ಚಿನ್ನ-ಬೆಳ್ಳಿ ದರ 
ದೇಶ

ಬೆಳ್ಳಿ 3 ಲಕ್ಷ ರೂ.ಗೆ ಸನ್ನಿಹಿತ! ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಗೋಲ್ಡ್​-ಸಿಲ್ವರ್ ಬೆಲೆ; ಖರೀದಿದಾರರಿಗೆ ತಲೆಬಿಸಿ

ಪ್ರಮುಖ ಮುಖ್ಯಾಂಶಗಳು

  • ಬೆಳ್ಳಿ ಬೆಲೆಯಲ್ಲಿ ಇಳಿಕೆಯ ಲಕ್ಷಣಗಳೇ ಕಾಣಿಸುತ್ತಿಲ್ಲ
  • ಬೆಳ್ಳಿ ದರದಲ್ಲಿ ಗ್ರಾಹಕರಿಗೆ ಶಾಕ್​ ಮೇಲೆ ಶಾಕ್​
  • ಚಿನ್ನಕ್ಕಿಂತ ಸಿಲ್ವರ್​ ಬೆಲೆಯೇ ಆಗುತ್ತಿವೆ ಬಲು ದುಬಾರಿ
ನವದೆಹಲಿ: ಕಳೆದ ಕೆಲವು ದಿನಗಳಿಂದ ಚಿನ್ನ-ಬೆಳ್ಳಿ ದರಗಳಲ್ಲಿ ಅಂತಹ ಇಳಿಕೆಯ ಪ್ರಮಾಣ ಕಾಣಿಸುತ್ತಿಲ್ಲ. ಒಂದು ದಿನ ಕೊಂಚ ಕುಸಿತ ಕಂಡರೆ, ಉಳಿದೆಲ್ಲ ದಿನ ಏರಿಕೆಯತ್ತವೇ ದರಗಳು ಮುಖಮಾಡಿವೆ. ನಿನ್ನೆ (ಜ.16) ಸ್ವಲ್ಪ ಮಟ್ಟಿಗೆ ಕುಸಿದಿದ್ದ ಚಿನ್ನ ಮತ್ತು ಬೆಳ್ಳಿ ದರಗಳು, ಇಂದು ಮತ್ತೆ ಹೆಚ್ಚಾಗಿವೆ.

ಚಿನ್ನ 380 ರೂ. ಏರಿಕೆ

ಇಂದು ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್​ ಚಿನ್ನದ ಬೆಲೆಯಲ್ಲಿ 380 ರೂ. ಹೆಚ್ಚಾಗಿದ್ದರೆ, ಪ್ರತಿ ಕೆಜಿ ಬೆಳ್ಳಿ ದರದಲ್ಲಿ 3,000 ಏರಿಕೆಯಾಗಿದೆ. ಇದು ಖರೀದಿದಾರರನ್ನು ತೀರ ಆತಂಕಕ್ಕೆ ದೂಡಿದೆ. ಬುಲಿಯನ್ ಮಾರುಕಟ್ಟೆಯಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 380 ರೂ. ಏರಿಕೆಯಾಗಿ, 1,43,780 ರೂ.ಗೆ ತಲುಪಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 350 ರೂ. ಏರಿಕೆಯಾಗಿ, 1,31,800 ರೂ.ಗೆ ತಲುಪಿದೆ. ಇನ್ನು 18 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 290 ರೂ. ಹೆಚ್ಚಾಗಿ, 1,07,840 ರೂ.ನಲ್ಲಿ ಮಾರಾಟವಾಗುತ್ತಿದೆ.

ಬೆಳ್ಳಿ 3 ಲಕ್ಷ ರೂ.ಗೆ ಸನ್ನಿಹಿತ

ಬೆಳ್ಳಿ ಪ್ರತಿ ಕೆಜಿಗೆ 3,000 ರೂ. ಹೆಚ್ಚಾಗಿದ್ದು, ಇದರೊಂದಿಗೆ ಬುಲಿಯನ್ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆ 2,95,000 ರೂ.ಗೆ ತಲುಪಿದೆ. ಹೈದರಾಬಾದ್ ಮತ್ತು ಚೆನ್ನೈನಲ್ಲಿ ಕೆಜಿ ಬೆಳ್ಳಿಯ ಬೆಲೆ 3,10,000 ರೂ.ಗೆ ಮಾರಾಟವಾಗುತ್ತಿದೆ. ದೆಹಲಿ, ಬೆಂಗಳೂರು, ಮುಂಬೈ ಮತ್ತು ಕೋಲ್ಕತದಂತಹ ಮಹಾ ನಗರಗಳಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆ 2,95,000 ರೂ.ಗೆ ತಲುಪಿದೆ,(ಏಜೆನ್ಸೀಸ್).