Gold Rates: ಇರಾನ್ ಮತ್ತು ಅಮೆರಿಕ ನಡುವೆ ಶಾಂತಿ ಒಪ್ಪಂದದ ಬೆನ್ನಲ್ಲೇ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಏರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇದೀಗ ಭಾರಿ ಇಳಿಕೆಯಾಗಿದೆ. ಮದುವೆ ಮತ್ತು ಶುಭ ಕಾರ್ಯಗಳಲ್ಲಿ ಸಖತ್ ಬಿಜಿಯಾಗಿರುವ ಚಿನ್ನ ಪ್ರಿಯರಿಗೆ ಇದು ಖರೀದಿಗೆ ಸೂಕ್ತ ಸಮಯವಾಗಿದ್ದೇ ಆದರೂ ಒಂದು ವರ್ಷದ ಮಟ್ಟಿಗೆ ಚಿನ್ನದತ್ತ ತಲೆಯೂ ಹಾಕಬೇಡಿ ಎಂಬ ಪ್ರಧಾನಿ ಮೋದಿ ಮಾತು ಸದ್ಯ ಗ್ರಾಹಕರನ್ನು ಕಟ್ಟಿಹಾಕಿದೆ.
ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಗಳು ಕುಸಿಯುತ್ತಿದ್ದು, ಇಂದೂ ಕೂಡ ಕುಸಿತ ಕಂಡಿದೆ. 24 ಕ್ಯಾರೆಟ್ 10 ಗ್ರಾಂ 2,070 ರೂ. ಇಳಿದರೆ, ಬೆಳ್ಳಿ ಕೆಜಿಗೆ 5 ಸಾವಿರ ರೂ. ಕಡಿಮೆಯಾಗಿದೆ. ಮಂಗಳವಾರ ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 22 ಕ್ಯಾರೆಟ್ ಗ್ರಾಂ ಬೆಲೆ 1,900 ರೂ.ಗಳಷ್ಟು ಡೌನ್ಫಾಲ್ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ದರ ಕುಸಿದಿದ್ದು, ಒಂದು ಔನ್ಸ್ ದರ 50 ಡಾಲರ್ಗೆ ಇಳಿದಿದೆ. ಇದರೊಂದಿಗೆ, ಒಂದು ಔನ್ಸ್ ಚಿನ್ನದ ಬೆಲೆ ಈಗ 4,137 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳು ಎಷ್ಟಾಗಿದೆ ಎಂದು ನೋಡುವುದಾದರೆ, ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 1,46,060 ರೂ.ಗಳಾಗಿದ್ದರೆ, 22 ಕ್ಯಾರೆಟ್‌ನ ಚಿನ್ನದ ಬೆಲೆ 1,33,900 ರೂ. ಆಗಿದೆ. ಇನ್ನು ಬೆಂಗಳೂರು, ಮುಂಬೈ, ಕೋಲ್ಕತ ಮತ್ತು ಚೆನ್ನೈ ನಗರಗಳಲ್ಲಿ, 24 ಕ್ಯಾರೆಟ್‌ನ 10 ಗ್ರಾಂ ದರ 1,47,930 ರೂ.ಗೆ ತಲುಪಿದ್ದರೆ, 22 ಕ್ಯಾರೆಟ್‌ನ ಬೆಲೆ 1,35,600 ರೂ.ಗೆ ತಲುಪಿದೆ. ಇನ್ನು ತೆಲುಗು ರಾಜ್ಯಗಳಾದ ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣ ನಗರಗಳಲ್ಲಿ 24 ಕ್ಯಾರೆಟ್ ಗೋಲ್ಡ್ 1,45,910 ರೂ.ಗೆ ತಲುಪಿದ್ದು, 22 ಕ್ಯಾರೆಟ್ 1,33,750 ರೂ. ಆಗಿದೆ.
ಬೆಳ್ಳಿ ಬೆಲೆ ಹೀಗಿದೆ
ಬೆಳ್ಳಿ ಬೆಲೆಗಳನ್ನು ನೋಡುವುದಾದರೆ, ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, ನವದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ, ಒಂದು ಕೆಜಿ ಬೆಳ್ಳಿಯ ಬೆಲೆ 2,45,000 ರೂ. ತಲುಪಿದೆ. ಅದೇ ಚೆನ್ನೈನಲ್ಲಿ, 2,50,000 ರೂ. ಆಗಿದೆ. ಇನ್ನು ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿ ಕೆಜಿ ಬೆಳ್ಳಿಯು 2,50,000 ರೂ.ಗೆ ತಲುಪಿದೆ.
ನಿಮ್ಮ ಗಮನಕ್ಕೆ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿನ ಬದಲಾವಣೆಗಳು. ಚಿನ್ನ-ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ. ಹೀಗಾಗಿ ವರದಿಗಳನ್ನು ಸೂಕ್ಷ್ಮವಾಗಿ ಗಮನಿಸಿ.