Indian sailor dead in Venezuela organs missing
- ದಕ್ಷಿಣ ಅಮೆರಿಕದ ವೆನೆಜುವೆಲಾದಲ್ಲಿ ರಾಕೇಶ್ ಚೌಹಾಣ್ ಮೃತಪಟ್ಟ ಕೇಸ್
- ವೆನೆಜುವೆಲಾದಿಂದ ಭಾರತಕ್ಕೆ ಬಂದ ಮೃತದೇಹದಲ್ಲಿ ಹೃದಯ, ಮೆದುಳು ಮಾಯಾ
- ಮರಣೋತ್ತರೆ ಪರೀಕ್ಷೆ ಬಗ್ಗೆ ವರದಿ ರವಾನಿಸಸ ಬಗ್ಗೆ ಹೆಚ್ಚಾದ ಆತಂಕ
ನವದೆಹಲಿ: ಮೇನಲ್ಲಿ ದಕ್ಷಿಣ ಅಮೆರಿಕದ ವೆನೆಜುವೆಲಾದಲ್ಲಿ ಉತ್ತರ ಪ್ರದೇಶದ 33 ವರ್ಷದ ರಾಕೇಶ್ ಚೌಹಾಣ್ ಮೃತಪಟ್ಟಿದ್ದಾರೆ ಎನ್ನಲಾಗಿತ್ತು. ರಾಕೇಶ್ ಅವರ ಮೃತದೇಹವನ್ನು ಉತ್ತರ ಪ್ರದೇಶದಲ್ಲಿ ಮರು ಮರಣೋತ್ತರಕ್ಕೆ ಒಳಪಡಿಸಿದಾಗ ಬೆಳಕಿಗೆ ಬಂದ ವಿಚಾರಗಳು ಸದ್ಯ ಆ ವೈದ್ಯರನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ.
ಉತ್ತರ ಪ್ರದೇಶದ ಡಿಯೋರಿಯಾ ನಿವಾಸಿಯಾದ 33 ವರ್ಷದ ರಾಕೇಶ್ ಚೌಹಾಣ್ 2025ರಲ್ಲಿ ಎಕ್ಸ್ಫಿನಿಟಿ ಕಂಪನಿ ಮೂಲಕ ವೆನೆಜುವೆಲಾಗೆ ಹಡಗಿನಲ್ಲಿ ಕೆಲಸಕ್ಕೆ ತೆರಳಿದ್ದರು. ಮೇನಲ್ಲಿ ಅವರು ಮೃತಪಟ್ಟಿದ್ದರು. ಭಾರತಕ್ಕೆ ತಡವಾಗಿ ಮೃತದೇಹ ರವಾನಿಸಿದರೂ ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡಿಲ್ಲ. ಉತ್ತರ ಪ್ರದೇಶದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದಾಗ, ರಾಕೇಶ್ ಅವರ ದೇಹದಲ್ಲಿ ಮೆದುಳು, ಹೃದಯ ಹಾಗೂ ಶ್ವಾಸಕೋಶ ಸೇರಿದಂತೆ ಇನ್ನಿತರ ಭಾಗಗಳು ಕಾಣೆಯಾಗಿರುವ ಬಗ್ಗೆ ಹಾಗೂ ಹಲವಾರು ಹೊಲಿಗೆಗಳು ಕಾಣಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.
FSUI ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಕಾರ ರಾಕೇಶ್ ಅವರ ದೇಹದ ಮೇಲೆ ಯಥೇಚ್ಛವಾಗಿ ಹೊಲಿಗೆ ಹಾಕಲಾಗಿದೆ. ಕುತ್ತಿಗೆಯಿಂದ ದೇಹದ ಕೆಳಭಾಗದವರೆಗೂ 22 ಹೊಲಿಗೆ ಬಿದ್ದಿವೆ. ಹಾಗೂ ಕಿಬವಿಯಿಂದ ಕಿವಿಗೆ 21 ಹೊಲಿಗೆ ಹಾಕಲಾಗಿದೆ ಎನ್ನುವ ಗಂಭೀರ ವಿಚಾರಗಳು ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲದೇ ರಾಕೇಶ್ ಮೃತದೇಹವನ್ನು ಒಂದು ತಿಂಗಳ ಕಾಲ ಫ್ರೀಜ್‌ನಲ್ಲಿ ಇಡಲಾಗಿದೆ. ದೇಹದಲ್ಲಿ ಮೆದುಳು, ಹೃದಯ, ಶ್ವಾಸಕೋಶ, ಯಕೃತ್ತು, ಮೇದೋಜಿರಕಾಂಗ ಸೇರಿದಂತೆ ಹಲವು ಮುಖ್ಯ ಭಾಗ ಕಾಣೆಯಾಗಿದೆ ಎಂದು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ಭಾರತೀಯರ ಸುರಕ್ಷತೆ ಬಗ್ಗೆ ಆತಂಕ
ಸದ್ಯ ರಾಕೇಶ್ ಮೃತದೇಹದಲ್ಲಿ ಕಾಣಿಸಿಕೊಂಡ ಭೀಕರ ಸತ್ಯವು, ವೆನೆಜುವೆಲಾದಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ಸದ್ಯ ಸಾಕಷ್ಟು ಗೊಂದಲ ಎದ್ದಿದೆ. ಹಲವರು ಈ ಬಗ್ಗೆ ಆತಂಕ ವ್ಯಕ್ತಡಿಸಿದ್ದಾರೆ. ಇದು ಸ್ವೀಕಾರಾರ್ಹವಲ್ಲ. ನಾವಿಕರು ಬಲಿಪಶುಗಳಾಗುತ್ತಿದ್ದಾರೆ. ವೆನೆಜುವೆಲಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಂಸ್ಥೆ ಒತ್ತಾಯಿಸಿದೆ.
