Mira Road Kalma stabbing 
ದೇಶ

'ಕಲ್ಮಾ ಪಠಿಸಲು ಬರುತ್ತದೆಯೇ?' ಎಂದು ಕೇಳಿ ಭದ್ರತಾ ಸಿಬ್ಬಂದಿ ಮೇಲೆ ಅಟ್ಯಾಕ್​; ಆರೋಪಿ ಝೈಬ್ ಜುಬೈರ್​ ಅನ್ಸಾರಿ ಬಂಧನ, ಯಾರೀತ?.. Mumbai

ಪ್ರಮುಖ ಮುಖ್ಯಾಂಶಗಳು

  • ಜುಬೈರ್​ ಅನ್ಸಾರಿ ಎಂಬಾತನಿಂದ ಇಬ್ಬರು ಭದ್ರತಾ ಸಿಬ್ಬಂದಿ ಮೇಲೆ ದಾಳಿ, ಈತನಿಗೆ ಐಸಿಸ್​ ಉಗ್ರರ ನಂಟು ಶಂಕೆ
  • ಕಲ್ಮಾ ಓದಲು ಬರುತ್ತದೆಯೇ ಎಂದು ಕೇಳಿ ಚಾಕುವಿನಿಂದ ಇರಿದ ಆರೋಪಿ
  • ಒಬ್ಬ ಸಿಬ್ಬಂದಿಯ ಕರುಳಿಗೆ ಗಂಭೀರ ಗಾಯ, ಮತ್ತೊಬ್ಬರಿಗೆ ಸಣ್ಣ ಪುಟ್ಟ ಗಾಯ ಆಸ್ಪತ್ರೆಗೆ ದಾಖಲೆ
ಮುಂಬೈ: ಮಹಾರಾಷ್ಟ್ರದ ಮುಂಬೈನ್ ಮೀರಾ ರಸ್ತೆಯಲ್ಲಿ (Mira Road Kalma stabbing)ಪಹಲ್ಗಾಮ್​ನಲ್ಲಿ ನಡೆದಿದ್ದ ದಾಳಿಯಂತೆಯೇ ಅಘಾತಕಾರಿ ಘಟನೆಯೊಂದು ನಡೆದಿದೆ. ಕಲ್ಮಾ ಪಠಿಸಲು ಬರುತ್ತದೆಯೇ ಎಂದು ಕೇಳಿದ ಕೆಲ ಹೊತ್ತಲೇ ಇಬ್ಬರು ಭದ್ರತಾ ಸಿಬ್ಬಂದಿಗೆ 31 ವರ್ಷದ ವ್ಯಕ್ತಿ ಚಾಕುವಿನಿಂದ ಇರಿದಿರುವ ಘಟನೆ ಬೆಳಕಿಗೆ ಬಂದಿದೆ.
ಚಾಕುವಿನಿಂದ ಇರಿದ ವ್ಯಕ್ತಿಯನ್ನು ಝೈಬ್ ಜುಬೈರ್​ ಅನ್ಸಾರಿ (Jaib Zubair Ansari) ಎಂದು ಗುರುತಿಸಲಾಗಿದೆ. ಈತ ಭಾನುವಾರ ಬೆಳಗಿನ ಜಾವ 4 ಗಂಟೆಗೆ ಮೀರಾ ರಸ್ತೆ ಬಳಿಯಿದ್ದ ನಿರ್ಮಾಣ ಹಂತದ ಕಟ್ಟಡದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗಳಾದ ರಾಜ್‌ಕುಮಾರ್ ಮಿಶ್ರಾ ಮತ್ತು ಸುಬ್ರೋಟೊ ಸೇನ್ ಕರ್ತವ್ಯದಲ್ಲಿದ್ದರು.
ಅಲ್ಲಿಗೆ ಹೋದ ಜೈಬ್ ಜುಬೈರ್ ಅನ್ಸಾರಿ ಇಬ್ಬರ ಧರ್ಮವನ್ನು ಕೇಳಿದ್ದಾನೆ. ಅವರು ತಮ್ಮ ತಮ್ಮ ಹೆಸರು ಮತ್ತು ಧರ್ಮವನ್ನು ಹೇಳಿಕೊಂಡಿದ್ದಾರೆ. ನಂತರ ಕಲ್ಮಾ ಓದಲು ಬರುತ್ತದೆಯೇ? ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಅವರು ನಮಗೆ ಬರೋದಿಲ್ಲ, ಅದೆಲ್ಲ ಸಾಧ್ಯವಿಲ್ಲ ಎಂದಾಗ ಆತ ಚಾಕುವನ್ನು ಹೊರತೆಗೆದು ಮನಬಂದಂತೆ ದಾಳಿ ಮಾಡಿದ್ದಾನೆ.
ಭದ್ರತಾ ಸಿಬ್ಬಂದಿಗೆ ಗಾಯ
ಆರೋಪಿ ನಡೆಸಿದ್ದ ದಾಳಿಯಿಂದಾಗಿ ರಾಜ್​ಕುಮಾರ್​ ಮಿಶ್ರಾರ ಕರುಳಿನ ಮೇಲೆ ಗಂಭೀರಗಾಯವಾಗಿದೆ. ಸುಬ್ರತೋ ಸೇನ್​ ಅವರ ಬೆನ್ನಿನ ಮೇಲೆ ಸಣ್ಣಪುಟ್ಟ ಗಾಯವಾಗಿ ಪ್ರಾಣಾಪಾಯದಿಂದ ಬಚಾವ್​ ಆಗಿದ್ದಾರೆ. ಈ ವೇಳೆ ಸ್ಥಳದಲ್ಲೇ ಇದ್ದ ಸೆಕ್ಯೂರಿಟಿ, ಕ್ಯಾಬಿನ್‌ನಲ್ಲಿ ಅವಿತುಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ. ಸದ್ಯ ಗಾಯಾಳುಗಳು ವೊಕಾರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಯಾರು ಈ ಅನ್ಸಾರಿ

ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಮಾಹಿತಿ ಪಡೆದುಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಕೇವಲ ಒಂದೂವರೆ ಗಂಟೆಯಲ್ಲಿ ನಯಾ ನಗರ ಪ್ರದೇಶದಲ್ಲಿ ಆರೋಪಿ ಸಿಕ್ಕಿಬಿದ್ದಿದ್ದಾನೆ. ಅನ್ಸಾರಿ ಅಮೆರಿಕದಲ್ಲಿ ವ್ಯಾಸಂಗ ಪೂರ್ಣಗೊಳಿಸಿದ್ದಾನೆ. ಇತ್ತೀಚೆಗೆ ಕೋಚಿಂಗ್ ಸೆಂಟರ್ ಒಂದರಲ್ಲಿ ರಸಾಯನಶಾಸ್ತ್ರ ಮತ್ತು ಗಣಿತ ಶಿಕ್ಷಕನಾಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದ ಎನ್ನಲಾಗಿದೆ.
ಜುಬೈರ್​ ಅನ್ಸಾರಿ ಬಂಧನದ ನಂತರ ಆತನ ಮೊಬೈಲ್ ಪರಿಶೀಲಿಸಿದ ಪೊಲೀಸರಿಗೆ ಸ್ಫೋಟಕ ಮಾಹಿತಿಯೊಂದು ಸಿಕ್ಕಿದೆ. ಐಸಿಸ್ಸಂಘಟನೆಗೆ ಸಂಬಂಧಿಸಿದ ಪ್ರಚಾರದ ವಿಡಿಯೋಗಳು ಪತ್ತೆಯಾಗಿವೆ. ಈತ ಉಗ್ರಗಾಮಿ ವಿಚಾರಧಾರೆಗಳಿಗೆ ಮಾರುಹೋಗಿ ಈ ದಾಳಿ ಮಾಡಿರಬಹುದು ಎನ್ನುವ ಶಂಕೆ ಮೂಡಿದೆ. ಪ್ರಕರಣದ ಗಂಭೀರತೆಯನ್ನು ಗಮನಿಸಿ ಮಹಾರಾಷ್ಟ್ರ ಎಟಿಎಸ್ ತನಿಖೆ ಆರಂಭಿಸಿದೆ, (ಏಜೆನ್ಸೀಸ್​).