ಮುಂಬೈ: ಭಾರಿ ಕೂತುಹಲ ಮೂಡಿಸಿದ್ದ ಮಹಾರಾಷ್ಟ್ರದ ರಾಜಧಾನಿ ಮುಂಬೈ ಮಹಾನಗರ ಪಾಲಿಕೆ ಮತ್ತು 28 ಪುರಸಭೆಗಳ ಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಆರಂಭಿಕವಾಗಿ ಬಿಜೆಪಿ ನೇತೃತ್ವದ ಮಹಾಯುತಿ ಮುನ್ನಡೆ ಸಾಧಿಸಿದೆ. ಠಾಕ್ರೆ ಬ್ರದರ್ಸ್ ಹಿನ್ನಡೆ ಅನುಭವಿಸಿದ್ದಾರೆ.
ಮುಂಬೈನ ಪಾಲಿಕೆಯ 227 ವಾರ್ಡ್ಗಳು ಸೇರಿ ಮಹಾರಾಷ್ಟ್ರ 28 ಪುರಸಭೆಗಳ 893 ವಾರ್ಡ್ಗಳ 2,869 ಸ್ಥಾನಗಳಿಗೆ ನಿನ್ನೆ ಮತದಾನ ನಡೆದಿತ್ತು.
ಬೃಹನ್ಮುಂಬೆ ಮಹಾನಗರ ಪಾಲಿಕೆ ಅಷ್ಟೇ ಅಲ್ಲದೇ, ಪುಣೆ ಮಹಾನಗರ ಪಾಲಿಕೆ, ಛತ್ರಪತಿ ಸಂಭಾಜಿನಗರ, ನವಿ ಮುಂಬೈ, ವಸಾಯಿ-ವಿರಾರ್, ಕಲ್ಯಾಣ್-ಡೊಂಬಿವಿಲಿ, ಕೊಲ್ಲಾಪುರ, ನಾಗ್ಪುರ, ಸೋಲಾಪುರ, ಅಮರಾವತಿ, ಅಕೋಲಾ, ನಾಸಿಕ್, ಪಿಂಪ್ರಿ-ಚಿಂಚ್‌ವಾಡ್, ಪುಣೆ, ಉಲ್ಲಾಸನಗರ, ಥಾಣೆ, ಚಂದ್ರಾಪುರ, ಥಾಣೆ, ಮಿನರಾರ್, ನಾಂದೇಡ್-ವಘಲಾ, ಪನ್ವೇಲ್, ಭಿವಂಡಿ-ನಿಜಾಂಪುರ್, ಲಾತೂರ್, ಮಾಲೆಗಾಂವ್, ಸಾಂಗ್ಲಿ-ಮಿರಜ್-ಕುಪ್ವಾಡ್, ಜಲಗಾಂವ್, ಅಹಲ್ಯಾನಗರ, ಧುಲೆ, ಜಲ್ನಾ ಮತ್ತು ಇಚಲಕರಂಜಿ ಪುರಸಭೆಗಳಲ್ಲಿ ಚುನಾವಣೆ ನಡೆದಿತ್ತು.