ಕುಟುಂಬ ಹೇಳಿದ್ದೇನು?
ಮೊದಲಿಗೆ ರಾಕೇಶ್ರ ಕಂಪನಿಯಿಂದ ಕುಟುಂಬಸ್ಥರಿಗೆ, ಅವರು ಹಡಗಿನಲ್ಲಿ ಕೆಲಸ ಮಾಡುವಾಗ ಕೆಳಕ್ಕೆ ಬಿದ್ದು ಗಾಯಗೊಂಡಿದ್ದಾರೆ ಎನ್ನುವ ಕರೆ ಬಂದಿತ್ತು. ಮಾರನೇ ದಿನ ಆತ ಬದುಕೋದು ಶೇ.95ರಷ್ಟು ಕಷ್ಟ ಎಂದಿದ್ದರು. ಸಂಜೆ ವೇಳೆಗೆ ಮೃತಪಟ್ಟಿರುವುದಾಗಿ ಮಾಹಿತಿ ಸಿಕ್ಕಿತ್ತು. ರಾಕೇಶ್ ಮೃತಪಟ್ಟ 60 ದಿನದ ಬಳಿಕ ದೇಹ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯನ್ನು ಸಹ ನೀಡಿಲ್ಲ ಹೀಗಾಗಿ ಇಂದೊಂದು ಅನುಮಾನಸ್ಪದ ಸಾವು ಎಂದು ರಾಕೇಶ್ ತಂದೆ ಆಕ್ರೋಶ ವ್ಯಕ್ತಪಡಿಸಿದರು.
FSUI ಕಿಡಿ
ಸಾಮಾನ್ಯವಾಗಿ ಮರೋಣೋತ್ತರ ಪರೀಕ್ಷೆ ನಡೆಸುವ ಸಂದರ್ಭದಲ್ಲಿ ದೇಹದ ಕೆಲವು ಅಂಗಾಂಗವನ್ನು ತೆಗೆದು ಪರೀಕ್ಷಿಸಲಾಗುತ್ತದೆ. ಆದರೆ ಯಾವುದೇ ಆಟೋಪ್ಸಿ ರಿಪೋರ್ಟ್ ನೀಡದೆ ಅಥವಾ ವಿವರಣೆಯನ್ನು ನೀಡದೆ, ಇಷ್ಟೆಲ್ಲ ಅಂಗಾಂಗ ತೆಗೆದು ಹಾಕಿರುವುದು ಸಾವಿನ ಹಿಂದಿನ ರಹಸ್ಯವೇನು ಎನ್ನುವ ಸಂಶಯಕ್ಕೆ ಎಡೆ ಮಾಡಿಕೊಟ್ಟಂತಾಗಿದೆ.
ಈ ಘಟನೆಯನ್ನು ಸಾಮಾನ್ಯ ಎಂದು ಕಡೆಗಣನೆ ಮಾಡಲು ಸಾಧ್ಯವಿಲ್ಲ ವೆನೆಜುವೆಲಾದಲ್ಲಿ ಭಾರತೀಯರನ್ನು ಬಲಿಪಶುಗಳಾಗಿ ಪರಿಗಣನೆ ಮಾಡಲಾಗುತ್ತಿದೆ. ರಾಕೇಶ್ ಸಾವಿನ ಹೊಣೆಯಲ್ಲಿ ಅಲ್ಲಿನ ಸರ್ಕಾರ ಹಾಗೂ ಹಡಗು ಕಂಪನಿ ಹೊರಬೇಕು ಎಂದು ಕಿಡಿಕಾರಿದರು, (ಏಜೆನ್ಸೀಸ್).