Toronto Indians Dance 
ದೇಶ

ಟೊರೊಂಟೊದ ರಸ್ತೆಯಲ್ಲಿ ಭಾರತೀಯರ ಡ್ಯಾನ್ಸ್; 'ಕೆನಡಾ ಭಾರತದ ವಸಾಹತುವಿನಂತಾಗಿದೆ' ಎಂದ ಕೆನಡಿಯನ್ನರು..Canada

ಪ್ರಮುಖ ಮುಖ್ಯಾಂಶಗಳು

  • ಕೆನಡಾದ ಟೊರೊಂಟೊದ ರಸ್ತೆಯಲ್ಲಿ ನೂರಾರು ಭಾರತೀಯರಿಂದ ಡ್ಯಾನ್ಸ್​
  • ಕೆನಡಾ ಭಾರತದ ವಸಾಹತುನಂತಾಗಿದೆ ಎಂದು ಕೆನಡಿಯನ್ನರು ಕಿಡಿ
  • ಸೋಶಿಯಲ್​ ಮೀಡಿಯಾದಲ್ಲಿ ವಲಸೆ ನೀತಿ ಬಗ್ಗೆ ಹೆಚ್ಚಿದ ಚರ್ಚೆ
Toronto Indians Danceಕೆನಡಾದ ಟೊರೊಂಟೊದಲ್ಲಿ  ನಡೆದ ಭಾರತೀಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೋರಾರು ಜನರು ಭಾಗಿಯಾಗಿ ನೃತ್ಯ ಮಾಡುತ್ತಿರುವ ವಿಡಿಯೋಗಳು ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.  ಆ ಬೆನ್ನಲ್ಲೇ ಕೆನಾಡ ಭಾರತದ ವಸಾಹತುವಾಗಿ ಬದಲಾಗುತ್ತಿದೆ. ಹೀಗಾಗೋದಕ್ಕೆ ಬಿಡೋದಿಲ್ಲ ಎಂದು ಸ್ಥಳೀಯರು ಹಂಚಿಕೊಂಡಿರುವ ಪೋಸ್ಟ್​ ಹಂಚಿಕೊಂಡಿರುವುದು ಸದ್ಯ ಚರ್ಚೆಗೆ ಕಾರಣವಾಗಿದೆ. 

ವಿಡಿಯೋದಲ್ಲಿ ಏನಿದೆ?

ಟೊರೊಂಟೊದ ಜನನಿಬಿಡ ರಸ್ತೆಯಲ್ಲಿ ಭಾರತೀಯ ಯುವ ಜನತೆ ಭಾರತದ ಶೈಲಿಯಲ್ಲಿ ನೃತ್ಯ ಮಾಡಿ, ಹುಚ್ಚೆದ್ದು ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ಆನ್​ಲೈನ್​ನಲ್ಲಿ ಜಾಗತಿಕ ಚರ್ಚೆಯನ್ನು ಹುಟ್ಟುಹಾಕಿದೆ. ಇವು ಭಾರತೀಯರಿಗೆ ಸಂತೋಷ ಹಾಗೂ ಕಣ್ಣಿಗೆ ಸಂಭ್ರಮವನನ್ನು ತಂದುಕೊಟ್ಟಿದೆಯಾದರೂ, ಕೆನಡಾದ ಸ್ಥಳೀಯರು ಈ ಬಗ್ಗೆ ಕೆಂಡಕಾರಿದ್ದಾರೆ. ವಿರೋಧ ವ್ಯಕ್ತಪಡಿಸಿ ಪೋಸ್ಟ್​ ಹಂಚಿಕೊಳ್ಳುತ್ತಿದ್ದಾರೆ. 

