ಇಂಡಿಗೋ ವಿಮಾನ  
ದೇಶ

ಪ್ರಯಾಣಿಕರ ಹ್ಯಾಂಡ್​ರೈಟಿಂಗ್... ಟಿಶ್ಯೂನಲ್ಲಿ ಬಾಂಬ್​ ಬೆದರಿಕೆ ಬೆನ್ನಲ್ಲೇ ಇಂಡಿಗೋ ವಿಮಾನ ದಿಢೀರ್​ ಭೂಸ್ಪರ್ಶ | Indigo Flight

ಪ್ರಮುಖ ಮುಖ್ಯಾಂಶಗಳು

  • ಟಿಶ್ಯೂ ಪೇಪರ್ ಮೇಲೆ ಬಾಂಬ್ ಬೆದರಿಕೆ
  • ಅಹಮದಾಬಾದ್‌ನಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ
  • 10 ದಿನಗಳ ಅವಧಿಯಲ್ಲಿ ಒಂದೇ ರೀತಿಯ ಎರಡೂ ಪ್ರಕರಣ
ಗುಜರಾತ್​: ದಮಾಮ್‌ಗೆ ಹೊರಟ್ಟಿದ್ದ ಇಂಡಿಗೋ ವಿಮಾನದಲ್ಲಿ ಬಾಂವ್ ಬೆದರಿಕೆ ಬಂದ ಬೆನ್ನಲ್ಲೇ ವಿಮಾನವನ್ನು ( IndiGo ) ದಿಢೀರ್​ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು.
ಗುರುವಾರ (ಸೆ.10) ಸಂಜೆ ನಡೆದ ಈ ಘಟನೆಯಲ್ಲಿ, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮತ್ತು ಬಾಂಬ್ ಸ್ಕ್ವಾಡ್ ಸೇರಿದಂತೆ ಹಲವು ತನಿಖಾ ಸಂಸ್ಥೆಗಳು ತನಿಖೆ ನಡೆಸಿದ್ದು, ಬಾಂಬ್ ಎಂದು ಬರೆದ ಟಿಶ್ಯೂ ಪೇಪರ್​ ಅನ್ನು ಸದ್ಯಕ್ಕೆ ವಶಪಡಿಸಿಕೊಳ್ಳಲಾಗಿದೆ. ಅಸಲಿಗೆ, ಇದನ್ನು ಯಾರು ಬರೆದಿದ್ದಾರೆ ಎಂಬುದನ್ನು ಪತ್ತೆಹಚ್ಚಲು ತನಿಖಾ ದಳ, ವಿಮಾನದೊಳಗಿದ್ದ 133 ಪ್ರಯಾಣಿಕರು ಮತ್ತು ಸಿಬ್ಬಂದಿಗಳ ಹ್ಯಾಂಡ್​ರೈಟಿಂಗ್ ಅನ್ನು ಪರಿಶೀಲಿಸಿದೆ.

ಎರಡನೇ ಪ್ರಕರಣ ಇದು

ಸಂಜೆ 5:55ರ ಸುಮಾರಿಗೆ ಲಖನೌ-ದಮ್ಮಾಮ್ ಮಾರ್ಗವಾಗಿ ಇಂಡಿಗೋ ವಿಮಾನವು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಬೆದರಿಕೆ ಬೆನ್ನಲ್ಲೇ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ ಒಟ್ಟು 133 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ವಿಮಾನದಲ್ಲಿ ಬಾಂಬ್ ಎಂದು ಬರೆದ ಟಿಶ್ಯೂ ಪೇಪರ್ ಪತ್ತೆಯಾದ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡುವ ನಿರ್ಧಾರ ಕೈಗೊಳ್ಳಲಾಯಿತು ಎಂದು ವರದಿಯಾಗಿದೆ.
ಘಟನೆಯ ತನಿಖೆಯ ಭಾಗವಾಗಿ ಪ್ರಯಾಣಿಕರಿಂದ ಕೈಬರಹದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಟಿಶ್ಯೂ ಪೇಪರ್ ಮೇಲೆ ಬರೆಯುವಂತೆ ಪ್ರಯಾಣಿಕರಿಗೆ ತನಿಖಾ ದಳ ತಿಳಿಸಿತು. ಇಲ್ಲಿ ಯಾರ ಕೈಬರಹವು ಪತ್ತೆಯಾದ ಬಾಂಬ್ ಮೆಸೇಜ್​ನೊಂದಿಗೆ ಮ್ಯಾಚ್​ ಆಗಬಹುದು ಎಂಬ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ. ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿ ಮತ್ತು ಬಾಂಬ್ ಸ್ಕ್ವಾಡ್ ಸೇರಿದಂತೆ ಹಲವು ಇಲಾಖೆಗಳು ಘಟನೆಯ ತನಿಖೆಯನ್ನು ಮುಂದುವರೆಸಿದೆ.

10 ದಿನಗಳಲ್ಲಿ ಎರಡನೇ ತುರ್ತು ಲ್ಯಾಂಡಿಂಗ್

10 ದಿನಗಳಲ್ಲಿ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಇದು ಎರಡನೇ ತುರ್ತು ಭೂಸ್ಪರ್ಶ ಘಟನೆಯಾಗಿದೆ. ಇದಕ್ಕೂ ಮುನ್ನ ಏರ್ ಇಂಡಿಯಾ ಎಕ್ಸ್​ಪ್ರೆಸ್ ವಿಮಾನ ಕೂಡ ಅಹಮದಾಬಾದ್​ನಲ್ಲಿ ಇದೇ ರೀತಿಯ ಟಿಶ್ಯೂ ಪೇಪರ್​ನಲ್ಲಿ ಬರೆದ ಬಾಂಬ್​ ಬೆದರಿಕೆಗೆ ತುರ್ತು ಭೂಸ್ಪರ್ಶ ಮಾಡಿತು. ಆ ಘಟನೆಯ ತನಿಖೆಯ ವೇಳೆ ಸಿಬ್ಬಂದಿಯ ಹೆಸರನ್ನೂ ಚರ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ, ಇಂಡಿಗೋ ವಿಮಾನದಲ್ಲಿ ಬಂದಿರುವ ಬಾಂಬ್ ಸಂದೇಶದ ಹಿಂದಿನ ನಿಜವಾದ ಕಾರಣವನ್ನು ಕಂಡುಹಿಡಿಯಲು ತನಿಖಾ ಸಂಸ್ಥೆಗಳು ಚುರುಕು ತನಿಖೆಗೆ ಮುಂದಾಗಿವೆ,(ಏಜೆನ್ಸೀಸ್).