ಸಿಎನ್‌ಜಿ ಗ್ಯಾಸ್ ತುಂಬಿಸುವಾಗ ಸಂಭವಿಸಿದ ಆಘಾತಕಾರಿ ಕಾರು ಸ್ಫೋಟದ ದೃಶ್ಯ. 
ದೇಶ

CNG ಗ್ಯಾಸ್ ತುಂಬಿಸುವಾಗಲೇ ಕಾರು ಸ್ಫೋಟ: ಮೈ ನಡುಗಿಸುವ ವಿಡಿಯೋ ವೈರಲ್​; ಭೀಕರ ದೃಶ್ಯ ಕಂಡು ನೆಟ್ಟಿಗರು ಶಾಕ್​! CNG Car Blast

ಸಿಎನ್‌ಜಿ ಗ್ಯಾಸ್ (CNG) ತುಂಬಿಸುವಾಗಲೇ ಭೀಕರವಾಗಿ ಕಾರು ಸ್ಫೋಟಗೊಂಡ ಮೈ ನಡುಗಿಸುವ ವಿಡಿಯೋ ವೈರಲ್ ಆಗಿದೆ! ಈ ಭಯಾನಕ ದೃಶ್ಯ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಸಂಪೂರ್ಣ ವಿವರ ಇಲ್ಲಿದೆ.

ವೈರಲ್​: ಪೆಟ್ರೋಲ್​ ಮತ್ತು ಡೀಸೆಲ್​ ಆಧಾರಿತ ವಾಹನಗಳನ್ನು ಬಳಸಿದರೆ ಖರ್ಚು ಹೆಚ್ಚಾಗುತ್ತದೆ, ತೈಲ ಬೆಲೆ ಕೂಡ ಏರಿಕೆ ಕಾಣುತ್ತಿರುವ ಈ ಕಾಲಮಾನದಲ್ಲಿ ಜನರು ಸಿಎನ್​ಜಿ ಗ್ಯಾಸ್​ ಮತ್ತು ಎಲೆಕ್ಟ್ರಿಕ್​ ವಾಹನಗಳನ್ನು ಖರೀದಿಸುವತ್ತ ಗಮನ ಹರಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ಗುಜರಾತಿನ, ಕರ್ಜನ್​ ಬಳಿ ಸಿಎನ್​ಜಿ ಗ್ಯಾಸ್​ ತುಂಬಿಸಲು ನಿಂತಿದ್ದ ಕಾರೊಂದು ಸ್ಫೋಟಗೊಂಡಿರುವ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ಕಾಡ್ಗಿಚ್ಚಿನಂತೆ ಎಲ್ಲಡೆ ವೈರಲ್​ ಆಗುತ್ತಿದೆ.

ವಿಡಿಯೋನಲ್ಲೇನಿದೆ?

ಈ ಭೀಕರ ಘಟನೆಯು ಅಕ್ಟೋಬರ್​ 1 ರಂದು ಗುಜರಾತ್​ ರಾಜ್ಯದ ಕರ್ಜನ್​ಬ ಎನ್​ಹೆಚ್​- 48 ಬಳಿ ಸಂಭವಿಸಿದೆ ಎನ್ನಲಾಗಿದೆ. ಕಾರಿನಲ್ಲಿ ಸಿಎನ್​ಜಿ ಗ್ಯಾಸ್​ ಖಾಲಿಯಾದ ಹಿನ್ನಲೆ, ಮಾಲೀಕನು ಗ್ಯಾಸ್​ ಅನ್ನು ಭರ್ತಿ ಮಾಡಿಸಲು ಜಿಂದಾಲ್​ ಕಂಪನಿಯ ಎದುಗಿರುವ ಈ ಸಿಎನ್​ಜಿ ಗ್ಯಾಸ್​ ಸ್ಟೇಶನ್​ಗೆ ಬೇಟಿ ಕೊಟ್ಟಿದ್ದಾರೆ.

