ಮೊದಲ ರಾತ್ರಿ ಲೈಂಗಿಕ ಕ್ರಿಯೆಗೆ ಸಹಕರಿಸಲು ವರನ ಬಳಿ 90 ಲಕ್ಷ ರೂ.ಗೆ ಬೇಡಿಕೆ ಇಟ್ಟ ವಧು! ನಂತರ ನಡೆದಿದ್ದೇನು? First Night  
ದೇಶ

ಮೊದಲ ರಾತ್ರಿ ಲೈಂಗಿಕ ಕ್ರಿಯೆಗೆ ಸಹಕರಿಸಲು ವರನ ಬಳಿ 90 ಲಕ್ಷ ರೂ.ಗೆ ಬೇಡಿಕೆ ಇಟ್ಟ ವಧು! ನಂತರ ನಡೆದಿದ್ದೇನು? First Night

ಪ್ರಮುಖ ಮುಖ್ಯಾಂಶಗಳು

  • ಮೊದಲ ರಾತ್ರಿಯಂದು ದೈಹಿಕ ಸಂಬಂಧಕ್ಕಾಗಿ ಪತಿಯ ಬಳಿ 90 ಲಕ್ಷ ರೂ. ಹಣಕ್ಕೆ ಪಟ್ಟು ಹಿಡಿದ ವಧು
  • ಹಣ ನೀಡಲು ನಿರಾಕರಿಸಿದ ಕಾರಣಕ್ಕೆ ತನ್ನ ಒಡವೆಗಳೊಂದಿಗೆ ತವರಿಗೆ ಮರಳಿದ ವಧು
  • ವರನ ಕುಟುಂಬವನ್ನು ಮನೆಯಲ್ಲಿ ಕೂಡಿಹಾಕಿ ಗ್ಯಾಸ್ ಪೈಪ್ ಕತ್ತರಿಸಿ ಬೆಂಕಿ ಹಚ್ಚಲು ಯತ್ನಿಸಿದ ವಧುವಿನ ಕುಟುಂಬ
  • ಕಾಲಕ್ಕೆ ಬಂದ ಪೊಲೀಸರು ವರನ ಕುಟುಂಬವನ್ನು ರಕ್ಷಿಸಿದ್ದು, ಸದ್ಯ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ
First Night : ಮದುವೆ ಎಂಬುದು ಕೇವಲ ಎರಡು ಕುಟುಂಬಗಳ ಸಮಾಗಮವಲ್ಲ, ಅದು ಎರಡು ಜೀವಗಳು ಒಂದಾಗಿ ಸಾಗುವ ಜೀವನದ ಹೊಸ ಅಧ್ಯಾಯ. ಈ ಹೊಸ ಹಾದಿಯ ಮೊದಲ ಹೆಜ್ಜೆಯೇ ' ಮೊದಲ ರಾತ್ರಿ'. ಮದುವೆಯ ಸಂಭ್ರಮ, ಶಾಸ್ತ್ರ-ಸಂಪ್ರದಾಯಗಳ ಗದ್ದಲದ ನಂತರ, ದಂಪತಿಗಳು ಪರಸ್ಪರ ಅರಿತುಕೊಳ್ಳಲು, ಪ್ರೀತಿಯ ಸವಿಮಾತುಗಳನ್ನು ಹಂಚಿಕೊಳ್ಳಲು ಮತ್ತು ಜೀವನಪೂರ್ತಿ ನೆನಪಿಟ್ಟುಕೊಳ್ಳುವಂತಹ ಅದ್ಭುತ ಕ್ಷಣಗಳನ್ನು ಕಳೆಯಲು ಸಿಗುವ ಸುಂದರ ಅವಕಾಶವಿದು. ಆದರೆ, ಈ ಸುಂದರ ಕ್ಷಣ ಇಲ್ಲೊಬ್ಬ ವರನಿಗೆ ಅನಿರೀಕ್ಷಿತ ಆಘಾತವನ್ನು ತಂದೊಡ್ಡಿದೆ.
ಹೌದು, ಮೊದಲ ರಾತ್ರಿಯಂದು ಲೈಂಗಿಕ ಕ್ರಿಯೆಗೆ ಸಹಕರಿಸಲು ವಧುವೊಬ್ಬಳು ವರನ ಬಳಿಕ 90 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟ ವಿಚಿತ್ರ ಘಟನೆ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಜಗದೀಶಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 
