ಚಿನ್ನ-ಬೆಳ್ಳಿ ಬೆಲೆ  
ದೇಶ

ಬೆಳ್ಳಿ ಬೆಲೆ 4000 ಏರಿಕೆ! ಚಿನ್ನ ಎಷ್ಟು? ದೇಶದ ಪ್ರಮುಖ ನಗರಗಳಲ್ಲಿ ಹೀಗಿದೆ ಇಂದಿನ ದರ | Gold Rates

ಪ್ರಮುಖ ಮುಖ್ಯಾಂಶಗಳು

  • 10 ಗ್ರಾಂ 24 ಕ್ಯಾರೆಟ್​ ಚಿನ್ನದ ಬೆಲೆ 1,910 ರೂ. ಹೆಚ್ಚಳ
  • ಬೆಳ್ಳಿ ಪ್ರತಿ ಕೆಜಿಗೆ 4,000 ರೂ. ಹೆಚ್ಚಳ
  • ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ
ಬೆಂಗಳೂರು: ಚಿನ್ನದ ಬೆಲೆಗಳು ಕೆಲವು ದಿನಗಳ ಕಾಲ ಸತತವಾಗಿ ಕುಸಿದಿದ್ದೇ ಆದರೂ ಇದೀಗ ಮತ್ತೆ ಏರಿಕೆಯತ್ತ ಮುಖಮಾಡಿದೆ. ಇಂದು ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, ಮಂಗಳವಾರ (ನ.25) ಬೆಲೆಗಳು ಮತ್ತೊಮ್ಮೆ ತೀವ್ರವಾಗಿ ಏರಿಕೆಯಾಗಿವೆ. 10 ಗ್ರಾಂ 24 ಕ್ಯಾರೆಟ್​ ಚಿನ್ನದ ಬೆಲೆ 1,910 ರೂ. ಹೆಚ್ಚಾದರೆ, ಬೆಳ್ಳಿ ಪ್ರತಿ ಕೆಜಿಗೆ 4,000 ರೂ. ಹೆಚ್ಚಳ ಕಂಡಿದೆ.
ಬುಲಿಯನ್ ಮಾರುಕಟ್ಟೆಯಲ್ಲಿ ಇಂದು, ಪ್ರತಿ 10 ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ 1,910 ರೂ. ಏರಿಕೆಯಾಗಿ 1,27,040 ರೂ. ವಹಿವಾಟು ನಡೆಸುತ್ತಿದೆ. ಪ್ರತಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ 1,750 ರೂ. ಏರಿಕೆಯಾಗಿ 1,16,450 ರೂ. ವಹಿವಾಟು ನಡೆಸುತ್ತಿದೆ. ಪ್ರತಿ 10 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆ 1,430 ರೂ. ಏರಿಕೆಯಾಗಿ 95,280 ರೂ. ತಲುಪಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ

  • ಇಂದು ದೆಹಲಿಯಲ್ಲಿ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,27,040 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,16,450 ರೂ. ಆಗಿದೆ.
  • ಮುಂಬೈ, ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,27,040 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,16,450 ರೂ.ಗೆ ಬಂದು ನಿಂತಿದೆ.
  • ಇನ್ನು ಹೈದರಾಬಾದ್​ ಸೇರಿದಂತೆ ತೆಲುಗು ರಾಜ್ಯಗಳಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,27,040 ರೂ.ಗೆ ತಲುಪಿದೆ. ಅದೇ ರೀತಿ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,16,450 ರೂ. ಆಗಿದೆ.

ಬೆಳ್ಳಿ 4000 ರೂ. ಕುಸಿತ

ದೆಹಲಿಯಲ್ಲಿ ಒಂದು ಕೆಜಿ ಬೆಳ್ಳಿ ಇಂದು 1,67,000 ರೂ.ಗೆ ತಲುಪಿದೆ. ಮುಂಬೈ,
ಬೆಂಗಳೂರಿನಲ್ಲಿ ಪ್ರಸ್ತುತ ಒಂದು ಕೆಜಿ ಬೆಳ್ಳಿಯ ಬೆಲೆ 1,67,000 ರೂ. ಇದೆ. ಇನ್ನು ಚೆನ್ನೈ,
ಹೈದರಾಬಾದ್‌, ತೆಲಂಗಾಣದಲ್ಲಿ 3000 ರೂ. ಇಳಿಕೆಯಾಗಿದ್ದು, ಪ್ರತಿ ಕೆಜಿ ಬೆಲೆ 1,74,000 ರೂ. ಆಗಿದೆ.
ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ.