ಚಿನ್ನ ಖರೀದಿಸಬೇಡಿ ಎಂದ ಪ್ರಧಾನಿ ಮೋದಿ
- ಒಂದು ವರ್ಷದ ಮಟ್ಟಿಗೆ ಅನಗತ್ಯವಾಗಿ ಚಿನ್ನವನ್ನು ಖರೀದಿ ಮಾಡಬೇಡಿ
- ಪ್ರಧಾನಿ ನರೇಂದ್ರ ಮೋದಿ ಕರೆ ಬೆನ್ನಲ್ಲೇ ಚಿನ್ನ ಸತತ ಕುಸಿತ
- ಇಂದಿನ ಚಿನ್ನ-ಬೆಳ್ಳಿ ದರದಲ್ಲಿ ಎಷ್ಟು ಕುಸಿತ?
Gold Price Drop: ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿರುವ ಅಮೆರಿಕ, ಶಾಂತಿಯ ಒಪ್ಪಂದವನ್ನು ತಿರಸ್ಕರಿಸುವ ಮೂಲಕ ಸಮರವನ್ನು ಮುಂದುವರಿಸಿದೆ. ಸದ್ಯ ಅಮೆರಿಕ ಅಧ್ಯಕ್ಷನ ಈ ನಡೆ ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತು ಕಚ್ಚಾ ತೈಲ ಬೆಲೆಗಳ ಏರಿಕೆಗೆ ದೊಡ್ಡ ಕಾರಣವಾಗಿದೆ. ಇದನ್ನು ಗಮನಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ, ದೇಶದ ಜನತೆಗೆ ಒಂದು ವರ್ಷದ ಮಟ್ಟಿಗೆ ಅನಗತ್ಯವಾಗಿ ಚಿನ್ನವನ್ನು ಖರೀದಿ ಮಾಡಬೇಡಿ ಎಂದು ಕರೆ ನೀಡಿದರು. ಪ್ರಧಾನಿಯ ಕರೆ ಬೆನ್ನಲ್ಲೇ ಅತ್ತ ಚಿನ್ನದ ಬೆಲೆಗಳು ಸತತವಾಗಿ ಕುಸಿಯುತ್ತಿವೆ.
ಒಂದು ವರ್ಷದ ಮಟ್ಟಿಗೆ ಚಿನ್ನ ಮತ್ತು ಬೆಳ್ಳಿ ಸಹವಾಸಕ್ಕೆ ಹೋಗಬೇಡಿ ಎಂದಿರುವ ಮೋದಿ, ಅನಗತ್ಯವಾಗಿ ಚಿನ್ನದ ಕೊಳ್ಳುವಿಕೆ ಬೇಡ ಎಂದು ಹೇಳಿರುವುದು ಗ್ರಾಹಕರನ್ನು ಅಕ್ಷರಶಃ ಗೊಂದಲಕ್ಕೆ ದೂಡಿದೆ. ಪ್ರಧಾನಿಯ ಖರೀದಿ ಬೇಡವೆಂಬ ಕರೆಯ ಬಳಿಕ ಸತತವಾಗಿ ಕುಸಿಯುತ್ತಿರುವ ಚಿನ್ನ ಮತ್ತು ಬೆಳ್ಳಿ ಬೆಲೆಗಳಿಂದ ಖರೀದಿದಾರರ ಪರಿಸ್ಥಿತಿ, ಅಳುವುದೋ, ನಗುವುದೋ ನೀವೇ ಹೇಳಿ? ಎನ್ನುವಂತಾಗಿದೆ.
