Valentines Day 
ದೇಶ

Valentines Day ಮುಗಿದ ಮರುದಿನವೇ ಹೆಂಡತಿಯ ಕತ್ತು ಸೀಳಿದ 'ಸಿಎ': ದರೋಡೆ ನಾಟಕವಾಡಿದ ಪತಿ ಸಿಕ್ಕಿಬಿದ್ದಿದ್ದು ಹೇಗೆ?

ಗುರುಗ್ರಾಮ: ವ್ಯಾಲೆಂಟೈನ್ಸ್ ಡೇ(ValentinesDay) ಆಚರಿಸಿದ ಮರುದಿನವೇ ಪತಿಯೊಬ್ಬ ತನ್ನ ಗರ್ಭಿಣಿ ಪತ್ನಿಯನ್ನು ಕ್ರೂರವಾಗಿ ಕೊಲೆ ಮಾಡಿ,ಅದನ್ನು ದರೋಡೆಕೋರರ ಕೃತ್ಯ ಎಂದು ಬಿಂಬಿಸಲು ಹೋಗಿ ಪೊಲೀಸರ ಅತಿಥಿಯಾದ ಘಟನೆ ಹರಿಯಾಣದಲ್ಲಿ ನಡೆದಿದೆ.ಹಂತಕ ಪತಿ ಅನ್ಶುಲ್ ಧವನ್‌ನನ್ನು ಜಜ್ಜರ್ ಪೊಲೀಸರು ಬಂಧಿಸಿದ್ದಾರೆ.

ಫೆಬ್ರವರಿ15ರ ರಾತ್ರಿ 11 ಗಂಟೆಗೆ ಹರಿಯಾಣ ಪೊಲೀಸರಿಗೆ ಅನ್ಶುಲ್ ಧವನ್ ಎಂಬಾತ ಕರೆ ಮಾಡಿ, "ಜಜ್ಜರ್ಜಿಲ್ಲೆಯ ಪಹಸೌರ್ ಎಂಬ ಹಳ್ಳಿಯ ಬಳಿ ಅಪರಿಚಿತ ದರೋಡೆಕೋರರು ನಮ್ಮ ಕಾರನ್ನು ತಡೆದು ದರೋಡೆಗೆ ಯತ್ನಿಸಿದ್ದಾರೆ.ಈ ವೇಳೆ ನನ್ನ ಪತ್ನಿಯ ಕತ್ತು ಸೀಳಿ ಪರಾರಿಯಾಗಿದ್ದಾರೆ" ಎಂದು ಗಾಬರಿಯಿಂದ ತಿಳಿಸಿದ್ದನು.

ಪೊಲೀಸರು ತಕ್ಷಣಸ್ಥಳಕ್ಕೆ ಧಾವಿಸಿದಾಗ, ಮುಖ್ಯರಸ್ತೆಯಿಂದ 100 ಮೀಟರ್ ದೂರದ ಕಚ್ಚಾ ದಾರಿಯಲ್ಲಿ 27 ವರ್ಷದ ಮಹಕ್ಎಂಬ ಯುವತಿಯ ಶವ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಆಕೆಯ ಕತ್ತು ಸೀಳಲಾಗಿತ್ತು.

ಆರಂಭದಲ್ಲಿ ಇದೊಂದುದರೋಡೆ ಮತ್ತು ಕೊಲೆ ಪ್ರಕರಣ ಎಂದು ಪೊಲೀಸರು ದಾಖಲಿಸಿಕೊಂಡಿದ್ದರು. ಆದರೆ ಅನ್ಶುಲ್‌ನನ್ನು ವಿಚಾರಣೆನಡೆಸಿದಾಗ ಪೊಲೀಸರಿಗೆ ಅನುಮಾನ ಶುರುವಾಯಿತು.ದರೋಡೆಕೋರರ ಸಂಖ್ಯೆ, ಅವರ ವಾಹನ ಅಥವಾ ಅವರು ನೋಡಲುಹೇಗಿದ್ದರು ಎಂಬ ಕನಿಷ್ಠ ಮಾಹಿತಿಯನ್ನೂ ಅನ್ಶುಲ್ ನೀಡಲು ವಿಫಲನಾದನು. ಪ್ರತಿ ಬಾರಿ ವಿಚಾರಣೆ ಮಾಡಿದಾಗಲೂಆತ ತನ್ನ ಹೇಳಿಕೆಗಳನ್ನು ಬದಲಿಸುತ್ತಿದ್ದನು.ಕೊನೆಗೆ ತೀವ್ರ ವಿಚಾರಣೆಗೆ ಒಳಪಡಿಸಿದಾಗ, ತಾನೇ ಕೊಲೆಮಾಡಿರುವುದಾಗಿ ಅನ್ಶುಲ್ ಒಪ್ಪಿಕೊಂಡಿದ್ದಾನೆ.

