Boston Marathon (ಸಾಂದರ್ಭಿಕ ಚಿತ್ರ) 
ದೇಶ

ಗೆಲುವಿಗಿಂತ ಮಾನವೀಯತೆಯೇ ದೊಡ್ಡದು! ಮ್ಯಾರಥಾನ್‌ನಲ್ಲಿ ಕುಸಿದು ಬಿದ್ದ ಓಟಗಾರನಿಗೆ ಸಹ ಸ್ಪರ್ಧಿಗಳ ಆಸರೆ; ವಿಡಿಯೋ ವೈರಲ್ Boston Marathon

Boston Marathon: ಬೋಸ್ಟನ್ ಮ್ಯಾರಥಾನ್‌ನಲ್ಲಿ ಕ್ರೀಡಾ ಮನೋಭಾವದ ಪ್ರಬಲ ಪ್ರದರ್ಶನದಲ್ಲಿ, ಇಬ್ಬರು ಓಟಗಾರರು ತಮ್ಮ ಜೀವನದ ಶ್ರೇಷ್ಠ ಸಾಧನೆ ಮಾಡುವ ಅವಕಾಶವಿದ್ದರೂ, ಅದನ್ನು ಲೆಕ್ಕಿಸದೆ ಸಂಕಷ್ಟದಲ್ಲಿದ್ದ ಸಹ ಸ್ಪರ್ಧಿಯ ನೆರವಿಗೆ ಧಾವಿಸಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಘಟನೆ ಏನು?

ಸುಮಾರು ಮೂರು ಗಂಟೆಗಳ ಓಟದ ನಂತರ ಅಂತಿಮ ಗೆರೆ ಸ್ವಲ್ಪ ಮುಂದಿರುವಾಗ ಮ್ಯಾರಥಾನ್​ ಓಟಗಾರ ಅಜಯ್​ ಹರಿದಾಸೆ ತೀವ್ರ ಆಯಾಸದಿಂದಾಗಿ 26 ಮೈಲಿಯ ಗಡಿಯ ಹತ್ತಿರ ಕುಸಿದು ಬಿದ್ದರು. ಈ ವೇಳೆ ಅವರು ಪುನಃ ಎದ್ದು ನಿಲ್ಲಲು ಪ್ರಯತ್ನಿಸುತ್ತಿದ್ದರೂ ಕೂಡಾ ವಿಫಲವಾಗುತ್ತಿರುವುದನ್ನು ಪ್ರೇಕ್ಷಕರು ಆತಂಕದಿಂದ ನೋಡುತ್ತಿದ್ದಾರೆ.
ನಾರ್ತ್ ಡೌನ್ ಅಥ್ಲೆಟಿಕ್ ಕ್ಲಬ್ ಅನ್ನು ಪ್ರತಿನಿಧಿಸುವ ಉತ್ತರ ಐರ್ಲೆಂಡ್‌ನ ಅಥ್ಲೀಟ್ ಆರನ್ ಬೆಗ್ಸ್, ಓಡುತ್ತಿರುವಾಗ ಹರಿದಾಸ್ಸೆ ಮುಂದುವರಿಯಲು ಸಾಧ್ಯವಾಗದೇ ಇರುವುದನ್ನು ನೋಡಿ ತಕ್ಷಣವೇ ಅವರ ಸಹಾಯಕ್ಕೆ ಬಂದು ಅವರನ್ನು ಎತ್ತಲು ಪ್ರಯತ್ನಿಸುತ್ತಿದ್ದರು.
ಈ ವೇಳೆ ಅವರೊಬ್ಬರಿಗೆ ಎತ್ತಲು ಸಾಧ್ಯವಾಗದೇ ಇದ್ದಾಗ ಮ್ಯಾರಾಥಾನ್​ನಲ್ಲಿ ಓಡುತ್ತಿದ್ದ ಬ್ರೆಜಿಲಿಯನ್ ಓಟಗಾರ ರಾಬ್ಸನ್ ಡಿ ಒಲಿವೇರಾ ಕೂಡಾ ಅವರ ಸಹಾಯಕ್ಕೆ ಬಂದರು. ನಂತರ ಇಬ್ಬರು ಓಟಗಾರರು ಹರಿದಾಸೆಯ ತೋಳುಗಳನ್ನು ತಮ್ಮ ಭುಜಗಳ ಸುತ್ತಲೂ ಹಿಡಿದುಕೊಂಡು ಅಂತಿಮ ಗೆರೆಯನ್ನು ತಲುಪಲು ಸಹಾಯ ಮಾಡಿದರು.
ಈ ಮೂವರು ಅಂತಿಮವಾಗಿ ಒಟ್ಟಿಗೆ ಓಡುತ್ತಿರುವುದನ್ನು ನೋಡಿದಂತಹ ಪ್ರೇಕ್ಷಕರು ಜೋರಾಗಿ ಹರ್ಷೋದ್ಗಾರ ಹಾಕಲು ಪ್ರಾರಂಭಿಸಿದ್ದು, ಅವರ ಸ್ಪರ್ಧಾತ್ಮಕ ಕ್ರೀಡೆಯಲ್ಲಿನ ಏಕತೆ ಮತ್ತು ಸಹಾನುಭೂತಿಯ ಅಪರೂಪದ ಕ್ಷಣವನ್ನು ಶ್ಲಾಘಿಸಿದರು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಕ್ರೀಡಾಪಟುಗಳನ್ನು ಶ್ಲಾಘಿಸಿದ್ದು, ಒಬ್ಬ ಬಳಕೆದಾರರು ಅಂತಿಮ ಸಮಯವನ್ನು ಬೆನ್ನಟ್ಟುವ ಬದಲು, ಬೆಗ್ಸ್ ಮತ್ತು ಡಿ ಒಲಿವೇರಾ ಸಹ ಕ್ರೀಡಾಪಟುವಿನ ಯೋಗಕ್ಷೇಮಕ್ಕೆ ಆದ್ಯತೆ ನೀಡಿದರು, ಇದನ್ನು ಅನೇಕ ವೀಕ್ಷಕರು ಮ್ಯಾರಥಾನ್ ಓಟದ ನಿಜವಾದ ಉತ್ಸಾಹ ಎಂದು ಕಾಮೆಂಟ್​ ಮಾಡಿದ್ದಾರೆ (ಏಜೆನ್ಸೀಸ್​).