ಗೋಲ್ಡ್ ಮತ್ತು ಬೆಳ್ಳಿ ಬೆಲೆಗಳು ಕಡಿಮೆ ಆಗುತ್ತಿರುವುದು ಗ್ರಾಹಕರಿಗೆ ಖುಷಿ ವಿಷಯವೇ ಆದರೂ ಪ್ರಧಾನಿ ಸದ್ಯಕ್ಕೆ ಖರೀದಿ ಬೇಡ ಎಂದು ಹೇಳಿರುವುದು ಜನರನ್ನು ಕೊಳ್ಳದಂತೆ ಕಟ್ಟಿಹಾಕಿದೆ. ದೇಶದ ಆರ್ಥಿಕ ಸ್ಥಿತಿ-ಗತಿಯನ್ನು ಗಮನದಲ್ಲಿಟ್ಟುಕೊಂಡರೆ, ಮುಂದಿನ ದಿನಗಳಲ್ಲಿ ಚಿನ್ನ-ಬೆಳ್ಳಿ ದರಗಳು ಎಷ್ಟೇ ಕುಸಿದರೂ ಖರೀದಿ ದೂರದ ಮಾತೇ. ಹಾಗಿದ್ದರೆ, ಇಂದಿನ ದರಗಳಲ್ಲಿ ಎಷ್ಟು ಕುಸಿದಿದೆ? ಎಂಬುದರ ವಿವರ ಹೀಗಿದೆ ನೋಡಿ.
ಯಾವ ದೇಶಗಳಲ್ಲಿ ಎಷ್ಟಿದೆ?
ಶನಿವಾರ (ಮೇ.16) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ ಚಿನ್ನದ 10 ಗ್ರಾಂಗೆ 980 ರೂ. ಇಳಿಕೆಯಾಗಿದ್ದರೆ, 22 ಕ್ಯಾರೆಟ್ ಚಿನ್ನದ 900 ರೂ. ಕುಸಿದಿದೆ. ಇದರೊಂದಿಗೆ, ಎರಡು ದಿನಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ಸುಮಾರು 15,000 ರೂ. ಕುಸಿತ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನ 30 ಡಾಲರ್ ಇಳಿದಿದ್ದು, ಒಂದು ಔನ್ಸ್ ಚಿನ್ನದ ಬೆಲೆ ಪ್ರಸ್ತುತ 4,715 ಡಾಲರ್ ಆಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, 24 ಕ್ಯಾರೆಟ್ ಚಿನ್ನದ 10 ಗ್ರಾಂ ಚಿನ್ನದ ಬೆಲೆ 1,57,080 ರೂ. ಆಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ 1,44,000 ರೂ.ಗೆ ತಲುಪಿದೆ. ಮುಂಬೈ, ಬೆಂಗಳೂರು, ಕೋಲ್ಕತ ಮತ್ತು ಚೆನ್ನೈ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 1,56,930 ರೂ. ಆಗಿದೆ. ಅದೇ 22 ಕ್ಯಾರೆಟ್ ಚಿನ್ನದ ಬೆಲೆ 1,43,850 ರೂ. ಆಗಿದೆ.
10,000 ರೂ. ಕುಸಿತ
ಇನ್ನು ಬೆಳ್ಳಿ ಬೆಲೆಗಳನ್ನು ನೋಡಿದರೆ, ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 2,90,000 ರೂ.ಗೆ ತಲುಪಿದೆ. ದೆಹಲಿ, ಮುಂಬೈ ಮತ್ತು ಬೆಂಗಳೂರು ನಗರಗಳಲ್ಲಿ ಪ್ರಸ್ತುತ ಒಂದು ಕೆಜಿ ಬೆಳ್ಳಿಯ ದರ 2,80,000 ರೂ. ಆಗಿದೆ. ಚೆನ್ನೈನಲ್ಲಿ 2,90,000 ರೂ.ನಲ್ಲಿ ವಹಿವಾಟು ನಡೆಸುತ್ತಿದೆ,(ಏಜೆನ್ಸೀಸ್).
ಗಮನಿಸಿ: ಮೇಲೆ ತಿಳಿಸಲಾದ ದರಗಳು ಬೆಳಗಿನ ಮಾರುಕಟ್ಟೆಯ ವಿವರ ಆಧರಿಸಿ. ಈ ದರಗಳು ಮಧ್ಯಾಹ್ನದ ನಂತರ ಸಾಕಷ್ಟು ಬದಲಾವಣೆಗೆ ಒಳಪಟ್ಟಿರುತ್ತವೆ