ಕೊಲೆಗೆ ಕಾರಣವೇನು?

ಪೊಲೀಸ್ ತನಿಖೆಯಲ್ಲಿತಿಳಿದುಬಂದಂತೆ, ಅನ್ಶುಲ್‌ಗೆ ತನ್ನ ಪತ್ನಿಯ ನಡತೆಯ ಮೇಲೆ ಅನುಮಾನವಿತ್ತು. ಮದುವೆಯಾದ ಐದು ತಿಂಗಳಿಂದಲೂಇದೇ ವಿಷಯಕ್ಕೆ ಇಬ್ಬರ ನಡುವೆ ಜಗಳವಾಗುತ್ತಿತ್ತು. ಫೆಬ್ರವರಿ 15ರಂದು ಪತ್ನಿಯ ತವರು ಮನೆಯಿಂದ ಗುರುಗ್ರಾಮಕ್ಕೆಮರಳುವಾಗ ದಾರಿಯಲ್ಲಿ ಮತ್ತೆ ಇದೇ ವಿಚಾರಕ್ಕೆ ಜಗಳ ನಡೆದಿದೆ. ಆವೇಶಕ್ಕೊಳಗಾದ ಅನ್ಶುಲ್ ಮೊದಲು ಕಾರಿನಲ್ಲೇಪತ್ನಿಯ ಕತ್ತು ಹಿಸುಕಿ ಸಾಯಿಸಿದ್ದಾನೆ. ನಂತರ ಬೆರಳಚ್ಚು ಬೀಳದಂತೆ ಗ್ಲೌಸ್ ಧರಿಸಿ, ಕತ್ತರಿಯಿಂದಪತ್ನಿಯ ಕತ್ತು ಸೀಳಿ ದರೋಡೆಕೋರರ ಕೃತ್ಯವೆಂದು ಬಿಂಬಿಸಲು ಶವವನ್ನು ರಸ್ತೆಯ ಪಕ್ಕದಲ್ಲಿ ಎಸೆದಿದ್ದಾನೆ.

ಸಂತ್ರಸ್ತೆಯಹಿನ್ನೆಲೆ:

ಮೃತ ಮಹಕ್ ಗುರುಗ್ರಾಮದಎಚ್‌ಡಿಎಫ್‌ಸಿ (HDFC) ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದರು. ಇವರಿಬ್ಬರದ್ದು ಕಳೆದ ವರ್ಷ ಸೆಪ್ಟೆಂಬರ್25ರಂದು ನಡೆದ ನಿಶ್ಚಯಿಸಿದ ಮದುವೆಯಾಗಿತ್ತು (Arranged Marriage). ಮಹಕ್ ಕೊಲೆಯಾದ ಸಮಯದಲ್ಲಿಗರ್ಭಿಣಿಯಾಗಿದ್ದರು ಎಂಬುದು ಕುಟುಂಬದವರ ನೋವಿನ ನುಡಿಯಾಗಿದೆ.

ಸದ್ಯ ಪೊಲೀಸರು ದಂಪತಿಗಳ ಮೊಬೈಲ್ಕರೆಗಳ ಮಾಹಿತಿ ಮತ್ತು ಡಿಜಿಟಲ್ ಪುರಾವೆಗಳನ್ನು ಸಂಗ್ರಹಿಸುತ್ತಿದ್ದು, ಕೃತ್ಯಕ್ಕೆ ಬಳಸಿದ ಕತ್ತರಿಮತ್ತು ಗ್ಲೌಸ್‌ಗಳನ್ನು ಅನ್ಶುಲ್ ಮೊದಲೇ ಯೋಜಿಸಿ ತಂದಿದ್ದನೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ,(ಏಜೆನ್ಸೀಸ್‌).