ವೃದ್ಧೆಯ ಚಿನ್ನದ ಸರ ಕದ್ದ ಸವಾರ 
ದೇಶ

ಅಜ್ಜಿಗೆ ಅಡ್ರೆಸ್​ ಕೇಳುವ ನೆಪದಲ್ಲಿ ಚೈನ್ ಸ್ನ್ಯಾಚಿಂಗ್; ಸ್ಕೂಟರ್‌ ಸವಾರನ ಕೃತ್ಯ ಸಿಸಿಟಿವಿಯಲ್ಲಿ ಸೆರೆ | Dehradun Chain Snatching

ಪ್ರಮುಖ ಮುಖ್ಯಾಂಶಗಳು

  • ವಿಳಾಸ ಕೇಳುವ ನೆಪದಲ್ಲಿ ವೃದ್ಧೆಯ ಚಿನ್ನದ ಸರ ಕದ್ದ ಖದೀಮ
  • ಸುಮಾರು 20 ಗ್ರಾಂ ತೂಕದ ಚಿನ್ನದ ಸರ ಕದ್ದು ಪರಾರಿ
  • ಎಳೆದಾಟದಲ್ಲಿ ರಸ್ತೆಗೆ ಬಿದ್ದ 75 ವರ್ಷದ ವೃದ್ಧೆ

ಉತ್ತರಾಖಂಡ

ಡೆಹ್ರಾಡೂಸ್​ನ

ವಸಂತ್ ವಿಹಾರ್ ಫೇಸ್-2ನಲ್ಲಿ ನಡೆದಿದೆ. ಆಗಸ್ಟ್ 14ರಂದು ನಡೆದ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಇದೀಗ ವೈರಲ್ ಆಗಿದೆ.

75 ವರ್ಷದ ರಾಜರಾಣಿ ಮಿತ್ತಲ್ ಎಂಬ ಮಹಿಳೆ ವಾಕಿಂಗ್ ಸ್ಟಿಕ್ ಹಿಡಿದು ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಈ ವೇಳೆ ನಂಬರ್ ಪ್ಲೇಟ್ ಇಲ್ಲದ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಅವರನ್ನು ದಾಟಿ ಮುಂದೆ ಹೋಗಿದ್ದಾನೆ. ಸ್ವಲ್ಪ ದೂರ ಹೋಗಿ ಮತ್ತೆ ಸ್ಕೂಟರ್ ತಿರುಗಿಸಿಕೊಂಡು ಬಂದು ಮಹಿಳೆಯ ಬಳಿ ನಿಲ್ಲಿಸಿದ್ದಾನೆ. ದಾರಿ ಕೇಳುವ ನೆಪದಲ್ಲಿ ಏಕಾಏಕಿ ಕುತ್ತಿಗೆಯಲ್ಲಿದ್ದ ಸುಮಾರು 20 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಸ್ಕೂಟರ್​ನಲ್ಲಿ ಪರಾರಿಯಾಗಿದ್ದಾನೆ.

ಎಳೆದಾಟದಲ್ಲಿ ನೆಲಕ್ಕೆ ಬಿದ್ದ ವೃದ್ಧೆ

ಸರ ಕಸಿಯುವ ವೇಳೆ ವೃದ್ಧೆ ಪ್ರತಿರೋಧ ತೋರಿಸಿದ್ದು, ಎಳೆದಾಟದಲ್ಲಿ ಅವರು ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಬಳಿಕ ಅವರು ಹಲವು ಬಾರಿ ಎದ್ದು ನಿಲ್ಲಲು ಪ್ರಯತ್ನಿಸಿದ್ದು ನೋಡಿದರೆ ಅಯ್ಯೋ ಎನಿಸುತ್ತದೆ. ಆರೋಪಿ ಪರಾರಿಯಾಗುತ್ತಿದ್ದಂತೆ ಕಂಗಾಲಾದ ಹಿರಿಯ ಜೀವ ಕೆಲಕಾಲ ರಸ್ತೆಯಲ್ಲೇ ಗೋಳಾಡಿದ್ದಾರೆ. ನಂತರ ಆಕೆಯ ಪುತ್ರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

24 ಗಂಟೆಯಲ್ಲಿ ಎರಡು ಸರಗಳ್ಳತನ ಕೇಸ್​

ಇನ್ನು, ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ನಂಬರ್ ಪ್ಲೇಟ್ ಇಲ್ಲದ ಗಾಡಿಯಾದ್ದರಿಂದ ಸವಾರನ ಗುರುತು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ. ಈ ಘಟನೆ ನಡೆದ 24 ಗಂಟೆಯಲ್ಲೇ ಇದೇ ಜಾಗದಲ್ಲಿ ಮತ್ತೊಂದು ಚೈನ್ ಸ್ನ್ಯಾಚಿಂಗ್ ಪ್ರಕರಣ ವರದಿಯಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ,(ಏಜೆನ್ಸೀಸ್​).