ಬೈಜೂಸ್​ ಸಂಸ್ಥಾಪಕ ರವೀಂದ್ರನ್​  
ದೇಶ

'ನಮ್ಮಿಂದ ತಪ್ಪಾಗಿಲ್ಲ, ಸಾಲ ಕೊಟ್ಟವರೇ ಹೇಳಿದ್ದಾರೆ': ಸಿಂಗಾಪುರ ಕೋರ್ಟ್​ ತೀರ್ಪಿನ ಬಗ್ಗೆ Byju Raveendran ಹೇಳಿದ್ದಿಷ್ಟು

ನವದೆಹಲಿ:

ಕೋರ್ಟ್​ ಹೇಳಿದ್ದೇನು?

ನ್ಯಾಯಾಂಗ ನಿಂದನೆ ಆರೋಪದ ಮೇಲೆ ಸಿಂಗಾಪುರ ಕೋರ್ಟ್​ ಬೈಜು ರವೀಂದ್ರನ್​ ಅವರಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿ, ಕಾನೂನು ವೆಚ್ಚ 90,000 ಸಿಂಗಾಪುರ್​ ಡಾಲರ್​ ಪಾವತಿ ಮಾಡುವಂತೆ ಆದೇಶಿಸಿತ್ತು. ಅದರೊಂದಿಗೆ ಬೀಯಾರ್​ ಇನ್ವೆಸ್ಟ್​​ಕೋ ಪ್ರೈವೇಟ್ ಲಿಮಿಟೆಡ್​​ ಕಾರ್ಪೋರೇಟ್ ಸಂಸ್ಥೆಯ ಮೇಲಿನ ತಮ್ಮ   ಕಾನೂನು ಮಾಲೀಕತ್ವವನ್ನು ಸಾಬೀತು ಪಡಿಸುವ ದಾಖಲೆಯನ್ನು ಸಲ್ಲಿಸಲು ಸೂಚನೆ ನೀಡಿತ್ತು. 

ಆ ಬಗ್ಗೆ ರವೀಂದ್ರನ್​ ಅವರು ಸುದೀರ್ಘವಾಗಿ ಮಾತನಾಡಿರುವುದು ಹೀಗೆ

'ಗ್ಲಾಸ್​ ಟ್ರಸ್ಟ್​ ಮತ್ತು ಖತಾರ್​ ಹೂಡಿಕೆ ಪ್ರಾಧಿಕಾರ ಸೇರಿದಂತೆ ಇತರ ಪಾಲುದಾರರ ಜೊತೆ ಮಾತುಕತೆ ನಡೆಸಲಾಗುತ್ತಿದೆ. ತಾತ್ವಿಕವಾಗಿ ಸೆಟಲ್​ಮೆಂಟ್​ಗೆ ಒಪ್ಪಿಗೆ ನೀಡಲಾಗಿದೆ. ಕೆಲವು ಪಾಲುದಾರರ ಜೊತೆಗೆ ತೆಗೆದು ಕೊಳ್ಳಬೇಕಾದ ಅಂತಿಮ ನಿರ್ಧಾರದಲ್ಲಿ ಸಣ್ಣ ಸಮಸ್ಯೆಗಳು ತಲೆದೂರಿದೆ. ಬಾಕಿ ಉಳಿದ ಸಮಸ್ಯೆಯುಲ್ಲಿ ನನ್ನ ಪಾತ್ರ ಕಿಂಚಿತ್ತು  ಇಲ್ಲ' ಎಂದಿದ್ದಾರೆ.

'ಇತ್ತೀಚೆಗೆ ಸಿಂಗಾಪುರ ಕೋರ್ಟ್​ ಕೊಟ್ಟಂತಹ ತೀರ್ಪು ನಿಜಕ್ಕೂ ನನಗೆ ಬೇಸರವನ್ನುಂಟು ಮಾಡಿದೆ. ಇದು ನನ್ನ ಮತ್ತು ನನ್ನ ಕಂಪನಿಯ ವಿರುದ್ಧ ತಪ್ಪು ಮಾಹಿತಿ ಪ್ರಚಾರವಾಗುವಂತೆ ಮಾಡಿದೆ. ಅದರಲ್ಲೂ ಎಲ್ಲ ಸಮಸ್ಯೆ ಇತ್ಯರ್ಥಗೊಂಡು, ಹೂಡಿಕೆದಾರರ ಜೊತೆಗೆ ಕೊನೆಯ ಹಂತದ ಮಾತುಕತೆ ನಡೆಸುತ್ತಿರುವ ಹಂತದಲ್ಲಿ  ಕೋರ್ಟ್​ನ ಈ ಆದೇಶ ಜಾರಿಯಾಗಿರುವುದು ಕೇಳಿ ನನಗೆ ನಿರಾಶೆಯುಂಟಾಗಿದೆ' ಎಂದಿದ್ದಾರೆ. 

