- ಹೊಸ ವರ್ಷ, ಸಂಕ್ರಾಂತಿ ಕಳೆದರೂ ಚಿನ್ನ ಬೆಲೆ ಮಾತ್ರ ಏರಿಕೆಯತ್ತ
- ಚಿನ್ನಕ್ಕೆ ಬೆಳ್ಳಿ ಪೈಪೋಟಿ, ಗ್ರಾಹಕರು ಕಂಗಾಲು
- ಮುಂದಿನ ವರ್ಷ 2 ಲಕ್ಷ ರೂ. ಗಡಿದಾಟಲಿದೆ ಚಿನ್ನದ ಬೆಲೆಗಳು
ನವದೆಹಲಿ: ಕ್ರಿಸ್‌ಮಸ್, ಹೊಸ ವರ್ಷ ಮತ್ತು ಸಂಕ್ರಾಂತಿ ಹಬ್ಬ ಸಮೀಪಿಸುತ್ತಿದ್ದಂತೆ ಚಿನ್ನದಂತ ಗ್ರಾಹಕರಿಗೆ ದೊಡ್ಡ ತಲೆನೋವು ಕಾಡಲಾರಂಭಿಸಿದೆ. ಇದಕ್ಕೆ ಕಾರಣ, ದಿನ ಕಳೆದಂತೆ ದಾಖಲೆ ಮಟ್ಟದಲ್ಲಿ ಚಿನ್ನ-ಬೆಳ್ಳಿ ಬೆಲೆಗಳು ಗಗನಕ್ಕೇರುತ್ತಿರುವುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗೋಲ್ಡ್ ದರಗಳಲ್ಲಿ ತೀವ್ರ ಏರಿಕೆ ಕಂಡುಬಂದಿವೆ.
ಮಂಗಳವಾರ (ಡಿ.23) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 2,400 ರೂ. ಏರಿಕೆಯಾಗಿದ್ದರೆ, 22 ಕ್ಯಾರೆಟ್ ಚಿನ್ನ 2,200 ರೂ. ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರವೂ ಗಮನಾರ್ಹವಾಗಿ ಹೆಚ್ಚಳ ಕಂಡಿದೆ. ಒಂದು ಔನ್ಸ್ ಚಿನ್ನದ ಬೆಲೆ 142 ಡಾಲರ್ ಏರಿದೆ. ಇದರೊಂದಿಗೆ, ಒಂದು ಔನ್ಸ್ ಚಿನ್ನದ ಬೆಲೆ ಪ್ರಸ್ತುತ 4,482 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ.
ಅತ್ತ ಚಿನ್ನದ ಬೆಲೆಗಳು ಸತತವಾಗಿ ಏರಿಕೆ ಕಂಡಿದ್ದರೆ, ಇತ್ತ ಬೆಳ್ಳಿ ಕೂಡ ಸ್ವರ್ಣಕ್ಕೆ ಭಾರೀ ಪೈಪೋಟಿ ಕೊಡುತ್ತಿದೆ. ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟ ತಲುಪುತ್ತಿರುವ ಬೆಳ್ಳಿ, ಹೊಸ ದಾಖಲೆಗಳನ್ನು ನಿರ್ಮಿಸುತ್ತಿವೆ. ಇಂದು ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, ಒಂದು ಕೆಜಿ ಬೆಳ್ಳಿಗೆ 3 ಸಾವಿರ ರೂ. ಹೆಚ್ಚಳವಾಗಿದೆ. ಕಳೆದ ಎರಡು ದಿನಗಳಿಂದ ಕೆಜಿ ಬೆಳ್ಳಿ ದರದಲ್ಲಿ 8 ಸಾವಿರ ರೂ. ಏರಿಕೆಯಾಗಿದೆ ಎಂಬುದು ನಿಜಕ್ಕೂ ಅಚ್ಚರಿಯೇ.
ಖರೀದಿಗಾರರ ಗಮನಕ್ಕೆ
ಚಿನ್ನ-ಬೆಳ್ಳಿ ಖರೀದಿಸುವ ಗ್ರಾಹಕರಿಗೆ ಈಗಾಗಲೇ ತಿಳಿದಿರುವಂತೆ ಹೊಸ ವರ್ಷದ ಕಳೆಯುತ್ತಿದ್ದಂತೆ ಗೋಲ್ಡ್ ಬೆಲೆ ಇನ್ನಷ್ಟು ದುಬಾರಿ ಆಗಬಹುದು. ವರದಿಗಳ ಪ್ರಕಾರ, 2026ರಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 2 ಲಕ್ಷ ರೂ. ಗಡಿದಾಟಿ ಹೋಗುವ ಎಲ್ಲ ಸಾಧ್ಯತೆಗಳಿವೆ. ಈ ಸಂಗತಿ ಸದ್ಯ ಚಿನ್ನ-ಬೆಳ್ಳಿ ಕೊಳ್ಳುವವರನ್ನು ತೀರ ನಿರಾಶೆಗೆ ದೂಡಿದೆ. ಆದರೆ, ಖರೀದಿಸಲು ಮುಂದಾಗುವವರೆಗೆ ಈ ಸಮಯ ನಿಜಕ್ಕೂ ಸೂಕ್ತ ಎಂದೇ ಹೇಳಬಹುದು.
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ
- ಇಂದು ದೆಹಲಿಯಲ್ಲಿ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,38,700 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,27,150 ರೂ. ಆಗಿದೆ.
- ಮುಂಬೈ, ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,38,500 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,27,000 ರೂ.ಗೆ ಬಂದು ನಿಂತಿದೆ.
- ಇನ್ನು ಹೈದರಾಬಾದ್ ಸೇರಿದಂತೆ ತೆಲುಗು ರಾಜ್ಯಗಳಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,38,550 ರೂ.ಗೆ ತಲುಪಿದೆ. ಅದೇ ರೀತಿ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,27,000 ರೂ. ಆಗಿದೆ.
ಬೆಳ್ಳಿ 3,000 ರೂ. ಹೆಚ್ಚಳ
- ದೆಹಲಿಯಲ್ಲಿ ಒಂದು ಕೆಜಿ ಬೆಳ್ಳಿ ಇಂದು 2,23,000 ರೂ.ಗೆ ತಲುಪಿದೆ.
- ಮುಂಬೈ, ಬೆಂಗಳೂರಿನಲ್ಲಿ ಪ್ರಸ್ತುತ ಒಂದು ಕೆಜಿ ಬೆಳ್ಳಿಯ ಬೆಲೆ 2,23,000 ರೂ. ಇದೆ.
- ಇನ್ನು ಚೆನ್ನೈ, ಹೈದರಾಬಾದ್, ತೆಲಂಗಾಣದಲ್ಲಿ 2,34,000 ರೂ. ಆಗಿದೆ.
ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ.