ಚಿನ್ನ-ಬೆಳ್ಳಿ ಬೆಲೆಗಳು ಈಗ ಇನ್ನೂ ಭಾರ 
ದೇಶ

ಚಿನ್ನ ಮುಟ್ಟಿದ್ರೆ ಶಾಕ್! ಭಾರವಾದ ಬೆಳ್ಳಿ; ಹೀಗಿದೆ ನೋಡಿ ದರ ಹೆಚ್ಚಳದ ಹಾದಿ

ಪ್ರಮುಖ ಮುಖ್ಯಾಂಶಗಳು

  • ಖರೀದಿದಾರರಿಗೆ ಚಿನ್ನ ಮಾತ್ರವಲ್ಲ ಬೆಳ್ಳಿ ಕೂಡ ಭಾರ
  • 10 ಗ್ರಾಂ ಬಂಗಾರಕ್ಕೆ 1.37 ಲಕ್ಷ ರೂಪಾಯಿ
  • ದಾಖಲೆ ಮಟ್ಟಿಗಿನ ಏರಿಕೆಗೆ ಜಾಗತಿಕ ಉದ್ವಿಗ್ನತೆ ಕಾರಣ

ನವದೆಹಲಿ: ಚಿನ್ನದ ಬೆಲೆ ಏರಿಕೆಯ ನಾಗಾಲೋಟ ಮುಂದುವರಿದಿದೆ. ಸೋಮವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಂಗಾರದ ಬೆಲೆ 4 ಸಾವಿರ ರೂಪಾಯಿ ಏರಿಕೆ ಆಗುವ ಮೂಲಕ ಪ್ರತಿ 10 ಗ್ರಾಂ. ಚಿನ್ನದ ದರ ಗರಿಷ್ಠ 1,37,600 ರೂ.ಗೆ ತಲುಪಿದೆ. ಸೋಮವಾರದ ಅಂತ್ಯಕ್ಕೆ ದೆಹಲಿ ಮಾರುಕಟ್ಟೆಯಲ್ಲಿ 99.9 ಶುದ್ಧತೆಯ ಚಿನ್ನದ ದರ 1,33,600 ರೂ. ತಲುಪಿತ್ತು. ಅ.17ರಂದು ಪ್ರತಿ ಗಾಂ ಚಿನ್ನದ ಬೆಲೆ 3.200 ರೂ. ಹೆಚ್ಚಳವಾಗಿ 10 ಗ್ರಾಂಗೆ 1,34,800 ರೂ. ಮುಟ್ಟಿತ್ತು. 1.50 ಲಕ್ಷ ರೂ. ಸನಿಹ: ಕ್ರಿಸ್ವುಸ್ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಭಾರತದಲ್ಲಿ ಚಿನ್ನಕ್ಕೆ ಭಾರಿ ಬೇಡಿಕೆ ಇದೆ. ಈಗಾಗಲೇ ದೇಶದ ಹಲವೆಡೆ ಖರೀದಿ ಭರಾಟೆ ತೀವ್ರಗೊಂಡಿದೆ.

ದರ ಹೆಚ್ಚಳದ ಹಾದಿ

  • 5 ವರ್ಷ ಅವಧಿಯಲ್ಲಿ ಶೇ.60 ಹೆಚ್ಚಳ
  • 2025ರಲ್ಲಿ ಶೇ.39 ಏರಿಕೆ ಕಂಡ ಚಿನ್ನ
  • 2024ರಲ್ಲಿ ಶೇ.27ರಷ್ಟು ದರ ಏರಿಕೆ

ದಾಖಲೆ ಮೇಲೆ ದಾಖಲೆ

  • 2025 ಜನವರಿ- ಅಕ್ಟೋಬರ್ ಅವಧಿ
  • ಫೆಬ್ರವರಿ- 85,300 (10 ಗ್ರಾಂ ದರ)
  • ಮಾರ್ಚ್-87,500 ರೂ.ಗೆ ಹೆಚ್ಚಳ
  • ಏಪ್ರಿಲ್ -98,000 ರೂ. ಮುಟ್ಟಿದ ಚಿನ್ನ
  • ಜೂನ್- 1 ಲಕ್ಷ ರೂ.ಗಡಿ ದಾಟಿ ದಾಖಲೆ
  • ಆಗಸ್ಟ್-1,05,170 ರೂ.ಗೆ ಹೆಚ್ಚಳ
  • ಅಕ್ಟೋಬರ್-1,32,770 ರೂ.ಗೆ ಏರಿಕೆ
  • 15 ಡಿಸೆಂಬರ್ -1,37,600 ರೂಪಾಯಿ

ಚಿನ್ನದ ಬೆಲೆ ಏರಿಕೆ ಏಕೆ?

