ಶವವನ್ನು ಹೆಗಲ ಮೇಲೆ ಹೊತ್ತು ಮನೆಗೆ ಸಾಗಿದ ಕುಟುಂಬ 
ದೇಶ

ಹೆಣವನ್ನು ಹೆಗಲ ಮೇಲೆ ಹೊತ್ತು ಸಾಗಿದ ಕುಟುಂಬ: ಕಾಂಗ್ರೆಸ್‌ಗೆ ಒಂದು ಅಂಬ್ಯುಲೆನ್ಸ್ ನೀಡುವ ಯೋಗ್ಯತೆಯಿಲ್ಲ; ತೆಲಂಗಾಣ ಸರ್ಕಾರದ ವಿರುದ್ಧ ಬಿಆರ್‌ಎಸ್ ಕೆಂಡಾಮಂಡಲ! Carrying Dead Body on Shoulders

ಪ್ರಮುಖ ಮುಖ್ಯಾಂಶಗಳು

  • ತೆಲಂಗಾಣದಲ್ಲಿ ನಡೆದ ಮನ ಕಲುಕುವ ಘಟನೆ
  • ಶವವನ್ನು ಹೆಗಲ ಮೇಲೆ ಹೊತ್ತು ಮನೆಗೆ ಸಾಗಿದ ಕುಟುಂಬ
  • ಕಾಮಗ್ರೆಸ್​ ಸರ್ಕಾರಕ್ಕೆ ಒಂದು ಅಂಬ್ಯುಲೆನ್ಸ್ ಒದಗಿಸುವ ಯೋಗ್ಯತೆಯಿಲ್ಲ: ಬಿಆರ್​ಎಸ್​ ಪಕ್ಷ
ತೆಲಂಗಾಣ: ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವ ಘಟನೆಯೊಂದು ತೆಲಂಗಾಣದ ಭದ್ರಾಚಲಂ ಪಟ್ಟಣದಲ್ಲಿ ನಡೆದಿದ್ದು, ಆಸ್ಪತ್ರೆಯಲ್ಲಿ ಮರಣಹೊಂದಿದ ಶವವೊಂದನ್ನು ಕುಟುಂಬದವರು ಹೆಗಲ ಮೇಲೆ ಹೊತ್ತು (Carrying Dead Body on Shoulders) ಮನೆಗೆ ಸಾಗಿಸುತ್ತಿರುವ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದೆ.

ಏನಿದು ಘಟನೆ?

ಭದ್ರಾಚಲಂ ಪಟ್ಟಣದ ನಿವಾಸಿ ಕಂಡೆ ವೆಂಕಣ್ಣ (42) ಎಂಬ ವ್ಯಕ್ತಿ ತೀವ್ರ ಶಾಖದ ಹೊಡೆತ (Heatstroke) ಕ್ಕೆ ಒಳಗಾದ ಹಿನ್ನಲೆ ಭಾನುವಾರ (ಮೇ.24) ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿತ್ತು.
ನಂತರ ವೈದ್ಯರು ಪರೀಕ್ಷೆ ನಡೆಸಿ, ಕಂಡೆ ವೆಂಕಣ್ಣ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಕುಟುಂಬದವರು ಹೆಣವನ್ನು ಮನೆಗೆ ಸಾಗಿಸುವಂತೆ ಕೇಳಿದಾಗ ನಮ್ಮಲ್ಲಿ ಯಾವುದೇ ವಾಹನ ಸೇವೆಯಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ.
ಮೃತನ ಕುಟುಂಬ ಆರ್ಥಿಕವಾಗಿ ದುರ್ಬಲರಾಗಿರುವ ಕಾರಣ ಖಾಸಗಿ ವಾಹನವನ್ನು ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಹೇಗಾದರೂ ಮಾಡಿ ಒಂದು ಗಾಡಿ ವ್ಯವಸ್ಥೆ ಮಾಡಿಕೊಡಿ ಎಂದು ಆಸ್ಪತ್ರೆಯಲ್ಲಿಯೇ ಸುಮಾರು 2-3 ಗಂಟೆ ಕಾದಿದ್ದಾರೆ. ಆದರೆ ಆಸ್ಪತ್ರೆಯವರು ಇದಕ್ಕೆ ಕ್ಯಾರೆ ಎನ್ನದ ಕಾರಣ ಹೆಣವನ್ನು ಹೆಗಲ ಮೇಲೆ ಹೊತ್ತು ಮನೆಯತ್ತ ಸಾಗಿದ್ದಾರೆ.

ಕಾಂಗ್ರೆಸ್​ಗೆ​ ಒಂದು ಅಂಬ್ಯುಲೆನ್ಸ್​ ನೀಡುವ ಯೋಗ್ಯತೆಯಿಲ್ಲ!

ಹೀಗೆ ಹೆಣವನ್ನು ಹೊತ್ತು ತಿರುಗುತ್ತಿರುವ ಫೋಟೊ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಈ ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ.
ಬಿಆರ್​ಎಸ್​ ಪಕ್ಷದ ಕೆ.ಟಿ. ರಾಮ್​ರಾವ್​, ಕಾಂಗ್ರೆಸ್​ ಪಕ್ಷ ತೆಲಂಗಾಣದ ಮಾನವನ್ನು ಹರಾಜು ಹಾಕುವಂತ ಕೆಲಸ ಮಾಡಿದೆ ಎಂದು ಹೇಳಿದ್ದಾರೆ. ಈ ಒಂದು ಘಟನೆಯೆ ಸಾಕು ಕಾಂಗ್ರೆಸ್ ಪಕ್ಷ ಹೇಗೆ ತೆಲಂಗಾಣದಲ್ಲಿ ಆಡಳಿತ ನಡೆಸುತ್ತಿದೆ ಎಂದು ತಿಳದು ಬರುತ್ತದೆ ಎಂದು ಅವರು ತಮ್ಮ ಎಕ್ಸ್​ (ಟ್ವಿಟರ್​) ಖಾತೆಯಲ್ಲಿ ಬರೆದು ಕೊಂಡಿದ್ದಾರೆ.
ಹಿಂದೆ ಬಿಆರ್​ಎಸ್​ ಪಕ್ಷದ ಆಡಳಿತವಿದ್ದಾಗ ಬಡವರು ತಲೆ ಎತ್ತಿ ನಡೆಯುತ್ತಿದ್ದರು, ಅವರಿಗೆ ಸರಿಯಾದ ಗೌರವವನ್ನು ನಾವು ನೀಡಿದ್ದೆವು. ಆದರೆ ಈ ಕಾಂಗ್ರೆಸ್​ ಪಕ್ಷಕ್ಕೆ ಒಂದು ಅಂಬ್ಯುಲೆನ್ಸ್​ ನೀಡುವ ಯೋಗ್ಯತೆಯಿಲ್ಲ ಎಂದು ಕಿಡಿ ಕಾರಿದ್ದಾರೆ, (ಏಜನ್ಸೀಸ್​).