IPL auction: ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆಯಲಿರುವ ಐಪಿಎಲ್ 2026 ರ ಹರಾಜಿನಲ್ಲಿ 200 ಕ್ಕೂ ಹೆಚ್ಚು ಭಾರತೀಯ ಆಟಗಾರರು ಹರಾಜಾಗಲಿದ್ದಾರೆ. 10 ಐಪಿಎಲ್ ತಂಡಗಳು ಗರಿಷ್ಠ 77 ಆಟಗಾರರನ್ನು ಸಹಿ ಮಾಡಬಹುದು. ಅಲ್ಲದೆ, ಅನೇಕ ಉನ್ನತ ಮಟ್ಟದ ಕ್ಯಾಪ್ಡ್ ಭಾರತೀಯ ಮತ್ತು ವಿದೇಶಿ ಆಟಗಾರರ ಜೊತೆಗೆ, ಅನೇಕ ಕ್ಯಾಪ್ಡ್ ಆಟಗಾರರು ಈ ವರ್ಷದ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಸೇಲ್ ಆಗುವ ನಿರೀಕ್ಷೆಯಿದೆ.
ಯಶ್ ಧುಲ್ (ದೆಹಲಿ): ಯಶ್ ಧುಲ್ ಈ ಹಿಂದೆ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದಾರೆ. ಡೆಲ್ಲಿ ಪರ ಹಾಗೂ ಡಿಪಿಎಲ್‌ನಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಅವರು ನೀಡಿದ ಪ್ರದರ್ಶನದಿಂದ ಪ್ರಭಾವಿತರಾಗಿದ್ದಾರೆ. ಕಳೆದ ವರ್ಷ ನಡೆದ ಮೆಗಾ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದರು. ಆದರೆ ಈ ಬಾರಿ ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆಯಿದೆ.
ಔಕಿಬ್ ನಬಿ (ಜಮ್ಮು ಮತ್ತು ಕಾಶ್ಮೀರ): ಔಕಿಬ್ ನಬಿ ಇನ್ನೂ ಐಪಿಎಲ್‌ಗೆ ಪಾದಾರ್ಪಣೆ ಮಾಡಿಲ್ಲ. ಅವರು ಜೆ & ಕೆ ಪರ ರಣಜಿ ಟ್ರೋಫಿ ಮತ್ತು ಎಸ್‌ಎಂಎಟಿಯಲ್ಲಿನ ತಮ್ಮ ಪ್ರದರ್ಶನದಿಂದ ಪ್ರಭಾವಿಸಿದ್ದಾರೆ. ಐಪಿಎಲ್ 2026 ಹರಾಜಿನಲ್ಲಿ ಒಳ್ಳೆಯ ಮೊತ್ತಕ್ಕೆ ಸೇಲ್ ಆಗುವ ನಿರೀಕ್ಷೆ ಇದೆ.
ಅಭಿನವ್ ಮನೋಹರ್ (ಕರ್ನಾಟಕ): ಮಾಜಿ ಜಿಟಿ ಮತ್ತು ಎಸ್‌ಆರ್‌ಎಚ್ ಬ್ಯಾಟ್ಸ್‌ಮನ್ ಅಭಿನವ್ ಮನೋಹರ್ ಇದುವರೆಗೆ ಆಡಿರುವ 54 ಟಿ20 ಪಂದ್ಯಗಳಲ್ಲಿ 817 ರನ್ ಗಳಿಸಿದ್ದಾರೆ. ಅಲ್ಲದೆ, ಜಿಟಿ ಜೊತೆಗಿನ ಅವಧಿಯಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದರು. ಆದರೆ ಕಳೆದ ಋತುವಿನಲ್ಲಿ ಸನ್‌ರೈಸರ್ಸ್‌ಗಾಗಿ ನಿರೀಕ್ಷೆಯಂತೆ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.
