ಪ್ರಧಾನಿ ಮೋದಿ ಮತ್ತು ಅಶೋಕ್ ಕುಮಾರ್ ಲಹರಿ  
ದೇಶ

ನೀತಿ ಆಯೋಗವನ್ನು ಪುನರ್​​ರಚಿಸಿದ ಕೇಂದ್ರ ಸರ್ಕಾರ; ಉಪಾಧ್ಯಕ್ಷರಾಗಿ ಅಶೋಕ್ ಕುಮಾರ್ ಲಹರಿ ನೇಮಕ | NITI Aayog

ನವದೆಹಲಿ: ದೇಶದ ಅತ್ಯುನ್ನತ ನೀತಿ ನಿರೂಪಣಾ ಸಂಸ್ಥೆಯಾದ ನೀತಿ ಆಯೋಗವನ್ನು ಕೇಂದ್ರ ಸರ್ಕಾರ ಶನಿವಾರ(ಏ. 25) ಪುನರ್​ ರಚಿಸಿದ್ದು, ಆಯೋಗದ ಉಪಾಧ್ಯಕ್ಷರನ್ನಾಗಿ ಅಶೋಕ್ ಕುಮಾರ್ ಲಹರಿ ಅವರನ್ನು ನೇಮಕ ಮಾಡಿದೆ.
ಪಶ್ಚಿಮ ಬಂಗಾಳದ ಬಿಜೆಪಿ ಶಾಸಕರಾಗಿರುವ ಡಾ. ಅಶೋಕ್ ಕುಮಾರ್ ಲಹಿರಿ ಈ ಹಿಂದೆ ಕೇಂದ್ರ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೆಲಸ ಮಾಡಿದ್ದರು. ಅವರ ಜೊತೆಗೆ ಏಮ್ಸ್ ನಿರ್ದೇಶಕ ಎಂ. ಶ್ರೀನಿವಾಸ್, ಮಾಜಿ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ, ಖ್ಯಾತ ವಿಜ್ಞಾನಿಗಳಾದ ಕೆ.ವಿ. ರಾಜು, ಡಾ. ಗೋಬರ್ಧನ್ ದಾಸ್ ಹಾಗೂ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯದರ್ಶಿ ಅಭಯ್ ಕರಮ್ಡಿಕರ್ ಅವರನ್ನು ಸದಸ್ಯರಾಗಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ನೀತಿ ಆಯೋವನ್ನು ಪುನರ್ ರಚನೆಯನ್ನು ಘೋಷಿಸಿದ್ದು, ಆಯೋಗದ ಸದಸ್ಯರಾಗಿ ನೇಮಕಗೊಂಡವರನ್ನು ಅಭಿನಂದಿಸಿದ್ದಾರೆ (ಏಜೆನ್ಸೀಸ್).