ಲೈಂಗಿಕ ದೌರ್ಜನ್ಯ ಪ್ರಕರಣದ ಅರೋಪಿ ಮೊಹಮ್ಮದ್ ಅಯಾಜ್ ಮನೆಗೆ ನುಗ್ಗಿದ ಬುಲ್ಡೋಜರ್
- ಲೈಂಗಿಕ ದೌರ್ಜನ್ಯ ಪ್ರಕರಣದ ಅರೋಪಿ ಮೊಹಮ್ಮದ್ ಅಯಾಜ್ ಮನೆಗೆ ನುಗ್ಗಿದ ಬುಲ್ಡೋಜರ್
- ಅನಧಿಕೃತ ಮನೆ ಹೊಂದಿದ್ದ ಹಿನ್ನಲೆ ನೆಲಸಮ ಕಾರ್ಯಾಚರಣೆ
- 180 ಅಪ್ರಾಪ್ತ ಬಾಲಕಿಯರ ಮೇಲೆ ಲೈಗಿಂಕ ದೌರ್ಜನ್ಯವೆಸಗಿದ್ದ ಆರೋಪಿ
ಅಮರಾವತಿ(ಮಹಾರಾಷ್ಟ್ರ): ಸುಮಾರು 180 ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸೆಗಿದ ಮೊಹಮ್ಮದ್ ಅಯಾಜ್ ಅಲಿಯಾಸ್ ತನ್ವೀರ್ (Mohammad Ayaz) ನ ಮನೆ ಅನಧಿಕೃತವಾಗಿದ್ದ ಹಿನ್ನಲೆ ಬುಲ್ಡೋಜ್ರ್ ಮೂಲಕ ನೆಲಸಮ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಆರೋಪಿ ಮೊಹಮ್ಮದ್ ಅಯಾಜ್ ವಾಸಿಸುತ್ತಿದ್ದ ಏಕ ಮಹಡಿ ಮನೆ ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂದು ತಿಳಿದು ಬಂದ ಹಿನ್ನಲೆ ಬುಲ್ಡೋಜ್ರ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನೆಲಸಮ ಕಾರ್ಯಾಚರಣೆ ನಡೆಯುತ್ತಿದ್ದ ಸಮಯದಲ್ಲಿ ಬಿಜೆಪಿ ಶಾಸಕ ಪ್ರವೀಣ್ ತಾಯಡೆ ಸ್ಥಳದಲ್ಲಿ ಹಾಜರಿದ್ದು, ಕಾರ್ಯಾಚರಣೆ ಸುಗಮವಾಗಿ ನಡೆಯುವಂತೆ ನೋಡಿಕೊಂಡಿದ್ದಾರೆ.
180 ಬಾಲಕಿಯನ್ನು ಬಳಸಿಕೊಂಡಿದ್ದ ಪಾಪಿ!
ಸುಮಾರು 180 ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಿಗಿ, ಆ ಹುಡುಗಿಯರ ಹಸಿ-ಬಿಸಿ ವಿಡಿಯೋಗಳನ್ನು ಸೆರೆ ಹಿಡಿದುಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದ ಆರೋಪದಲ್ಲಿ ಶನಿವಾರ (ಏ.11) ಅಮರಾವತಿ ಪೊಲೀಸರು ಮೊಹಮ್ಮದ್ ಅಯಾಜ್ ಅಲಿಯಾಸ್ ತನ್ವೀರ್ (19) ನನ್ನು ಬಂಧಿಸಿದ್ದಾರೆ. ಇವನ ಮೊಬೈಲ್ನಲ್ಲಿ ಸುಮಾರು 300 ಕ್ಕೂ ಅಧಿಕ ಲೈಂಗಿಕ ಕೃತ್ಯಗಳಿಗೆ ಸಂಬಂಧಿಸಿದ ವಿಡಿಯೋಗಳಿದ್ದು, ಕೆಲ ವಿಡಿಯೋ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾದ ನಂತರ ಪೊಲೀಸರು ಇತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ಸ್ಟಾಗ್ರಾಮ್, ಫೇಸ್ಬುಕ್, ಟ್ವಿಟರ್, ಸ್ನ್ಯಾಪ್ಚಾಟ್ ಮೂಲಕ ಅಪ್ರಾಪ್ತ ವಯಸ್ಸಿನ ಹುಡುಗಿಯರ ಜೊತೆ ಸ್ನೇಹ ಬೆಳೆಸಿಕೊಳ್ಳುತ್ತಿದ್ದ ಈತ, ಆ ಹುಡುಗಿಯರನ್ನು ಪುಸಲಾಯಿಸಿ ಮುಂಬೈ ಮತ್ತು ಪುಣೆಗೆ ಕರೆದೊಯ್ಯ್ದು ದೌರ್ಜನ್ಯ ಎಸೆಗುತ್ತಿದ್ದ. ನಂತರ ಅವರ ವಿಡಿಯೋಗಳನ್ನು ಸೆರೆಹಿಡಿದು, ವೇಶ್ಯಾವಾಟಿಕೆಗೆ ತೊಡಗುವಂತೆ ಇಲ್ಲದಿದ್ದರೆ ವಿಡಿಯೋ ಹರಿ ಬಿಡುವುದಾಗಿ ಅಥವಾ ಕೊಲೆ ಮಾಡುವುದಗಿ ಬ್ಲಾಕ್ಮೇಲ್ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಎಐಎಂಐಎಂ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಆರೋಪಿ
ಬಂಧಿತ ಆರೋಪಿ ಮೊಹಮ್ಮದ್ ಅಯಾಜ್ ಇವನು ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಪಕ್ಷದ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಅಚಲ್ಪುರದ ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಪಕ್ಷದ ಸೋಶಿಯಲ್ ಮೀಡಿಯಾ ಖಾತೆಯನ್ನು ಇವನು ನಿರ್ವಹಿಸುತ್ತಿದ್ದ ಎಂಬ ಮಾಹಿತಿ ದೊರೆತಿದೆ, (ಏಜನ್ಸೀಸ್).