ಪ್ರವೀಣ್ ಸೂದ್  
ದೇಶ

ಸಿಬಿಐ ಮುಖ್ಯಸ್ಥರಾಗಿ ಪ್ರವೀಣ್ ಸೂದ್ ಮುಂದುವರಿಕೆ; ಮತ್ತೆ ಒಂದು ವರ್ಷ ಅಧಿಕಾರವಧಿ ವಿಸ್ತರಿಸಿದ ಕೇಂದ್ರ ಸರ್ಕಾರ | CBI chief

ನವದೆಹಲಿ: ಇತ್ತೀಚೆಗೆ ಕೇಂದ್ರ ತನಿಖೆ ದಳದ(CBI) ಮುಂದಿನ ನಿರ್ದೇಶಕರ ನೇಮಕದ ಬಗ್ಗೆ ರಾಹುಲ್ ಗಾಂಧಿ ಅಸಮ್ಮಿತಿ ವ್ಯಕ್ತಪಡಿಸಿದ ಹಿನ್ನೆಲೆ ಪ್ರಸ್ತುತ ಮುಖ್ಯಸ್ಥರಾಗಿರುವ ಪ್ರವೀಣ್ ಸೂದ್ ಅವರ ಅಧಿಕಾರಾವಧಿಯನ್ನು ಕೇಂದ್ರ ಸರ್ಕಾರ ಮತ್ತೆ ಒಂದು ವರ್ಷ ವಿಸ್ತರಿಸಿ ಆದೇಶ ಹೊರಡಿಸಿದೆ.
ಈ ಕುರಿತು ಆದೇಶ ಹೊರಡಿಸಿರುವ ಕೇಂದ್ರ ಸಿಬ್ಬಂದಿ ಸಚಿವಾಲಯ, ಆಯ್ಕೆ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಕ್ಯಾಬಿನೆಟ್ ನೇಮಕಾತಿ ಸಮಿತಿ (ಎಸಿಸಿ), ಸೂದ್ ಅವರ ಸೇವಾ ಅವಧಿಯನ್ನು ಮೇ 24, 2026 ರ ನಂತರ ಒಂದು ವರ್ಷದ ಅವಧಿಗೆ ವಿಸ್ತರಿಸಲು ಅನುಮೋದನೆ ನೀಡಿದೆ ಎಂದು ಹೇಳಿದೆ.
ಇದು ಪ್ರವೀಣ್ ಸೂದ್ ಅವರ ಎರಡನೇ ಅಧಿಕಾರ ವಿಸ್ತರಣೆಯಾಗಿದೆ. 2023 ಮೇ 25ರಂದು ಎರಡು ವರ್ಷಗಳ ಅವಧಿಗೆ ಸೂದ್ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಕಳೆದ ವರ್ಷ ಅವರಿಗೆ ಒಂದು ವರ್ಷದ ವಿಸ್ತರಣೆಯನ್ನು ನೀಡಲಾಯಿತು.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನೊಳಗೊಂಡ ಆಯ್ಕೆ ಸಮಿತಿಯ ಸಭೆಯ ನಡೆದಿತ್ತು. ಸಭೆಯ ಬಳಿಕ ನಿರ್ದೇಶಕರ ಆಯ್ಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪ್ರಧಾನಿಗೆ ಪತ್ರ ಬರೆದಿದ್ದ ರಾಹುಲ್ ಗಾಂಧಿ, ಪಕ್ಷಪಾತದ ಪ್ರಕ್ರಿಯೆ ಭಾಗವಾಗಲು ಬಯಸಲ್ಲ ಎಂದಿದ್ದರು (ಏಜೆನ್ಸೀಸ್).