ಪೋಸ್ಟ್​ನಲ್ಲಿ ಏನಿದೆ? ​

"ಕೆನಡಾ ಭಾರತೀಯ ವಸಾಹತುವಾಗಿ ಮಾರ್ಪಟ್ಟಿದೆ. ಕೆನಡಿಯನ್ನರು ಈಗ ಟೊರೊಂಟೊದಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ ಮತ್ತು ವಲಸಿಗರ ಸಂಖ್ಯೆ ಈ ಹಿಂದೆಯಿದ್ದ ಪ್ರಮಾಣಕ್ಕಿಂತ ಹೆಚ್ಚಾಗಿದೆ. ಹೀಗಾಗಲೂ ನಾವು ಬಿಡಬಾರದು. ಎದ್ದೇಳಿ, ಈಗಲಾದರೂ ಎಚ್ಚೆತ್ತುಕೊಳ್ಳಿ ಎಂದು @RomaniaMare1918 ಪೋಸ್ಟ್​ ಮಾಡಿದ್ದಾರೆ.
ಅವರದ್ದೇ ಇನ್ನೊಂದು ಪೋಸ್ಟ್​ನಲ್ಲಿ ಹೀಗೆಂದು ಇದೆ, ಕೆನಡಾ ಇನ್ನು ಮುಂದೆ ಕೆನಡಿಯನ್ನರು ಇರುವ ಸ್ಥಳವಲ್ಲ!. ಕೆಲವೇ ವರ್ಷಗಳಲ್ಲಿ ಬ್ರಾಂಪ್ಟನ್ ಕೆನಡಾದ ನಗರವು ಭಾರತೀಯ ಮೂಲದವರು ಇರುವ ಬಹುಸಂಖ್ಯಾತ ನಗರವಾಗಿ ರೂಪಾಂತರಗೊಳ್ಳುತ್ತದೆ. ಇದು ಕೆನಡಾದ ಮೇಲೆ 3ನೇ ವಿಶ್ವದ ಆಕ್ರಮಣ ಎಂದು ಬರೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನೆಟ್ಟಿಗರು ಏನಂದ್ರು?

ಇದು ಕೆನಡವೋ ಅಥವಾ ಭಾರತನ ಎಂದು ತಿಳಿಯುತ್ತಿಲ್ಲ ಎಂದು ಒಬ್ಬರು ಹೇಳಿದರೆ, ಮತ್ತೊಬ್ಬ ಎಕ್ಸ್​ ಬಳಕೆದಾರರು ಕೆನಡಾ ತನ್ನ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಲಸಿಗರು ಇಲ್ಲಿನ ಸಂಸ್ಕೃತಿಯನ್ನು ಪಾಲನೆ ಮಾಡಬೇಕು ಎಂದಿದ್ದಾರೆ. 
ಆಶಿಸ್​​ ಬಸು ಎನ್ನುವವರು ಟ್ವೀಟ್ ಮಾಡಿ ಇದು ಭಾರತೀಯ ಸಂಸ್ಕೃತಿಯೂ ಅಲ್ಲ, ಕಲೆಯೂ ಅಲ್ಲ. ಇದು ಅಗ್ಗದ ಬಾಲಿವುಡ್ ರೀಲ್‌ನ ಅಸಹ್ಯಕರ ಪ್ರದರ್ಶನ. ಕೆನಡಾಕ್ಕೆ ಬಂದು ನೋಡಿ ಎಂದು ಸಿಡಿದೆದ್ದಿದ್ದಾರೆ.

ವಲಸೆ ನೀತಿ ಬಗ್ಗೆ ಚರ್ಚೆ

ಇತ್ತೀಚಿನ ದಿನದಲ್ಲಿ ಕೆನಾಡಕ್ಕೆ ಉದ್ಯೋಗಕ್ಕಾಗಿಮ ಅತ್ಯುನ್ನತ ಶಿಕ್ಷಣಕ್ಕಾಗಿ ಕೆನಾಡಕ್ಕೆ ವಲಸೆ ಹೋಗುವ ಯುವಜನರ ಸಂಖ್ಯೆ ಹೆಚ್ಚಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಕೆನಡಾದ ವಲಸೆ ನೀತಿ ಹಾಗೂ ಸ್ಥಳೀಯ ಸಂಪನ್ಮೂಲ ಮತ್ತು ಸಂಸ್ಕೃತಿಗೆ ಧಕ್ಕೆಯಾಗುತ್ತಿರುವ ಬಗ್ಗೆ ಚರ್ಚೆ ಜೋರಾಗಿದೆ, (ಏಜೆನ್ಸೀಸ್).