- ಆಗ್ರಾದ ಸೈಯಾನ್‌ನಲ್ಲಿ ಅರ್ಧ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
- ಮೃತದೇಹದ ಕೈ ಮೇಲಿದ್ದ ಟ್ಯಾಟೂ ಮತ್ತು ಜೇಬಿನಲ್ಲಿದ್ದ ಕ್ಯೂಆರ್ ಕೋಡ್‌ನಿಂದ ಹಂತಕರ ಪತ್ತೆ
- ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನ ಜೊತೆಗೂಡಿ ಕೊಂದ ಪತ್ನಿ
Agra Murder Case: ಕಾಣೆಯಾದ ಬಗ್ಗೆ ದೂರು, ಮದ್ಯದ ಬಾಟಲಿಯ ಕ್ಯೂಆರ್ ಕೋಡ್, ಅರ್ಧಂಬರ್ಧ ಸುಟ್ಟ ದೇಹದ ಮೇಲಿದ್ದ ಅಚ್ಚೆಯ ಜಾಡು ಹಿಡಿದು ತನಿಖೆ ಶುರು ಮಾಡಿದ್ದ ಪೊಲೀಸರಿಗೆ ಸಿಕ್ಕಿದ್ದು ಭಯಾನಕ ಸಾಕ್ಷಿಗಳು. ಹೌದು, ಪ್ರಿಯಕರನ ಜೊತೆ ಸೇರಿಕೊಂಡು ಪತ್ನಿಯೇ, ತಾಳಿ ಕಟ್ಟಿದ ಗಂಡನನ್ನು ಭೀಕರವಾಗಿ ಕೊಂದ ಘಟನೆ ಉತ್ತರ ಪ್ರದೇಶದ ಅಗ್ರಾದಲ್ಲಿ ಬೆಳಕಿಗೆ ಬಂದಿದೆ.
ಆಗ್ರಾದ ಸೈಯಾನ್ ಪ್ರದೇಶದ ರಸ್ತೆ ಬದಿಯಲ್ಲಿ ಏಪ್ರಿಲ್1ರಂದು ಅರ್ಧಂಬರ್ಧ ಸುಟ್ಟ ದೇಹ ಪತ್ತೆಯಾಗಿತ್ತು. ಕೊಲೆಗಾರು ತಪ್ಪಿಸಿಕೊಳ್ಳಲು, ಸಾಕ್ಷ್ಯ ನಾಶ ಮಾಡುವ ಸಲುವಾಗಿ ಪೆಟ್ರೋಲ್ ಸುರಿದು ಕೊಲೆ ಮಾಡಿದ್ದರು. ವ್ಯಕ್ತಿಯ ಮುಖ ಗುರುತಿಸಲಾಗದಷ್ಟು ದೇಹ ಸುಟ್ಟಿದ್ದರಿಂದ ಪೊಲೀಸರಿಗೆ ಇದೊಂದು ಸವಾಲಿನ ಪ್ರಕರಣವಾಗಿತ್ತು.
ತನಿಖೆಗೆ ನೆರವಾಯ್ತು ಟ್ಯಾಟೂ
ಆದರೆ, ಗಂಭೀರವಾಗಿ ವ್ಯಕ್ತಿಯ ದೇಹ ಮತ್ತು ಜಾಗ ಪರಿಶೀಲನೆ ನಡೆಸಿದಾಗ ಸಿಕ್ಕಿದ್ದು, ಆತನ ಮುಂಗೈನಲ್ಲಿದ್ದ ಅಚ್ಚೆ ಮತ್ತು ಆತನ ಜೇಬಿನಲ್ಲಿದ್ದ ಕ್ಯೂಆರ್ ಕೋಡ್ ಚೀಟಿ ಪೊಲೀಸರಿಗೆ ಪ್ರಮುಖ ಸುಳಿವು ನೀಡಿತು. ಈ ಸುಳಿವುಗಳನ್ನು ಹಿಂಬಾಲಿಸಿದ ಪೊಲೀಸರು ಮೃತ ವ್ಯಕ್ತಿಯನ್ನು ಲೋಕೇಂದ್ರ ಎಂದು ಗುರುತಿಸಿದ್ದಾರೆ.
