ಗೋಲ್ಡ್​ ಬೆಲೆ 
ದೇಶ

ಚಿನ್ನ ಪ್ರಿಯರಿಗೆ ಶಾಕ್​; ಬೆಳ್ಳಿ 9000 ರೂ. ಏರಿಕೆ! ದೇಶದ ಪ್ರಮುಖ ನಗರಗಳಲ್ಲಿ ಹೀಗಿದೆ ಇಂದಿನ ದರ | Gold Rates

ಪ್ರಮುಖ ಮುಖ್ಯಾಂಶಗಳು

  • ದಿನ ಕಳೆದಂತೆ ಬೆಲೆಗಳು ಗಗನಕ್ಕೇರುತ್ತಿವೆಯೇ ವಿನಃ ಕಡಿಮೆ ಆಗುತ್ತಿಲ್ಲ
  • ಬೆಲೆಗಳು ಮಾತ್ರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮೀರುತ್ತಿದೆ
  • ದೇಶದ ಪ್ರಮುಖ ನಗರಗಳಲ್ಲಿ ಹೀಗಿದೆ ಇಂದಿನ ಚಿನ್ನದ ಬೆಲೆ
ನವದೆಹಲಿ: ಚಿನ್ನ ಪ್ರಿಯರಿಗೆ ಅಚ್ಚರಿ ತಪ್ಪಿದ್ದಲ್ಲ. ದಿನ ಕಳೆದಂತೆ ಬೆಲೆಗಳು ಗಗನಕ್ಕೇರುತ್ತಿವೆಯೇ ವಿನಃ ಕಡಿಮೆ ಆಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಮಧ್ಯೆ, ಎರಡು ದಿನಗಳಿಂದ ದರಗಳು ಇಳಿಕೆಯಾಗಿತ್ತು. ಇದನ್ನೇ ಬಲವಾಗಿ ನಂಬಿದ ಗ್ರಾಹಕರು, ಮುಂದಿನ ದಿನಗಳಲ್ಲಿ ಚಿನ್ನ-ಬೆಳ್ಳಿ ದರ ಇನ್ನಷ್ಟು ಕುಸಿಯಬಹುದು. ಇದರಿಂದ ಖರೀದಿಗೆ ಸಹಾಯವಾಗಬಹುದು ಎಂದೇ ನಿರೀಕ್ಷಿಸಿದ್ದರು. ಆದರೆ, ಬೆಲೆಗಳು ಮಾತ್ರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮೀರುತ್ತಿದೆ.
ಶನಿವಾರ (ನ.29) ಮತ್ತೊಮ್ಮೆ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೆಚ್ಚಳ ಕಂಡಿದೆ. 10 ಗ್ರಾಂ 24 ಕ್ಯಾರೆಟ್​ ಚಿನ್ನದ ಬೆಲೆಯಲ್ಲಿ 1,360 ರೂ. ಏರಿಕೆಯಾಗಿದ್ದರೆ, ಬೆಳ್ಳಿ ಪ್ರತಿ ಕೆಜಿಗೆ 9,000 ರೂ. ಜಾಸ್ತಿಯಾಗಿದೆ. ಇಷ್ಟು ದಿನ ಚಿನ್ನ ಮಾತ್ರ ಖರೀದಿದಾರರಲ್ಲಿ ಚಿಂತ ತಂದಿಟ್ಟಿತ್ತು. ಈಗ ಬೆಳ್ಳಿಯ ಸರದಿ ಶುರುವಾದಂತೆ ತೋರುತ್ತಿದೆ.
ಬುಲಿಯನ್ ಮಾರುಕಟ್ಟೆಯಲ್ಲಿ ಇಂದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,360 ರೂ. ಏರಿಕೆಯಾಗಿ 1,29,820 ರೂ.ಗೆ ತಲುಪಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,250 ರೂ. ಏರಿಕೆಯಾಗಿ 1,19,000 ರೂ. ಆಗಿದೆ. ಇನ್ನು 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,030 ರೂ. ಏರಿಕೆಯಾಗಿ 97,370 ರೂ.ನಲ್ಲಿ ವಹಿವಾಟು ನಡೆಸುತ್ತಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ

  • ಇಂದು ದೆಹಲಿಯಲ್ಲಿ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,29,970 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,19,000 ರೂ. ಆಗಿದೆ.
  • ಮುಂಬೈ, ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,29,820 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,19,150 ರೂ.ಗೆ ಬಂದು ನಿಂತಿದೆ.
  • ಇನ್ನು ಹೈದರಾಬಾದ್​ ಸೇರಿದಂತೆ ತೆಲುಗು ರಾಜ್ಯಗಳಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,29,820 ರೂ.ಗೆ ತಲುಪಿದೆ. ಅದೇ ರೀತಿ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,19,000 ರೂ. ಆಗಿದೆ.

ಬೆಳ್ಳಿ 9,000 ರೂ. ಕುಸಿತ

  • ದೆಹಲಿಯಲ್ಲಿ ಒಂದು ಕೆಜಿ ಬೆಳ್ಳಿ ಇಂದು 1,67,000 ರೂ.ಗೆ ತಲುಪಿದೆ.
  • ಮುಂಬೈ, ಬೆಂಗಳೂರಿನಲ್ಲಿ ಪ್ರಸ್ತುತ ಒಂದು ಕೆಜಿ ಬೆಳ್ಳಿಯ ಬೆಲೆ 1,67,000 ರೂ. ಇದೆ. ಇನ್ನು ಚೆನ್ನೈ,
  • ಹೈದರಾಬಾದ್‌, ತೆಲಂಗಾಣದಲ್ಲಿ 3000 ರೂ. ಇಳಿಕೆಯಾಗಿದ್ದು, ಪ್ರತಿ ಕೆಜಿ ಬೆಲೆ 1,74,000 ರೂ. ಆಗಿದೆ.
ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ.