- ಕುಸಿತ ಕಂಡಿದ್ದ ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ
- ಇಂದು ಒಂದೇ ದಿನ ಮೂರು ಪಟ್ಟು ಹೆಚ್ಚಾದ ಗೋಲ್ಡ್ ದರ
- ಹೊಸ ದಾಖಲೆ ತಲುಪಿದ ಬೆಳ್ಳಿ, ಖರೀದಿದಾರರಿಗೆ ಬಿಗ್ ಶಾಕ್
Gold Rates: ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಸಾರ್ವಕಾಲಿಕ ದಾಖಲೆ ಮಟ್ಟವನ್ನು ಮೀರಿದ್ದ ಚಿನ್ನದ ದರ ಕ್ರಮೇಣವಾಗಿ ಕುಸಿಯಲು ಶುರುವಾಗಿತ್ತು. ಇದು ಚಿನ್ನ ಪ್ರಿಯರಲ್ಲಿ ಭಾರಿ ಸಂತಸ ಮೂಡಿಸಿತ್ತು. ಆದರೀಗ, ದಿಢೀರ್ ಏರಿಕೆಯಲ್ಲಿ ಮೂರು ಪಟ್ಟು ಹೆಚ್ಚಾಗಿರುವುದು ಸದ್ಯ ಗ್ರಾಹಕರನ್ನು ಖರೀದಿಯಿಂದ ದೂರ ಉಳಿಯುವಂತೆ ಮಾಡಿದೆ.
ಅಮೆರಿಕ-ಇರಾನ್ ಡೀಲ್
ಭೀಕರ ಯುದ್ಧದಲ್ಲಿ ತೊಡಗಿದ್ದ ಅಮೆರಿಕ ಮತ್ತು ಇರಾನ್ ರಾಷ್ಟ್ರಗಳು ಶಾಂತಿ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಕಳೆದ ಒಂದೆರೆಡು ವಾರಗಳಿಂದ ಚಿನ್ನ-ಬೆಳ್ಳಿ ಬೆಲೆಗಳು ಗಣನೀಯವಾಗಿ ಇಳಿಕೆ ಕಾಣುತ್ತಿತ್ತು. ಇದನ್ನು ಗಮನಿಸಿದ ಚಿನ್ನ ಪ್ರಿಯರು ಸಹ ಖುಷಿಯಲ್ಲಿದ್ದರು. ಇದೇ ಖರೀದಿಗೆ ಸೂಕ್ತ ಸಮಯ ಎಂದು ಭಾವಿಸಿದ್ದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಒಂದು ವರ್ಷದ ಮಟ್ಟಿಗೆ ಚಿನ್ನ ಕೊಳ್ಳುವಿಕೆ ಬೇಡ ಎಂಬ ಮಾತು ಅಡ್ಡಿ ಪಡಿಸಿದೆ. ಬ್ಯಾಕ್ ಟು ಬ್ಯಾಕ್ ಕುಸಿಯುತ್ತಿದ್ದ ದರವು ಇಂದು ಒಂದೇ ದಿನ ದಾಖಲೆಯ ಮಟ್ಟದಲ್ಲಿ ಏರಿರುವುದು ಸದ್ಯ ಅಚ್ಚರಿ ತಂದಿದೆ.
ಇಂದು ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 3370 ರೂ. ಹೆಚ್ಚಾಗಿ, 1,47,150 ರೂ.ಗೆ ತಲುಪಿದೆ. ಇನ್ನು 22 ಕ್ಯಾರೆಟ್ ಬೆಲೆ 2950 ರೂ. ಹೆಚ್ಚಾಗಿ, 1,34,900 ರೂ. ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್ ದರ 1,47,000 ಆಗಿದೆ. ಇನ್ನು, ಹೈದರಾಬಾದ್‌ನಲ್ಲಿ 10 ಗ್ರಾಂ 24 ಕ್ಯಾರೆಟ್ 3,220 1,47,000 ರೂ.ಗೆ ತಲುಪಿದೆ.
5000 ರೂ. ಹೆಚ್ಚಳ
ಚಿನ್ನದ ಜೊತೆಗೆ ಬೆಳ್ಳಿಯೂ ಗಮನಾರ್ಹವಾಗಿ ಹೆಚ್ಚಳ ಕಂಡಿದೆ. ದೆಹಲಿ, ಬೆಂಗಳೂರು ಮತ್ತು ಮುಂಬೈ ನಗರಗಳಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆ 5,000 ರೂ. ಏರಿಕೆಯಾಗಿದ್ದು, 2,50,000 ರೂ.ಗೆ ತಲುಪಿದೆ. ಇನ್ನು ತೆಲುಗು ರಾಜ್ಯಗಳಲ್ಲಿ ಕೆಜಿ ಬೆಳ್ಳಿಯ ಬೆಲೆ 2,60,000 ರೂ. ಆಗೋಗಿದೆ. ಈ ಬೆಲೆ ಏರಿಕೆಯಿಂದ ಚಿನ್ನ-ಬೆಳ್ಳಿ ಗ್ರಾಹಕರು ಸದ್ಯ ಖರೀದಿಸುವುದೋ, ಬೇಡವೋ ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ,(ಏಜೆನ್ಸೀಸ್).