ಮುಂಬೈ:ಮದೀನಾದಿಂದ ಹೈದರಾಬಾದ್‌ಗೆ ಹೊರಟಿದ್ದ ಬಾಂಬ್ ಬೆದರಿಕೆ(Bomb threat) ಕರೆ ಬಂದ ತಕ್ಷಣ ಬೇರೆಡೆಗೆ ತಿರುಗಿಸಲಾಗಿದೆ. ಅಲ್ಲದೆ, ಶಾರ್ಜಾದಿಂದ ಹೊರಟಿದ್ದ ಮತ್ತೊಂದು ವಿಮಾನಕ್ಕೂ ಬೆದರಿಕೆ ಕರೆ ಬಂದ ಹಿನ್ನೆಲೆ ಮುಂಬೈಗೆ ಕಡೆ ತಿರುಗಿಸಲಾಗಿದೆ ಎಂದು ವರದಿಯಾಗಿದೆ.
ಗುರುವಾರ ಮುಂಜಾನೆ ಮದೀನಾ-ಹೈದರಾಬಾದ್ ಇಂಡಿಗೋ ವಿಮಾನವು ಅಹಮದಾಬಾದ್ ಏರ್ಪೋಟ್ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಏಕೆಂದರೆ ವಿಮಾನವು ತನ್ನ ಗಮ್ಯಸ್ಥಾನದಲ್ಲಿ ಇಳಿಯಲು ಅನುಮತಿಸಿದರೆ ಅದನ್ನು ಸ್ಫೋಟಿಸಲಾಗುವುದು ಎಂದು ಇಮೇಲ್ ಎಚ್ಚರಿಕೆ ನೀಡಲಾಗಿತ್ತು.
ಫ್ಲೈಟ್‌ರಾಡಾರ್ 24 ರ ದತ್ತಾಂಶದ ಆಧಾರದ ಮೇಲೆ, ವಿಮಾನವು ಯುಎಇಯ ಶಾರ್ಜಾದಿಂದ ಹೊರಟು ಹೈದರಾಬಾದ್‌ಗೆ ತೆರಳುತ್ತಿತ್ತು. ಆದರೆ, ಬಾಂಬ್ ಬೆದರಿಕೆ ಪತ್ತೆಯಾದ ನಂತರ ಅದನ್ನು ಮಧ್ಯದ ಗಾಳಿಯಲ್ಲಿ ತಿರುಗಿಸಿ ಮುಂಬೈನಲ್ಲಿ ಇಳಿಸಲಾಯಿತು. ಇಂಡಿಗೋದಿಂದ ಅಧಿಕೃತ ಹೇಳಿಕೆ ಬಂದಿಲ್ಲ.
ಇಮೇಲ್ ಮೂಲಕ ಬಾಂಬ್ ಬೆದರಿಕೆ
ಹೈದರಾಬಾದ್ (ವಿಮಾನ ನಿಲ್ದಾಣ) ಅಧಿಕಾರಿಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ನಂತರ ವಿಮಾನ ಅಹಮದಾಬಾದ್‌ನಲ್ಲಿ ಇಳಿಯಿತು. ವಿಮಾನವನ್ನು ಹೈದರಾಬಾದ್‌ನಲ್ಲಿ ಇಳಿಸಲು ಅನುಮತಿಸಿದರೆ, ಬಾಂಬ್ ಸ್ಫೋಟಿಸಲಾಗುವುದು ಎಂದು ಮೇಲ್‌ನಲ್ಲಿ ಬೆದರಿಕೆ ಹಾಕಲಾಗಿತ್ತು. ಪರಿಣಾಮವಾಗಿ, ಅಹಮದಾಬಾದ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು" ಎಂದು ಅಹಮದಾಬಾದ್ ವಲಯ ನಾಲ್ಕನೇ ಉಪ ಪೊಲೀಸ್ ಆಯುಕ್ತ ಅತುಲ್ ಬನ್ಸಾಲ್ ತಿಳಿಸಿದ್ದಾರೆ,(ಏಜೆನ್ಸೀಸ್).