ವರದಿಗಳ ಪ್ರಕಾರ, ಮದುವೆ ಸಮಾರಂಭವೂ ಯಾವುದೇ ಅಹಿತಕರ ಘಟನೆಗಳಿಲ್ಲದೆ ಸುಸೂತ್ರವಾಗಿ ನಡೆಯಿತು. ಆದರೆ, ದಂಪತಿ ತಮ್ಮ ಮೊದಲ ರಾತ್ರಿಯಲ್ಲಿ ಒಂದಾಗುವ ಮೊದಲು, ದಾಂಪತ್ಯ ಜೀವನವನ್ನು ಆರಂಭಿಸಲು (ದೈಹಿಕವಾಗಿ ಒಂದಾಗಲು) ವಧುವು ಪತಿಯ ಕುಟುಂಬದವರಿಂದ ಬರೋಬ್ಬರಿ 90 ಲಕ್ಷ ರೂ. ನಗದು ಹಣ ನೀಡಬೇಕೆಂದು ಬೇಡಿಕೆಯಿಟ್ಟಿದ್ದಾಳೆ.
ವಧುವಿನ ಈ ಬೇಡಿಕೆ ಕೇಳಿ ವರನ ಕುಟುಂಬದವರು ಒಂದು ಕ್ಷಣ ದಿಗ್ಭ್ರಮೆಗೊಂಡರು. ಏಕೆಂದರೆ, ಅಷ್ಟೊಂದು ಹಣವನ್ನು ವ್ಯವಸ್ಥೆ ಮಾಡುವುದು ಅವರಿಗೆ ಅಸಾಧ್ಯವಾಗಿತ್ತು. ಯಾವಾಗ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ವರನ ಕುಟುಂಬ ಹೇಳಿತೋ ಅದರಿಂದ ಆಕ್ರೋಶಗೊಂಡ ವಧು, ತನ್ನ ಚಿನ್ನಾಭರಣಗಳು ಸೇರಿದಂತೆ ತನ್ನೆಲ್ಲ ವಸ್ತುಗಳನ್ನು ತೆಗೆದುಕೊಂಡು, ತನ್ನ ತವರಿಗೆ ಮರಳಿದಳು.
ಈ ವಿಚಾರ ಇಷ್ಟಕ್ಕೆ ಮುಗಿಯಲಿಲ್ಲ ಏಕೆಂದರೆ, ಮರುದಿನ ವಧುವಿನ ಕಡೆಯವರು ವರನ ಮನೆಗೆ ಬಂದು ಕುಟುಂಬದವರನ್ನು ಹೊರಗಿನಿಂದ ಲಾಕ್ ಮಾಡಿ ಕೂಡಿಹಾಕಿದರು. ಹಣ ನೀಡಲು ನಿರಾಕರಿಸಿದಾಗ, ಮನೆಯಲ್ಲಿದ್ದವರನ್ನು ಜೀವಂತವಾಗಿ ಸುಡುವ ಉದ್ದೇಶದಿಂದ ವಧುವಿನ ಕಡೆಯವರು ಪೈಪ್‌ಡ್ ನ್ಯಾಚುರಲ್ ಗ್ಯಾಸ್ (PNG) ಸಂಪರ್ಕವನ್ನು ಕಡಿತಗೊಳಿಸಿ ಮನೆಗೆ ಬೆಂಕಿ ಹಚ್ಚಲು ಯತ್ನಿಸಿದರು ಎಂದು ವರದಿಯಾಗಿದೆ.
ವರನ ಕುಟುಂಬವು ತುರ್ತು ಸಂಖ್ಯೆ 112ಕ್ಕೆ ಕರೆ ಮಾಡುವ ಮೂಲಕ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ವರನ ಕುಟುಂಬವನ್ನು ರಕ್ಷಿಸಿ, ಆಗಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದರು.
ಇನ್ನೂ ಈ ಘಟನೆಯಿಂದ ಆತಂಕಗೊಂಡ ಸಂತ್ರಸ್ತ ಕುಟುಂಬವು, ವಧು ಮತ್ತು ಆಕೆಯ ಸಂಬಂಧಿಕರ ವಿರುದ್ಧ ಪೊಲೀಸ್ ದೂರು ದಾಖಲಿಸಿದೆ. ಜಗದೀಶ್‌ಪುರ ಠಾಣೆಯ ಪೊಲೀಸರು ಎರಡೂ ಕಡೆಯವರ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಮೂಲಕ ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಸತ್ಯಾಸತ್ಯತೆ ತಿಳಿದ ನಂತರ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, (ಏಜೆನ್ಸೀಸ್​).