ಭಂಗಾರ್​ ಪ್ರದೇಶದ ಟಿಎಮ್​ಸಿ ಕಾರ್ಯಕರ್ತನ ಮನೆಯಲ್ಲಿ 100 ಬಾಂಬ್​ಗಳು ಪತ್ತೆ 
ದೇಶ

ಬಂಗಾಳದಲ್ಲಿ ಬಾಂಬ್ ಪಾಲಿಟಿಕ್ಸ್: ಟಿಎಮ್​ಸಿ ಕಾರ್ಯಕರ್ತನ ಮನೆ ಮೇಲೆ ರೇಡ್​; 100 ಜೀವಂತ ಸ್ಫೋಟಕಗಳ ಜಪ್ತಿ! West Bengal Election

ಪ್ರಮುಖ ಮುಖ್ಯಾಂಶಗಳು

  • ರಂಗೇರಿದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ
  • ಭಂಗಾರ್​ ಪ್ರದೇಶದ ಟಿಎಮ್​ಸಿ ಕಾರ್ಯಕರ್ತನ ಮನೆಯಲ್ಲಿ 100 ಬಾಂಬ್​ಗಳು ಪತ್ತೆ
  • ಚುನಾವಣೆ ಸೋಲುವ ಹಿನ್ನಲೆ ಹಿಂಸಾಚಾರಕ್ಕೆ ಯತ್ನ ಎಂದ ಬಿಜೆಪಿ
ಪಶ್ಚಿಮ ಬಂಗಾಳ: ಭಾರತದಲ್ಲಿ ಸದ್ಯ ಪಂಚರಾಜ್ಯ ಚುನಾವಣಾ ಕಾಳಗ ಜೋರಾಗಿದ್ದು, ಅದರಲ್ಲೂ ಈ ಭಾರಿಯ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ (West Bengal Election) ಭಾರಿ ಕುತೂಹಲವನ್ನು ಸೃಷ್ಟಿಸಿದೆ. ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು ಎರಡನೇ ಹಂತದ ಮತದಾನ ಏಪ್ರಿಲ್​ 29 ರಂದು ನಡೆಯಲಿದೆ.
ಈ ಮಧ್ಯೆ ಭಾನುವಾರ (ಏ.26) ಬಿಜೆಪಿ ಪಕ್ಷದ ರಾಷ್ಟ್ರೀಯ ವಕ್ತಾರ ಪ್ರದೀಪ್​ ಭಂಡಾರಿ, ಬಂಗಾಳದ ಭಂಗಾರ್​ನಲ್ಲಿ ಟಿಎಮ್​ಸಿ ಕಾರ್ಯಕರ್ತರಿಂದ ಭಾರಿ ಪ್ರಮಾಣದ ಬಾಂಬ್​ಗಳನ್ನು ವಶ ಪಡಿಸಿ ಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಈ ನಾಡ್​ಬಾಂಬ್​ಗಳನ್ನು ತ್ರಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮನೆಯಲ್ಲಿ ಜಪ್ತಿ ಮಾಡಲಾಗಿದೆ ಎಂದು ಪ್ರದೀಪ್​ ಭಂಡಾರಿ ಹೇಳಿದ್ದಾರೆ.

ಸೋಲಿನ ಭಯದಿಂದ ಹಿಂಸಾಚಾರಕ್ಕೆ ಯತ್ನ!

ಈ ಕುರಿತು ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್​ (ಟ್ವಿಟರ್​) ಖಾತೆಯಲ್ಲಿ ಮಾಹಿತಿ ಹಂಚಿ ಕೊಂಡಿರುವ ಪ್ರದೀಪ್​ ಭಂಡಾರಿ, ಟಿಎಮ್​ಸಿ ಕಾರ್ತಕರ್ತ ರಫೀಕುಲ್​ ಇಸ್ಲಾಂನ ಮನೆಯಲ್ಲಿ ಸುಮಾರು 100 ಜೀವಂತ ಬಾಂಬ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಭಾರಿಯ ಚುನಾವಣೆಯಲ್ಲಿ ಸೋಲು ಖಚಿತವಾಗಿರುವ ಹಿನ್ನಲೆಯಲ್ಲಿ ಆಡಳಿತ ಪಕ್ಷ ಹಿಂಸಾಚಾರ ನಡೆಸಲು ಮುಂದಾಗಿದೆ ಎಂದು ಅವರು ಬರೆದು ಕೊಂಡಿದ್ದಾರೆ.
ಚುನಾವಣಾ ಆಯೋಗದಿಂದ ಖಡಕ್​ ಆದೇಶ
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಚುನಾವಣಾ ಆಯೋಗದ ಅಧಿಕಾರಿಗಳು, ಈ ಭಾರಿ ಚುನಾವಣಾ ಹಂತ ಅಥವಾ ಚುನಾವಣಾ ನಂತರ ರಾಜ್ಯದಲ್ಲಿ ಯಾವುದೇ ರೀತಿಯ ಹಿಂಸಾಚಾರ ನಡೆಯದಂತೆ ನೋಡಿಕೊಳ್ಳಬೇಕೆಂದು ಬಂಗಾಳ್​ ಪೊಲೀಸರಿಗೆ ಹಾಗೂ ಭದ್ರತಾ ಸಿಬ್ಬಂದಿಗಳಿಗೆ ಖಡಕ್​ ಎಚ್ಚರಿಕೆ ನೀಡಿದೆ.
ಎಲ್ಲಿಯಾದರೂ ಹಿಂಸಾಚಾರನ್ನು ನಡೆಸುವ ಯೋಜನೆ ರೂಪಿಸುತ್ತಿರುವ ಅಥವಾ ಸ್ಪೋಟಕಗಳು, ಮದ್ದು ಗುಂಡುಗಳ ದಾಸ್ತಾನು ಮಾಡುತ್ತಿರುವ ಮಾಹಿತಿ ದೊರೆತಲ್ಲಿ ತಕ್ಷಣ ಕ್ರಮ ಕೈಗೊಳ್ಳಲು ಖಾಕಿ ಪಡೆಗೆ ಮುಕ್ತ ಅವಕಾಶವನ್ನು ಚುನಾವಣಾ ಆಯೋಗ ನೀಡಿದೆ.

ಯಾವುದೇ ರೀತಿಯ ಹಿಂಸಾಚಾರ ನಡೆಯಲ್ಲ!

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಬಂಗಾಳ ಪೊಲೀಸ್​ ಜಂಟಿ ಆಯುಕ್ತ ಅಜಯ್​ ನಂದ್​, ಈ ಸಲ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ನಾವು ನಿಯಮಿತವಾಗಿ ರೌಡಿ ಪರೇಡ್​ ನಡೆಸುವುದು, ಅನುಮಾನ ಬಂದ ವ್ಯಕ್ತಿಗಳನ್ನು ಬಂಧಿಸುವುದು ಹಾಗೂ ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿದ್ದಾಗಿ ತಿಳಿಸಿದ್ದಾರೆ, (ಏಜನ್ಸೀಸ್​).