸಿದ್ದೇನೆ. ನಾನು ಭಾರತದ ಮೊದಲ ಪ್ರಧಾನಮಂತ್ರಿ. ದೇಶದ ಏಳಿಗೆಗಾಗಿ ಎಲ್ಲಾ ರೀತಿಯಲ್ಲೂ ಕಾರ್ಯ ನಿರ್ವಹಿಸುತ್ತೇನೆ ಎಂದು ತಿಳಿಸಿದರು.
ಭಗತ್ ಸಿಂಗ್ ವೇಷ ಧರಿಸಿದ ಪುಟ್ಟ ಹುಡುಗ ವೇದಿಕೆ ಮೇಲೆ ಅಚ್ಚರಿ ಮೂಡಿದ್ದಾನೆ. ಈತ ನಾನು ಭಗತ್​ಸಿಂಗ್​ ಬ್ರಿಟಿಷರು ನನ್ನನ್ನು ಕೊಲ್ಲಬಹುದು. ಆದರೆ, ಅವರು ನನ್ನ ಆಲೋಚನೆಗಳನ್ನು ಕೊಲ್ಲಲು ಸಾಧ್ಯವಿಲ್ಲ ಎಂದು ಉದ್ಘರಿಸಿ ಹೇಳುತ್ತಾನೆ. ಈ ಮಾತು ಮಗುವಿನ ಬಲವಾದ ಧ್ವನಿ ಮತ್ತು ಉರಿಯುತ್ತಿರುವ ಮುಖವು ಕ್ರಾಂತಿಕಾರಿ ನಾಯಕನ ಚೈತನ್ಯವನ್ನು ವೇದಿಕೆಯ ಮೇಲೆ ಜೀವಂತಗೊಳಿಸಿದೆ ಎಂದರೆ ತಪ್ಪಾಗದು.
ಕಾರ್ಯಕ್ರಮದ ಕೊನೆಯಲ್ಲಿ, ಒಬ್ಬ ವಿದ್ಯಾರ್ಥಿನಿ ನಾನು ಝಾನ್ಸಿಯ ರಾಣಿ ಲಕ್ಷ್ಮಿಬಾಯಿ ಎಂದು ವೇದಿಕೆಗೆ ಆಗಮಿಸುತ್ತಾಳೆ. ನಂತರ ನಾನು ನನ್ನ ಝಾನ್ಸಿಯನ್ನು ಯಾರಿಗೂ ಕೊಡುವುದಿಲ್ಲ." ಅದು ನಮಗೆ ಸೇರಿದ್ದು, ಎಂದು ಮಾತನಾಡಲು ಪ್ರಾರಂಭಿಸುತ್ತಾಳೆ. ಆಕೆಯ ಉತ್ಸಾಹಭರಿತ ಮಾತು ನಾಡಿನ ಜನರನ್ನು ಹುರಿದುಂಬಿಸಿತು.
ಈ ವೈರಲ್ ಚಿತ್ರ ಕೇವಲ ಒಂದು ಶಾಲಾ ಸಮಾರಂಭವಾಗಿತ್ತು. ಆದರೆ, ಇದು ಭಾರತದ ಭೂತಕಾಲದ ಅದ್ಭುತ ಪುನರಾವರ್ತನೆಯಾಗಿದೆ. ಈ ವಿಡಿಯೋ ಮಕ್ಕಳ ದಿನಾಚರಣೆಯ ಗೌರವಾರ್ಥವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಇದು ಮಕ್ಕಳಲ್ಲಿ ದೇಶಭಕ್ತಿಯನ್ನು ತುಂಬಿಸುವಂತಹ ಪ್ರಯತ್ನವಾಗಿದೆ.
ನೆಟಿಜನ್​ಗಳ ಪ್ರತಿಕ್ರಿಯೆ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ತಕ್ಷಣ, ಅನೇಕ ಬಳಕೆದಾರರು ಮಕ್ಕಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು ಮಕ್ಕಳು ಶಾಲೆಯಲ್ಲಿಯೇ ಈ ರೀತಿಯ ಅಭ್ಯಾಸವನ್ನು ಬೆಳೆಸಿಕೊಂಡಾಗ ಅವರಿಗೆ ದೇಶದ ಬಗ್ಗೆ ಅರಿವು ಮೂಡಿಸಲು ಸಾಧ್ಯವಾಗುತ್ತದೆ ಎಂದು ಬರೆದಿದ್ದಾರೆ (ಏಜೆನ್ಸೀಸ್​).