ಮುಂದುವರೆದು, 'ಸೆಟಲ್ಮೆಂಟ್​ ವಿಚಾರವಾಗಿ ನನ್ನ ಮತ್ತು ಇತರ ಸಂಸ್ಥಾಪಕರ ನಡುವೆ ಯಾವುದೇ ತಪ್ಪು ನಡೆದಿಲ್ಲ ಎಂದು ಸಾಲ ಕೊಟ್ಟವರೇ  ಒಪ್ಪಿಕೊಂಡಿದ್ದಾರೆ. ಈ ಸೂಕ್ಷ್ಮ ಹಂತದಲ್ಲಿ ಇದಕ್ಕೆ ತದ್ವಿರುದ್ಧವಾಗಿ ಅಪಪ್ರಚಾರಕ್ಕಾಗಿ  ಈ ವಿಷಯ ಬಳಕೆ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ' ಎಂದು ಅವರು ಹೇಳಿದ್ದಾರೆ, 

ಬೇಕಂತಲೇ ಈ ವಿಚಾರ ಹೊರಬಂದಿದೆ

'ನಾನು ಕೆಲವು ವಿಚಾರವನ್ನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಎಲ್ಲರು ಸೆಟಲ್ಮೆಂಟ್​ ವಿಚಾರವಾಗಿ ಹೋರಾಡುತ್ತಿರುವಾಗ ನಾನು ನ್ಯಾಯಾಲಯದ ನಿಯಮವನ್ನು ಬ್ರೇಕ್​​ ಮಾಡಲು ಹೋಗಿಲ್ಲ. ನಾನು ಸಂಘರ್ಷದ ಬದಲಿಗೆ ಪರಿಹಾರವನ್ನು ಕಂಡುಕೊಳ್ಳಬೇಕು ಎನ್ನುವುದನ್ನು ಆಶಿಸುತ್ತೇನೆ. ಇಂತಹ ಸಮಯದಲ್ಲಿ ಖತಾರ್​ ಹೂಡಿಕೆ ಪ್ರಾಧಿಕಾರದ ವಿಷಯವನ್ನು ಒತ್ತಾಯ ಪೂರ್ವಕವಾಗಿ ಮತ್ತೆ ಮುನ್ನೆಲೆಗೆ ತಂದಿರುವುದು ನನಗೆ ಇದೊಂದು ಕುತಂತ್ರದಂತೆ ಭಾಸವಾಗುತ್ತಿದೆ' ಎಂದು ಹೇಳಿಕೊಂಡಿದ್ದಾರೆ.

'ನಾನು ಎಂದಿಗೂ ಬೈಜೂಸ್​ನ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದ್ದೇನೆ.   ನಾನು ಅಥವಾ ಕಂಪನಿಯ ಸಂಸ್ಥಾಪಕರು ವಿವಾದಿತ ನಿಧಿಯನ್ನು ವೈಯಕ್ತಿಕವಾಗಿ ಪಡೆದುಕೊಂಡಿಲ್ಲ. ಆ ಹಣವನ್ನು ಕಾನೂನುಬದ್ಧ ವ್ಯವಹಾರ ಉದ್ದೇಶಗಳಿಗಾಗಿ ಬಳಸಲಾಗಿದೆ'  ಎಂದು ಹೇಳಿದ್ದಾರೆ. 
 
'ಇಂದಿಗೂ ಸಹ ನಾನು ಈ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಲು ಬೆಂಬಲಿಸುತ್ತೇನೆಯೇ ವಿನಃ. ಸಮಸ್ಯೆಗಳನ್ನು ಇನ್ನಷ್ಟು ನನ್ನ ಮೇಲೆ ಹೊರಿಸಿಕೊಳ್ಳುವಂತೆ ಹೇಳಿಕೆ ಕೊಡೋಕೆ ಹೋಗೋದಿಲ್ಲ.  ಈಗ ನಾನು ಮಾತನಾಡುತ್ತಿರುವುದಕ್ಕೆ ಒಂದೇ ಕಾರಣ, ನನ್ನ ಮೇಲೆ ಸುಳ್ಳು ಆರೋಪಗಳು, ಏಕಪಕ್ಷೀಯ ನಿರೂಪಣೆ,. ಇದನ್ನೆಲ್ಲ ಕೇಳಿ ಸುಮ್ಮನಿರಲು ಸಾಧ್ಯವಾಗಲಿಲ್ಲ. ನನ್ನ ವ್ಯಕ್ತಿತ್ವದ ಬಗ್ಗೆ ತಪ್ಪಾಗಿ ಪ್ರಸ್ತಾಪವಾಗುವ ವಿಚಾರವನ್ನು ನಾನು ತಿರಸ್ಕರಿಸುತ್ತೇನೆ ಎಂದು ಹೇಳಿದ್ದಾರೆ, (ಏಜೆನ್ಸೀಸ್).