ವಿಡಿಯೋನಲ್ಲಿ ಕಾಣುವಂತೆ, ಕಾರಿಗೆ ಗ್ಯಾಸ್​ ಪೈಪ್​ ಜೋಡಿಸಿದ್ದಾರೆ. ನಂತರ ಏಕಾಏಕಿ ಕಾರು ಸ್ಫೋಟಗೊಂಡಿದ್ದು, ಸುತ್ತಲಿನಿದ್ದ ಜನರಿಗೆ ಹಾಗೂ ಪಕ್ಕದಲ್ಲಿದ್ದ ಇನ್ನೊಂದು ಕಾರು ಜಕಂ ಆಗಿದೆ ಎಂದು ತಿಳಿದು ಬಂದಿದೆ. ವಿಡಿಯೋನಲ್ಲಿ ಕಾಣುವಂತೆ ಸ್ಫೋಟದ ರಭಸಕ್ಕೆ ಕಾರಿನ ಮುಂಭಾಗ ಹಾರಿಹೋಗಿದ್ದು, ಗಾಜುಗಳೆಲ್ಲಾ ಪುಡಿ-ಪುಡಿಯಾಗಿವೆ.

ಮಾಹಿತಿ ಪ್ರಕಾರ, ಕಾರಿನಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಸಾವು-ನೋವಿನ ವರದಿಯಾಗಿಲ್ಲ ಎಂದು ತಿಳಿದು ಬಂದಿದೆ. ಆದರೆ ಕೆಲವೊಂದಿಷ್ಟು ಜನರಿಗೆ ಚಿಕ್ಕ-ಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ಘಟನೆ ನಡೆಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಈ ಕುರಿತು ಗ್ಯಾಸ್​ ಸ್ಟೇಷನ್​ ಸಿಬ್ಬಂದಿ ಹಾಗೂ ಮಾಲೀಕನ ಬಳಿ ಮಾಹಿತಿ ಪಡೆದುಕೊಂಡಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಸಿಎನ್‌ಜಿ ಗ್ಯಾಸ್ ಹಾಕುವಾಗ ಸಂಭವಿಸಿದ ಆಘಾತಕಾರಿ ಕಾರು ಸ್ಫೋಟದ ದೃಶ್ಯ.ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ಸಿಎನ್​ಜಿ ಕಾರು ಸ್ಫೋಟದ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಆತಂಕ ಹೊರಹಾಕಿದ್ದಾರೆ. ಪೆಟ್ರೋಲ್​-ಡೀಸೆಲ್​ ಗಾಡಿ ಬ್ಲಾಸ್ಟ್​ ಆಗುವುದನ್ನು ಕೇಳಿದ್ದೆ, ನೋಡಿದ್ದೆ, ಈಗ ಸಿಎನ್​ಜಿ ಗಾಡಿ ಕೂಡ ಬ್ಲಾಸ್ಟ್​ ಆಗುತ್ತಿದೆ. ಯಾರನ್ನು ನಂಬಬೇಕೆಂದು ತಿಳಿಯಲಾಗಿದೆ ಎಂದು ಒಬ್ಬರು ಹೇಳಿದ್ದಾರೆ.

ಅದಿಕ್ಕೆ ತೈಲವನ್ನು ಅಥವಾ ಗ್ಯಾಸ್​ ಅನ್ನು ತುಂಬಿಸುವಾಗ, ವಾಹನದಿಂದ ಆಚೆಯಿರಿ ಎಂದು ಸಿಬ್ಬಂದಿ ಹೇಳುತ್ತಾರೆ. ಈ ಗಾಡಿಯಲ್ಲಿ ಒಂದು ವೇಳೆ ಚಾಲಕನಿದ್ದರೆ, ಅವನ ಸಾವು ಖಚಿತವಾಗಿತ್ತೆಂದು ಇನ್ನೊಬ್ಬರು ಕಮೆಂಟ್​ ಮಾಡಿದ್ದಾರೆ.

ಸಿಎನ್​ಜಿ ವಾಹನಗಳು ಕೈಗೆಟಕುವ ಹಾಗೂ ಸುರಕ್ಷಿತ ಎಂಬ ಭಾವನೆ ಜನರಲ್ಲಿದೆ. ದಯವಿಟ್ಟು ಆ ನಂಬಿಕೆಯನ್ನು ಕಳೆದುಕೊಳ್ಳಬೇಡಿ. ಈ ರೀತಿಯ ಸಮಸ್ಯೆಗಳಿಗೆ ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳಿ ಎಂದು ಇನ್ನೊಬ್ಬರು ಅನಿಸಿಕೆ ಹಂಚಿಕೊಂಡಿದ್ದಾರೆ, (ಏಜೆನ್ಸೀಸ್​).