ಮೈದಾನದಲ್ಲಿ ಜಸ್ಪ್ರೀತ್ ಬುಮ್ರಾ ಮೇಲೆ ಸಿಟ್ಟಾದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ
ಮುಂಬೈ: ಗುರುವಾರ(ಏ. 16) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ ಆವೃತ್ತಿಯಲ್ಲಿ ಸತತ ನಾಲ್ಕನೇ ಪಂದ್ಯ ಸೋತಿದ್ದು, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಈ ನಡುವೆ ಪಂದ್ಯದ ಮಧ್ಯೆ ಮೈದಾನ ಹೊಂದಿಸುವಾದ ಕ್ಯಾಪ್ಟೆನ್ ಹಾರ್ದಿಕ್ ಪಾಂಡ್ಯ ಮೈದಾನದಲ್ಲೇ ಜಸ್ಪ್ರೀತ್ ಬುಮ್ರಾ ಮೇಲೆ ಸಿಟ್ಟಾಗಿದ್ದು, ಇಬ್ಬರ ಮಧ್ಯ ಸಣ್ಣ ವಾಗ್ವಾದ ನಡೆದಿದೆ.
ಜಸ್ಪ್ರೀತ್ ಬುಮ್ರಾ ಓವರ್ ಸಮಯದಲ್ಲಿ, ಹಾರ್ದಿಕ್ ಪಾಂಡ್ಯ ತಮ್ಮ ಇಚ್ಛೆಯಂತೆ ಮೈದಾನ ಬದಲಾಯಿಸಲು ಮುಂದಾಗಿದ್ದರು. ಆದರೆ ಬುಮ್ರಾ ಅದಕ್ಕೆ ಒಪ್ಪಲಿಲ್ಲ. ಆದಾಗ್ಯೂ, ಅವರು ಬೇಗನೆ ಕೈ ಎತ್ತಿ ಒಪ್ಪಿಕೊಂಡರು. ಕ್ಯಾಮೆರಾ ತಕ್ಷಣವೇ ರೋಹಿತ್ ಶರ್ಮಾ ಕಡೆಗೆ ತಿರುಗಿತು. ಅವರು ಕೂಡ ಅಸಮಾಧಾನಗೊಂಡಂತೆ ತಲೆಯನ್ನು ಹಿಡಿದುಕೊಳ್ಳುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಯಾವುದೇ ವಿಕೆಟ್ ಬೀಳದೇ PBKS ಬ್ಯಾಟ್ಸ್‌ಮನ್‌ಗಳು ನಿರಂತರವಾಗಿ ರನ್ ಗಳಿಸುತ್ತಿದ್ದು, ಹಾರ್ದಿಕ್ ಪಾಂಡ್ಯರನ್ನು ಹತಾಶೆಗೊಳಿಸಿದ್ದು, ತಾಳ್ಮೆ ಕಳೆದುಕೊಂಡು ಬುಮ್ರಾ ಮೇಲೆ ತನ್ನ ಕೋಪ ತೋರಿಸುತ್ತಿರುವಂತೆ ಕಂಡು ಬಂದಿದೆ. ಬುಮ್ರಾ ಅವರ ಪ್ರತಿಕ್ರಿಯೆಯೂ ಅವರು ಅಸಮಾಧಾನಗೊಂಡಿರುವುದು ಕಾಣುತ್ತದೆ.
ಐಪಿಎಲ್ 2026ರ ಆವೃತ್ತಿಯಲ್ಲಿ ಮುಂಬೈ ತಂಡ ಸಂಪೂರ್ಣವಾಗಿ ಕುಸಿದಿದೆ. ಆಡಿದ ಐದು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಮಾತ್ರ ಗೆದ್ದು, ಸತತ ನಾಲ್ಕು ಪಂದ್ಯ ಸೋತು ಪಟ್ಟಿಯಲ್ಲಿ 9 ಸ್ಥಾನದಲ್ಲಿದೆ. ಇನ್ನೂ ಮುಂಬೈ ತಂಡ ಕುಸಿಯಲು ಹಾರ್ದಿಕ್ ಪಾಂಡ್ಯ ಮತ್ತು ಅವರ ವರ್ತನೆಯೇ ಕಾರಣ. ಅವರ ಕೋಪ ಮತ್ತು ವರ್ತನೆ ತಂಡದ ವಾತಾವರಣವನ್ನು ಹಾಳು ಮಾಡಿದೆ ಎಂದು ತಂಡದ ಅಭಿಮಾನಿಗಳು ದೂಷಿಸುತ್ತಿದ್ದಾರೆ (ಏಜೆನ್ಸೀಸ್).