Crores Found At Suspended Hyderabad Official's Home 
ದೇಶ

ಅಮಾನತುಗೊಂಡ ತಹಶೀಲ್ದಾರ್​​​​ ಮನೆಯಲ್ಲಿ 5.05 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ; ಚಿನ್ನ, ವಜ್ರ ಕಂಡು ಅಧಿಕಾರಿಗಳೇ ಸುಸ್ತು..Hyderabad

ಪ್ರಮುಖ ಮುಖ್ಯಾಂಶಗಳು

  • ಅಕ್ರಮ ಆಸ್ತಿ ಹೊಂದಿರುವ ಆರೋಪ, ಹೈದರಾಬಾದ್​ ತಹಶೀಲ್ದಾರ್ ಮನೆ ಮೇಲೆ ದಾಳಿ
  • ಅಮಾನತುಗೊಂಡಿದ್ದ ತಹಶೀಲ್ದಾರ್​ ನಿವಾಸದಲ್ಲಿ 5.05 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ
  • ಈ ಹಿಂದೆ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದ ಅಮಾನತುಗೊಂಡಿದ್ದ ತಹಶೀಲ್ದಾರ್​
ಹೈದರಾಬಾದ್: ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ಹೈದರಾಬಾದ್​ನ ಶಮೀರ್​ಪೇಟೆಯ ಅಮಾನತುಗೊಂಡ ತಹಶೀಲ್ದಾರ್​ ನಿವಾಸ ಸೇರಿದಂತೆ ಸಂಬಂಧಪಟ್ಟ ಆಸ್ತಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದಾಗ 5.05 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಅಮಾನತುಗೊಂಡಿದ್ದ ತಹಶೀಲ್ದಾರ್

ತಹಶೀಲ್ದಾರ್​​ ತುಮ್ಮಕೊಮ್ಮ ಸುಚರಿತ ವಿರುದ್ಧ ಈ ಹಿಂದೆ 30 ಲಕ್ಷ ರೂ. ಲಂಚ ಪಡೆಯುತ್ತಿದ್ದ ಪ್ರಕರಣದಡಿ ಬಂಧಿಸಲಾಗಿತ್ತು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಸುಚರಿತ ಅವರಿಗೆ ಸಂಬಂಧಿಸಿದ ಆಸ್ತಿ, ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿದಾಗ ಅವರ ಅವರಿಗೆ ಸೇರಿದ ಚರಾಸ್ತಿ ಮತ್ತು ಸ್ಥಿರಾಸ್ತಿ ಪತ್ತೆಯಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಹೇಳಿದೆ. ಸದ್ಯ ಅವರ ವಿರುದ್ಧ ಅಕ್ರಮ ಆಸ್ತಿ (ಡಿಎ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮೂವತ್ತು ಲಕ್ಷ ಲಂಚಕ್ಕೆ ಬೇಡಿಕೆ

ಸುಚರಿತ ಅವರು ಈ ಹಿಂದೆ ಮೂವತ್ತು ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎನ್ನುವ ಆರೋಪವಿತ್ತು. ಅದರ ಭಾಗವಾಗಿ ಎರಡು ಲಕ್ಷವನ್ನು ತಮ್ಮ ಡ್ರೈವರ್​​ ಮೂಲಕ ಪಡೆದುಕೊಳ್ಳುವಾಗ ರೆಡ್​​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿದ್ದರು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ ಎನ್ನಲಾಗಿದೆ.
ಈ ಪ್ರಕರಣದಡಿ ಎಸಿಬಿ ಅಧಿಕಾರಿಗಳು ಆಕೆಯ ಆಸ್ತಿ ಮತ್ತು ಹಣಕಾಸು ವ್ಯವಹಾರದ ಬಗ್ಗೆ ಪರಿಶೀಲನೆ ನಡೆಸಿದಾಗ, ಆದಾಯಕ್ಕೂ ಮೀರಿದ ಬೃಹತ್​ ಆಸ್ತಿ ಹೊಂದಿದ್ದಾರೆ ಎನ್ನುವುದು ತಿಳಿದುಬಂತು. ಸಿದ್ದಿಪೇಟೆ ಜಿಲ್ಲೆಯಲ್ಲಿ 2.17 ಎಕರೆ ಕೃಷಿ ಭೂಮಿ, ಮೂರು ಐಷಾರಾಮಿ ಫ್ಲ್ಯಾಟ್​​, ಹೈದರಾಬಾದ್​​ ವ್ಯಾಪ್ತಿ ಎರಡು ಫ್ಲ್ಯಾಟ್​​, 38 ಲಕ್ಷ ರೂ. ಬ್ಯಾಂಕ್ ಠೇವಣಿಗಳು ಪತ್ತೆಯಾಗಿವೆ. ಚಿನ್ನಾಭರಣ, ವಜ್ರ ಸೇರಿದಂತೆ 5.05 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಎಸಿಬಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ, (ಏಜೆನ್ಸೀಸ್).