ಸಹೋದರನಿಂದ ದೂರು
ಸುಟ್ಟದೇಹ ಪತ್ತೆಯಾದ ಮಾರನೇ ದಿನವೇ ಲೋಕೇಂದ್ರನ ಸಹೋದರ ಅಗ್ರಾದ ಪೊಲೀಸ್ ಠಾಣೆಯಲ್ಲಿ ತನ್ನ ಅಣ್ಣ ಮನೆಗೆ ವಾಪಸ್ ಬಂದಿಲ್ಲ ಎನ್ನುವ ಬಗ್ಗೆ ದೂರು ದಾಖಲಿಸುತ್ತಾನೆ. ಇದು ಪ್ರಕರಣಕ್ಕೆ ಇನ್ನಷ್ಟು ಪುಷ್ಠಿ ನೀಡುವಂತೆ ಮಾಡಿತು.
ತನಿಖೆಯ ವೇಳೆ ಲೋಕೇಂದ್ರನ ಪತ್ನಿ ಮತ್ತು ಆಕೆಯ ಪ್ರಿಯಕರ ಮಹೇಶ್ ನಡುವಿನ ಅನೈತಿಕ ಸಂಬಂಧ ಈ ಕೊಲೆಗೆ ಕಾರಣ ಎಂಬುದು ಬೆಳಕಿಗೆ ಬಂದಿದೆ.ಲೋಕೇಂದ್ರ ತನ್ನ ಪತ್ನಿಯ ಅಕ್ರಮ ಸಂಬಂಧ ಬಗ್ಗೆ ತಿಳಿದುಕೊಂಡಿದ್ದನು. ಈ ಬಗ್ಗೆ ಆಕೆಯ ಪ್ರಸ್ತಾಪಿಸಿ ಜಗಳವಾಡುತ್ತಿದ್ದನು. ಇದಕ್ಕೆ ವಿರೋಧಿಸುತ್ತಿದ್ದನು. ಇದರಿಂದ ಆತನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು.
ಕೊಲೆಗಡುಕರ ಬಂಧನ
ಪೊಲೀಸರು ಪತ್ನಿ, ಆಕೆಯ ಪ್ರಿಯಕರ ಮಹೇಶ್ ಮತ್ತು ಈ ಕೃತ್ಯಕ್ಕೆ ಸಹಕರಿಸಿದ ಇತರರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ,
ಮದ್ಯ ಸೇವನೆ ನೆಪದಲ್ಲಿ ಕೊಲೆ
ಏಪ್ರಿಲ್ 1 ರಂದು ಲೋಕೇಂದ್ರ ಮನೆಯಿಂದ ಹೊರಟುಹೋದಾಗ, ಅವರ ಪತ್ನಿ ಮಹೇಶ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ದಾರಿಯಲ್ಲಿ ಮಹೇಶ್ ಲೋಕೇಂದ್ರನನ್ನು ಭೇಟಿಯಾಗಿ ಮದ್ಯ ಸೇವನೆಗೆ ಆಹ್ವಾನಿಸಿದರು. ಇಬ್ಬರಿಗೂ ಪರಸ್ಪರ ಪರಿಚಯವಿತ್ತು, ಆದ್ದರಿಂದ ಅವರು ಒಪ್ಪಿಕೊಂಡರು. ಧರ್ಮವೀರ್ ಕೂಡ ಅವರೊಂದಿಗೆ ಸೇರಿಕೊಂಡರು. ನಿರ್ಜನ ಪ್ರದೇಶದಲ್ಲಿ ಕುಡಿಯಲು ಆರಂಭಿಸಿದಾಗ ಮಹೇಶ್ ಮತ್ತು ಧರ್ಮವೀರ್ ಲೋಕೇಂದ್ರನನ್ನು ಉಸಿರುಗಟ್ಟಿಸಿದರು, ಮತ್ತು ಅವರು ಪ್ರಜ್ಞೆ ತಪ್ಪಿದರು. ನಂತರ ಅವರು ಅವನ ದೇಹದ ಮೇಲೆ ಪೆಟ್ರೋಲ್ ಸುರಿದು, ಗೋಧಿಯ ಮೂಟೆಗಳಿಂದ ಮುಚ್ಚಿ ಬೆಂಕಿ ಹಚ್ಚಿದರು ಎಂದು ಮಹೇಶ್ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ, (ಏಜೆನ್ಸೀಸ್).