  • ಭೌಗೋಳಿಕ ರಾಜಕೀಯದ ಉದ್ವಿಗ್ನತೆಜಾಗತಿಕ ಬೆಳವಣಿಗೆ ಮೇಲಿನ ಅನಿಶ್ಚಿತತೆ
  • ಕುಸಿತ ಕಾಣುತ್ತಿರುವ ಡಾಲರ್ ಮೌಲ್ಯ
  • ಕೇಂದ್ರ ಬ್ಯಾಂಕ್ಗಳಿಂದ ಖರೀದಿ ಹೆಚ್ಚಳ
  • ಭಾರತದಲ್ಲಿ ಬೇಡಿಕೆ ಹೆಚ್ಚುತ್ತಿರುವುದು
  • ಬಡ್ಡಿ ದರ ಕಡಿತದಿಂದ ಚಿನ್ನ ಆಕರ್ಷಣೆ
  • ಬಂಗಾರದ ಪೂರೈಕೆಯಲ್ಲಿನ ಕೊರತೆ

ಜಾಗತಿಕ ಉದ್ವಿಗ್ನತೆ ಕಾರಣ

ಚಿನ್ನ ಮತ್ತು ಬೆಳ್ಳಿ ದರ ತೀವ್ರವಾಗಿ ಏರಿಕೆಯಾಗುತ್ತಿರುವುದಕ್ಕೆ ಜಾಗತಿಕ ರಾಜಕೀಯ ಉದ್ವಿಗ್ನತೆಯ ಹೆಚ್ಚಳ ಮತ್ತು ಜಾಗತಿಕ ಬೆಳವಣಿಗೆ ಕುರಿತ ಅನಿಶ್ಚಿತತೆಯೇ ಕಾರಣವೆಂದು ಹಣಕಾಸು ಸಚಿವಾಲಯ ಪ್ರತಿಪಾದಿಸಿದೆ. ಹೀಗಾಗಿ ವರ್ಷಾಂತ್ಯದ ಹೊತ್ತಿಗೆ ಚಿನ್ನದ ದರ 1.50 ಲಕ್ಷ ರೂ. ಸನಿಹ ಬಂದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ. ಶೇ.74.3 ಹೆಚ್ಚಳ: ಕಳೆದೊಂದು ವರ್ಷ ದಲ್ಲಿ ಚಿನ್ನದ ಬೆಲೆ ಶೇ.74.3ರಷ್ಟು ಏರಿಕೆ ಆಗಿದೆ

ಬೆಳ್ಳಿಯೂ ಭಾರ: 2024 ಡಿ.31ರಂದು ಬೆಳ್ಳಿ ಬೆಲೆ ಕೆಜಿಗೆ 89,700 ರೂ. ಗಳಿತ್ತು. ಇದೀಗ ಬೆಳ್ಳಿ ದರ 1,09,800 ರೂ. ಮುಟ್ಟಿದೆ. ಬಂಗಾರ ಮತ್ತು ಬೆಳ್ಳಿಯಂಥ ಅಮೂಲ್ಯ ಲೋಹಗಳ ದೇಶೀಯ ಧಾರಣೆಯನ್ನು ಅವುಗಳ ಪ್ರಸ್ತುತ ಅಂತಾ ರಾಷ್ಟಿŠೕಯ ದರಗಳು, ಡಾಲರ್ ವಿರುದ್ಧ ರೂಪಾಯಿ ವಿನಿ ಮಯ ಮೌಲ್ಯ ಮತ್ತು ಅನ್ವಯವಾಗುವಂಥ ತೆರಿಗೆ, ಸುಂಕ ನಿರ್ಣಯಿಸುತ್ತವೆ. ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ. ಅಮೂಲ್ಯ ಲೋಹಗಳ ಬೆಲೆಗಳನ್ನು ಮಾರುಕಟ್ಟೆ ಅಂಶಗಳು ನಿರ್ಣಯಿಸುತ್ತವೆ. ಅದರಲ್ಲಿ ಸರ್ಕಾರದ ಯಾವುದೇ ಪಾತ್ರ ಇರುವುದಿಲ್ಲ ಎಂದು ಚೌಧರಿ ಸ್ಪಷ್ಟಪಡಿಸಿದ್ದಾರೆ.