ಚಿನ್ನ-ಬೆಳ್ಳಿ ದರಗಳಲ್ಲಿ ಏರಿಕೆ
- ಸಂಕ್ರಾಂತಿ ಹಬ್ಬಕ್ಕೂ ಮುನ್ನವೇ ಏರಿಕೆಯ ಓಟ
- 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 1,42,150 ರೂ.
- ಇಂದು ಒಂದೇ ದಿನ ಬೆಳ್ಳಿ ಕೆಜಿಗೆ 12,000 ರೂ. ಏರಿಕೆ
ನವದೆಹಲಿ: ವರ್ಷದ ಮೊದಲ ಹಬ್ಬ ಸಿಹಿ ಸಂಕ್ರಾಂತಿಗೆ ಜನರು ಸಕಲ ತಯಾರಿ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ ಚಿನ್ನ-ಬೆಳ್ಳಿಯ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮೀರಿ ಹೊಸ ದಾಖಲೆಯತ್ತ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂಬುದನ್ನು ಒತ್ತಿ ಹೇಳುತ್ತಿವೆ. ಈ ಮಧ್ಯೆ, ಇಂದು ಒಂದೇ ದಿನ ಕೆಜಿ ಬೆಳ್ಳಿಯ ಬೆಲೆಯಲ್ಲಿ 12,000 ರೂ. ಹೆಚ್ಚಾಗಿರುವುದು ಸದ್ಯ ಗ್ರಾಹಕರನ್ನು ಅಕ್ಷರಶಃ ಕಂಗಾಲಾಗಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,690 ರೂ. ಏರಿಕೆಯಾಗಿ, 1,42,300 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,550 ರೂ. ಹೆಚ್ಚಳವಾಗಿ 1,30,450 ರೂ.ಗೆ ತಲುಪಿದೆ. ಇನ್ನು 10 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆ 1,270 ರೂ. ಏರಿಕೆಯಾಗಿ 1,06,760 ರೂ. ಆಗಿದೆ. ಇದರೊಟ್ಟಿಗೆ ಬೆಂಗಳೂರಿನಲ್ಲಿ ಕೆಜಿ ಬೆಳ್ಳಿಯ ಬೆಲೆ 10 ಸಾವಿರ ರೂ. ಏರಿದ್ದರೆ, ಹೈದರಾಬಾದ್ನಲ್ಲಿ ಬೆಳ್ಳಿ ಕೆಜಿಗೆ 12,000 ರೂ. ಹೆಚ್ಚಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ
- ಇಂದು ದೆಹಲಿಯಲ್ಲಿ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,42,300 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,30,300 ರೂ. ಆಗಿದೆ.
- ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,40,610 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,30,450 ರೂ.ಗೆ ಬಂದು ನಿಂತಿದೆ.
- ಇನ್ನು ಹೈದರಾಬಾದ್ ಸೇರಿದಂತೆ ತೆಲುಗು ರಾಜ್ಯಗಳಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,42,150 ರೂ.ಗೆ ತಲುಪಿದೆ. ಅದೇ ರೀತಿ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,30,300 ರೂ. ಆಗಿದೆ.
ಬೆಳ್ಳಿ ಬೆಲೆ
- ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಕೆಜಿ ಬೆಳ್ಳಿಯ ಬೆಲೆ 2,70,000 ರೂ.ಗೆ ಮಾರಾಟವಾಗುತ್ತಿದೆ. (10,000 ರೂ. ಏರಿಕೆ)
- ಇನ್ನು ಹೈದರಾಬಾದ್ ಮತ್ತು ಚೆನ್ನೈನಲ್ಲಿ, ಕೆಜಿ ಬೆಳ್ಳಿಯ ಬೆಲೆ 2,87,000 ರೂ.ಗೆ ತಲುಪಿದೆ. (12,000 ರೂ. ಏರಿಕೆ)
ಗಮನಿಸಿ: ಮೇಲೆ ತಿಳಿಸಲಾದ ದರಗಳು ಬೆಳಗಿನ ಮಾರುಕಟ್ಟೆಯ ವಿವರ ಆಧರಿಸಿ. ಈ ದರಗಳು ಮಧ್ಯಾಹ್ನದ ನಂತರ ಸಾಕಷ್ಟು ಬದಲಾವಣೆಗೆ ಒಳಪಟ್ಟಿರುತ್ತವೆ