Chennai shopkeeper hires dancer to attract customers
- ಗ್ರಾಹಕರನ್ನು ತನ್ನತ್ತ ಸೆಳೆಯಲು ಹೊಸ ಪ್ಲ್ಯಾನ್ ಮಾಡಿಕೊಂಡ ತರಕಾರಿ ಅಂಗಡಿ ಮಾಲೀಕ.
- ಡ್ಯಾನ್ಸ್ಗಾಗಿ ಯುವತಿಯನ್ನು ನೇಮಕ ಮಾಡಿಕೊಂಡು ಸ್ಟಾಕ್ ಮಾರಾಟ.
- ವ್ಯಾಪಾರಿಯ ಈ ಬುದ್ಧಿವಂತಿಕೆ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು.
ಕೆಲವೊಮ್ಮೆ ವ್ಯಾಪಾರವು ಸುಸೂತ್ರವಾಗಿ ನಡೆಯಲು ಮಿತಿ ಮೀರಿ ಯೋಚನೆ ಮಾಡಬೇಕಾಗುತ್ತದೆ. ಆಫರ್ಗಳು, ರಿಯಾಯಿತಿ ದರಗಳು ಕೆಲಸ ಮಾಡದೇ ಇದ್ದಾಗ ಇದರಿಂದಾಚೆಗೆ ಚಿಂತಿಸಬೇಕು ಎಂದು ಎನಿಸುತ್ತದೆ. ಅದರಂತೆ ತಮಿಳುನಾಡಿನ ಚೆನ್ನೈನಲ್ಲಿ ಆಲೂಗಡ್ಡೆ ಮತ್ತು ಈರುಳ್ಳಿ ಮಾರಾಟಗಾರರು ಮಾಡಿಕೊಂಡ ಪ್ಲ್ಯಾನ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕನ್ನಡದ ಸೂರ್ಯವಂಶ ಸಿನಿಮಾದಲ್ಲಿ ಬಸ್ನಲ್ಲಿ ಟಿಕೆಟ್ ವ್ಯಾಪಾರವಾಗಲು ಒಬ್ಬ ಮಹಿಳಾ ಕಂಡಕ್ಟರ್ಅನ್ನು ನೇಮಿಸಿಕೊಂಡಂತೆ, ಚೆನ್ನೈನಲ್ಲಿ ವ್ಯಾಪಾರಿಯೊಬ್ಬರು ತಮ್ಮ ಗೋದಾಮಿನಲ್ಲಿದ್ದ ಈರುಳ್ಳಿ ಮತ್ತು ಆಲೂಗಡ್ಡೆ ಮಾರಾಟ ಮಾಡಲು, ಹೆಚ್ಚು ಗ್ರಾಹಕರನ್ನು ಸೇರಿಸಲು ಒಬ್ಬ ಮಹಿಳಾ ಡ್ಯಾನ್ಸರ್ ಅನ್ನು ನೇಮಕ ಮಾಡಿಕೊಂಡಿರುವ ವಿಚಾರ ಹಾಗೂ ಆಕೆ ನೃತ್ಯ ಮಾಡಿದ ವಿಡಿಯೋಗಳು ಸದ್ಯ ಇನ್ಸ್ಟಾಗ್ರಾಮ್, ಎಕ್ಸ್ ಸೇರಿದಂತೆ ಆನ್ಲೈನ್ ಫ್ಲಾಟ್ಫಾರ್ಮ್ನಲ್ಲಿ ಸಾಕಷ್ಟು ಸದ್ದು ಮಾಡ್ತಿದೆ.
ಮಾರ್ಕೆಟಿಂಗ್ ಮಾಡಲು ಉದ್ಯಮಿಗಳು ಸದಾ ಹೊಸತಾಗಿ ಯೋಚಿಸುತ್ತಿರುತ್ತಾರೆ. ಹಾಡುಗಳನ್ನು ಹಾಕುವ ಮುಖೇನ, ರಿಯಾಯಿತಿ ನೀಡುವ ಮೂಲಕ, ಬೈ ಒನ್ ಗೆಟ್ ಟು ಅಥವಾ ಒನ್ ಆಫರ್, ಕಡಿಮೆ ದರದಲ್ಲಿ ವಸ್ತು ಮಾರಾಟ ಸೇರಿದಂತೆ ನಾನಾ ಟ್ರಿಕ್ಸ್ ನಾವು ನಿತ್ಯ ಕಾಣುತ್ತಲೇ ಇರುತ್ತೇವೆ.
ಅದರಂತೆ ಚೆನ್ನೈನಲ್ಲಿರುವ ಅಂಗಡಿ ಮಾಲೀಕ, ಪ್ರತಿ ಬಾರಿ ಮೂಲೆ ಗುಂಪಾಗುತ್ತಿದ್ದ ಈರುಳ್ಳಿ ಮತ್ತು ಆಲೂಗಡ್ಡೆ ತರಕಾರಿ ಮೂಟೆಯನ್ನು ಖಾಲಿ ಮಾಡಲು, ಗ್ರಾಹಕರನ್ನು ಒಟ್ಟುಗೂಡಿಸಲು ಡ್ಯಾನ್ಸರ್ ಅನ್ನು ನೇಮಕ ಮಾಡಿಕೊಂಡಿದ್ದಾರೆ. ಆಕೆ ಮನ ಬಿಚ್ಚಿ ಕುಣಿದು ಜನರನ್ನು ಸೇರಿಸಿದ್ದಾರೆ. ಆಕೆ ಹಿಂದಿ ಹಾಡಿಗೆ ಮುಕ್ತವಾಗಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋಗಳನ್ನು ಹಲವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮಾಲೀಕನ ಬುದ್ಧಿವಂತಿಕೆ ಬಗ್ಗೆ ಕೆಲವರು ಕೊಂಡಾಡುತ್ತಿದ್ದರೆ, ಇನ್ನೂ ಕೆಲವರು ಮಹಿಳೆಯನ್ನು ಬಳಕೆ ಮಾಡಿಕೊಂಡಿದ್ದು ತಪ್ಪ ಎಂದು ವಾದ ಮಾಡುತ್ತಿದ್ದಾರೆ.
ಚಮ್ಮಕ್ ಚಲ್ಲೋ ಹಾಡಿಗೆ ಸಖತ್ ಡ್ಯಾನ್ಸ್
ಗ್ರಾಹಕರನ್ನು ತನ್ನ ಅಂಗಡಿಗೆ ಸೆಳೆಯಲು ನರ್ತಕಿ ರಾ ಒನ್ ಸಿನಿಮಾದ ಸೂಪರ್ ಹಿಟ್ ಹಾಡಾದ ಚಮ್ಮಕ್ ಚಲ್ಲೋ ಹಾಡಿಗೆ ಮುಕ್ತವಾಗಿ ಕುಣಿದಿದ್ದಾರೆ. ವಿಡಿಯೋದಲ್ಲಿ ಆಕೆ ಕುಣಿಯುತ್ತಿರುವುದು ಅಂಗಡಿ ಸಿಬ್ಬಂದಿ ಹಾಗೂ ಹೊರಗೆ ಜನರು ನೋಡುತ್ತಾ ನಿಂತಿರುವುದು ವಿಡಿಯೋದಲ್ಲಿ ಇದೆ.
ಒಟ್ಟಾರೆಯಾಗಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ ಮಾಲೀಕನ ಪ್ಲ್ಯಾನ್ ಸಕ್ಸಸ್ ಆಗಿದೆ. ಸಾಕಷ್ಟು ಜನರು ಆಕೆ ಡ್ಯಾನ್ಸ್ ಮಾಡುತ್ತಲೇ ಅಂಗಡಿಗೆ ಪ್ರವೇಶಿಸಿದ್ದಾರೆ. ಅವನ ಸಂಪೂರ್ಣ ಸ್ಟಾಕ್ ಈಗ ಮಾರಾಟವಾಗುತ್ತಿದೆ. ಕೆಲವೊಮ್ಮೆ, ಮಾರ್ಕೆಟಿಂಗ್ ನಿಜವಾಗಿಯೂ ಅನಿರೀಕ್ಷಿತ ರೀತಿಯಲ್ಲಿ ಕೆಲಸ ಎಂದು ನೆಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದಾರೆ, (ಏಜೆನ್ಸೀಸ್).