ಈಡನ್ ಆಪಲ್ ಟಾಮ್ (ಕೇರಳ): 20 ವರ್ಷದ ಕೇರಳದ ವೇಗಿ ಈಡನ್ ಆಪಲ್ ಟಾಮ್ ಕಳೆದ ಋತುವಿನ ರಣಜಿ ಟ್ರೋಫಿಯಲ್ಲಿ ತಮ್ಮ ಪ್ರದರ್ಶನದಿಂದ ಪ್ರಭಾವಿಸಿದ್ಧಾರೆ. ಇವರು ಇನ್ನೂ ಅಧಿಕೃತ ಟಿ20 ಪಂದ್ಯವನ್ನು ಆಡಿಲ್ಲ.
ವಿಘ್ನೇಶ್ ಪುತ್ತೂರು (ಕೇರಳ): ಕೇರಳದ ವಿಘ್ನೇಶ್ ಪುತ್ತೂರು ಐಪಿಎಲ್ 2025 ರಲ್ಲಿ ಮುಂಬೈ ಇಂಡಿಯನ್ಸ್ ಪರ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಪ್ರಭಾವಿಸಿದ್ದರು. ಈ ವರ್ಷದ ಹರಾಜಿನಲ್ಲಿ ಅವರ ಸೇವೆಯನ್ನು ಪಡೆದುಕೊಳ್ಳಲು ಅನೇಕ ತಂಡಗಳು ಆಸಕ್ತಿ ವಹಿಸುತ್ತವೆ.
ಸಿಮರ್ಜೀತ್ ಸಿಂಗ್ (ದೆಹಲಿ): ಸಿಮರ್ಜೀತ್ ಸಿಂಗ್ ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿಯನ್ನು ಪ್ರತಿನಿಧಿಸುತ್ತಾರೆ. ಇದುವರೆಗೆ ಆಡಿರುವ 42 ಟಿ20 ಪಂದ್ಯಗಳಲ್ಲಿ 47 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದಾರೆ. ಇವರು ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸ್ ಕ್ರಿಕೆಟ್ ಲೀಗ್‌ನಲ್ಲಿ ಸಿಎಸ್‌ಕೆ ಮತ್ತು ಎಸ್‌ಆರ್‌ಹೆಚ್ ಪರ ಆಡಿದ್ದಾರೆ.
ಆಕಾಶ್ ಮಧ್ವಾಲ್ (ಉತ್ತರಾಖಂಡ): ಆಕಾಶ್ ಮಧ್ವಾಲ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದಾರೆ. ಉತ್ತರಾಖಂಡ ಮೂಲದ ಈ ವೇಗಿ ಇದುವರೆಗೆ ಆಡಿರುವ 56 ಐಪಿಎಲ್ ಪಂದ್ಯಗಳಲ್ಲಿ 61 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಅನ್ಮೋಲ್‌ಪ್ರೀತ್ ಸಿಂಗ್ (ಪಂಜಾಬ್): ಅನ್ಮೋಲ್‌ಪ್ರೀತ್ ಸಿಂಗ್ ಐಪಿಎಲ್‌ನಲ್ಲಿ ಮುಂಬೈ ಮತ್ತು ಎಸ್‌ಆರ್‌ಎಚ್ ತಂಡವನ್ನು ಪ್ರತಿನಿಧಿಸಿದ್ದಾರೆ. ಪಂಜಾಬ್ ಮೂಲದ ಈ ಟಾಪ್-ಆರ್ಡರ್ ಬ್ಯಾಟ್ಸ್‌ಮನ್ SMAT 2025 ರಲ್ಲಿ ಅದ್ಬುತ ಪ್ರದರ್ಶನ ನೀಡಿದ್ದಾರೆ. ಒಟ್ಟಾರೆಯಾಗಿ, ಅವರು 78 ಟಿ20 ಪಂದ್ಯಗಳಲ್ಲಿ 1623 ರನ್ ಗಳಿಸಿದ್ದಾರೆ,(ಏಜೆನ್ಸೀಸ್).