- ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ ಚಿನ್ನ-ಬೆಳ್ಳಿ ಬೆಲೆಗಳು
- ಹೊಸ ವರ್ಷ, ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿಯೂ ಇಳಿಕೆಯತ್ತ ಮುಖ ಮಾಡುತ್ತಿಲ್ಲ
- ಇಂದು ಸಹ ಚಿನ್ನ-ಬೆಳ್ಳಿ ದರದಲ್ಲಿ ಹೆಚ್ಚಳ
ನವದೆಹಲಿ: ಚಿನ್ನ-ಬೆಳ್ಳಿ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿ, ಹೊಸ ದಾಖಲೆಯನ್ನೇ ನಿರ್ಮಿಸುತ್ತಿವೆ. ಅದರಲ್ಲೂ, 2025ರಲ್ಲಿ ಭಾರೀ ಹೆಚ್ಚಳ ಕಂಡಿರುವ ಗೋಲ್ಡ್-ಸಿಲ್ವರ್ ದರಗಳು, ಗ್ರಾಹಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಈ ವರ್ಷದ ಏಪ್ರಿಲ್ನಿಂದ ಡಿಸೆಂಬರ್ ವರೆಗೆ ಏರಿಕೆಯ ಹಾದಿಯನ್ನೇ ಹಿಡಿದಿರುವ ಸ್ವರ್ಣದ ಬೆಲೆ, ಹೊಸ ವರ್ಷ ಮತ್ತು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿಯೂ ಇಳಿಕೆಯತ್ತ ಮುಖ ಮಾಡುತ್ತಿಲ್ಲ.
ಸೋಮವಾರ (ಡಿ.22) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,100 ರೂ. ಹೆಚ್ಚಳ ಕಂಡಿದ್ದರೆ, 22 ಕ್ಯಾರೆಟ್ ಚಿನ್ನದ 1,000 ರೂ. ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ದರದಲ್ಲಿ ಭಾರಿ ಬದಲಾವಣೆಗಳಾಗಿವೆ. ಒಂದು ಔನ್ಸ್ ಚಿನ್ನದ ಬೆಲೆ 63 ಡಾಲರ್ ಏರಿಕೆಯಾಗಿದೆ. ಇದರೊಂದಿಗೆ, ಒಂದು ಔನ್ಸ್ ಚಿನ್ನ 4,403 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ.
ಇನ್ನು ಬೆಳ್ಳಿ ಬೆಲೆಗಳು ರಾಕೆಟ್ ವೇಗದಲ್ಲಿ ಗಗನಕ್ಕೇರುತ್ತಿವೆ. ಈ ಮೂಲಕ ಚಿನ್ನಕ್ಕೆ ಸಖತ್ ಪೈಪೋಟಿ ನೀಡುತ್ತಿದೆ. ಒಂದು ಕೆಜಿ ಬೆಳ್ಳಿಯ ಬೆಲೆ ಈಗಾಗಲೇ 2 ಲಕ್ಷ ರೂ. ದಾಟಿದ್ದು, ಪ್ರಸ್ತುತ 2.50 ಲಕ್ಷ ರೂ.ನತ್ತ ಸಾಗಿದೆ. ಇಂದು ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, ಒಂದು ಕೆಜಿ ಬೆಳ್ಳಿ 5 ಸಾವಿರ ರೂ. ಹೆಚ್ಚಳ ಕಂಡಿದೆ.
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ
- ಇಂದು ದೆಹಲಿಯಲ್ಲಿ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,35,430 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,24,050 ರೂ. ಆಗಿದೆ.
- ಮುಂಬೈ, ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,35,280 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,24,000 ರೂ.ಗೆ ಬಂದು ನಿಂತಿದೆ.
- ಇನ್ನು ಹೈದರಾಬಾದ್ ಸೇರಿದಂತೆ ತೆಲುಗು ರಾಜ್ಯಗಳಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,35,280 ರೂ.ಗೆ ತಲುಪಿದೆ. ಅದೇ ರೀತಿ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,24,000 ರೂ. ಆಗಿದೆ.
ಬೆಳ್ಳಿ 5,000 ರೂ. ಹೆಚ್ಚಳ
- ದೆಹಲಿಯಲ್ಲಿ ಒಂದು ಕೆಜಿ ಬೆಳ್ಳಿ ಇಂದು 2,19,000 ರೂ.ಗೆ ತಲುಪಿದೆ.
- ಮುಂಬೈ, ಬೆಂಗಳೂರಿನಲ್ಲಿ ಪ್ರಸ್ತುತ ಒಂದು ಕೆಜಿ ಬೆಳ್ಳಿಯ ಬೆಲೆ 2,19,000 ರೂ. ಇದೆ.
- ಇನ್ನು ಚೆನ್ನೈ, ಹೈದರಾಬಾದ್, ತೆಲಂಗಾಣದಲ್ಲಿ 3000 ರೂ. ಇಳಿಕೆಯಾಗಿದ್ದು, ಪ್ರತಿ ಕೆಜಿ ಬೆಲೆ 2,31,000 ರೂ. ಆಗಿದೆ.
ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ.