ಅರ್ಶದೀಪ್ ಮತ್ತು ಅಶ್ವಿನ್ ನಡುವಿನ ರೇಸ್‌ನಲ್ಲಿ ಬುಮ್ರಾ ಫಿನಿಶಿಂಗ್ ಟಚ್: ಹರಿಣಗಳ ವಿರುದ್ಧ ಅರಳಿತು ಹೊಸ ದಾಖಲೆ
ಅಹಮದಾಬಾದ್: ಟೀಮ್ ಇಂಡಿಯಾದ ವೇಗದ ಬೌಲಿಂಗ್ ಬೆನ್ನೆಲುಬು ಜಸ್ಪ್ರಿತ್ ಬುಮ್ರಾ(Jasprit Bumrah), ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ20 ವಿಶ್ವಕಪ್ 2026ರ ಸೂಪರ್ 8 ಪಂದ್ಯದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 3 ಪ್ರಮುಖ ವಿಕೆಟ್ ಪಡೆಯುವ ಮೂಲಕ ಬುಮ್ರಾ, ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಶ್ವಿನ್ ದಾಖಲೆ ಮುರಿದ 'ಬೂಮ್ ಬೂಮ್' ಬುಮ್ರಾ
ಈ ಪಂದ್ಯಕ್ಕೂ ಮುನ್ನ ರವಿಚಂದ್ರನ್ ಅಶ್ವಿನ್ (32 ವಿಕೆಟ್) ಭಾರತದ ಪರ ಗರಿಷ್ಠ ವಿಕೆಟ್ ಪಡೆದ ದಾಖಲೆ ಹೊಂದಿದ್ದರು. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಅವರು ಕ್ವಿಂಟನ್ ಡಿ ಕಾಕ್, ರಯಾನ್ ರಿಕೆಲ್ಟನ್ ಮತ್ತು ಕಾರ್ಬಿನ್ ಬಾಷ್ ಅವರ ವಿಕೆಟ್ ಪಡೆಯುವ ಮೂಲಕ ಈ ದಾಖಲೆಯನ್ನು ಅಳಿಸಿ ಹಾಕಿದರು. ಬುಮ್ರಾ ಈಗ ಒಟ್ಟು 33 ವಿಕೆಟ್‌ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ಕೇವಲ 15 ರನ್ ನೀಡಿ 3 ವಿಕೆಟ್: ಡೆಡ್ಲಿ ಸ್ಪೆಲ್..!
ತಮ್ಮ 4 ಓವರ್‌ಗಳ ಕೋಟಾದಲ್ಲಿ ಬುಮ್ರಾ ಕೇವಲ 15 ರನ್ ನೀಡಿ 3 ವಿಕೆಟ್ ಕಿತ್ತು ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಅವರ ಎಕನಾಮಿ ರೇಟ್ ಕೇವಲ 3.75 ಆಗಿತ್ತು. ಪಂದ್ಯದ ಆರಂಭದಲ್ಲೇ ಡಿ ಕಾಕ್ ವಿಕೆಟ್ ಪಡೆಯುವ ಮೂಲಕ ಹರಿಣಗಳ ಅಬ್ಬರಕ್ಕೆ ಬ್ರೇಕ್ ಹಾಕಿದ ಬುಮ್ರಾ, ಡೆತ್ ಓವರ್‌ಗಳಲ್ಲಿಯೂ ಅಮೋಘ ಬೌಲಿಂಗ್ ಪ್ರದರ್ಶಿಸಿದರು. ಅರ್ಶದೀಪ್ ಸಿಂಗ್ (32 ವಿಕೆಟ್) ಸಹ ಈ ಪಟ್ಟಿಯಲ್ಲಿ ಸಮಬಲ ಸಾಧಿಸಲು ಪ್ರಯತ್ನಿಸಿದರೂ, ಬುಮ್ರಾ ಸದ್ಯ ಅಗ್ರಸ್ಥಾನದಲ್ಲಿ ಮಿಂಚುತ್ತಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಪಡೆದವರು
ಜಸ್ಪ್ರಿತ್ ಬುಮ್ರಾ: 33 ವಿಕೆಟ್*
ರವಿಚಂದ್ರನ್ ಅಶ್ವಿನ್: 32 ವಿಕೆಟ್
ಅರ್ಶದೀಪ್ ಸಿಂಗ್: 32 ವಿಕೆಟ್*
ಹಾರ್ದಿಕ್ ಪಾಂಡ್ಯ: 29 ವಿಕೆಟ್*
ಬುಮ್ರಾ ಅವರ ಈ ಸಾಧನೆಯು ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ. "ಬುಮ್ರಾ ಕೇವಲ ಬೌಲರ್ ಅಲ್ಲ, ತಂಡದ ಆಪತ್ಬಾಂಧವ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘಿಸುತ್ತಿದ್ದಾರೆ,(ಏಜೆನ್ಸೀಸ್).