ತಮ್ಮನ ಪ್ರಾಣ ಉಳಿಸಲು ಅಣ್ಣನ ಹೋರಾಟ
ಉತ್ತರ ಪ್ರದೇಶ: ಹಾವು ಕಚ್ಚಿ ಗಂಭೀರ ಸ್ಥಿತಿಯಲ್ಲಿದ್ದ ತಮ್ಮನನ್ನು ಬದುಕಿಸಲು ಅಣ್ಣ ಪಟ್ಟ ಹರಸಾಹಸದ ದೃಶ್ಯ ನೋಡಿದ್ರೆ ಎಂಥವರ ಕಣ್ಣಿನಲ್ಲೂ ನೀರು ಬರುತ್ತೆ. ಸಧ್ಯ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಭಾವುಕರಾಗಿದ್ದಾರೆ.
ಹರ್ದೋಯ್ ಜಿಲ್ಲೆಯ ಜ್ಯೋತಿ ನಗರದಲ್ಲಿ ಈ ಘಟನೆ ನಡೆದಿದೆ. ಅರುಣ್ (21) ಹೊಲದಲ್ಲಿ ಕೆಲಸ ಮಾಡುವಾಗ, ಹುಲ್ಲಿನ ಚೀಲದಲ್ಲಿದ್ದ ಹಾವು ಕಚ್ಚಿದೆ. ಹಾವು ಕಡಿದದ ಕೆಲವೇ ಹೊತ್ತಿನಲ್ಲಿ ಅರುಣ್ ಅಸ್ವಸ್ಥನಾಗಿದ್ದು, ತೀವ್ರ ನಿದ್ದೆ ಆವರಿಸಿ ಪ್ರಜ್ಞೆ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದ. ತಕ್ಷಣ ಅಣ್ಣ ಆಕಾಶ್ ತಮ್ಮನನ್ನು ಮೆಡಿಕಲ್ ಕಾಲೇಜಿಗೆ ದಾಖಲಿಸಿದ್ದಾರೆ. ಅರುಣ್ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆ ಆತನನ್ನು ನಿದ್ದೆಗೆ ಜಾರದಂತೆ ನೋಡಿಕೊಳ್ಳಿ ಎಂದು ವೈದ್ಯರು ಸೂಚಿಸಿದ್ದರು.
150ಕ್ಕೂ ಹೆಚ್ಚು ಬಾರಿ ಕೆನ್ನೆ ತಟ್ಟಿದ ಅಣ್ಣ
ಇನ್ನು, ಡಾಕ್ಡರ್ ಹೇಳಿದಂತೆ ಆಕಾಶ್ ಸುಮಾರು ಒಂದು ತಾಸು ತಮ್ಮನ ಪಕ್ಕದಲ್ಲೇ ಕುಳಿತು ಆತ ನಿದ್ರೆಗೆ ಜಾರದಂತೆ ನೋಡಿಕೊಂಡಿದ್ದಾನೆ. ಈ ವೇಳೆ ತಮ್ಮ ಎಚ್ಚರ ತಪ್ಪಬಾರದು ಅಂತ ಆತನ ಕೆನ್ನೆಗೆ 150ಕ್ಕೂ ಹೆಚ್ಚು ಬಾರಿ ಲಘುವಾಗಿ ತಟ್ಟಿದ್ದಾನೆ. ಇನ್ನೊಂದೆಡೆ ವೈದ್ಯರ ತಂಡ ಅರುಣ್‌ಗೆ ತುರ್ತು ಚಿಕಿತ್ಸೆ ನೀಡಿದ್ದು, ಸುಮಾರು ಎರಡು ಗಂಟೆ ಅವಧಿಯಲ್ಲಿ 15 ಆಂಟಿ-ವೆನಮ್ ಇಂಜೆಕ್ಷನ್‌ಗಳನ್ನು ನೀಡಲಾಗಿತ್ತು. ಸಕಾಲದಲ್ಲಿ ಚಿಕಿತ್ಸೆ ಸಿಕ್ಕ ಪರಿಣಾಮ ಅರುಣ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ತಮ್ಮನ ಪ್ರಾಣ ಉಳಿಸಲು ಅಣ್ಣನ ಹೋರಾಟ
ಇತ್ತ, ತಮ್ಮನ ಪ್ರಾಣ ಉಳಿಸಲು ಅಣ್ಣ ಆಕಾಶ್ ಆಸ್ಪತ್ರೆಯಲ್ಲಿ ನಡೆಸಿದ ಈ ಹೋರಾಟದ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಹೋದರನ ಕಾಳಜಿ, ಪ್ರೀತಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಾವು ಕಚ್ಚಿದ ಸಂದರ್ಭದಲ್ಲಿ ಯಾವುದೇ ಮನೆಮದ್ದು ಅಥವಾ ಸೋಷಿಯಲ್ ಮಿಡಿಯಾಕಾಣುವ ವಿಧಾನದಲ್ಲಿ ಹೇಳುವ ವಿಧಾನಗಳನ್ನು ಮಾಡದೆ, ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದುವುದು ಬಹಳ ಮುಖ್ಯ,(ಏಜೆನ್ಸೀಸ್).