- ಲವ್ವರ್ ಜೊತೆ ಸೇರಿಕೊಂಡು ಪತಿ ಕೊಂದ ಮಹಿಳೆ
ಮುಂಬೈ: ( blue drum case) ಮಾರ್ಚ್ 2025 ರಲ್ಲಿ ತನ್ನ ಗಂಡನನ್ನು ಕೊಂದು ನೀಲಿ ಡ್ರಮ್‌ನಲ್ಲಿ ಬಚ್ಚಿಟ್ಟಿದ್ದ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮುಸ್ಕಾನ್ ಜೈಲು ಶಿಕ್ಷೆ ಅನುಭವಿಸುತ್ತಿರುವಾಗಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಮುಸ್ಕಾನ್ ಜೈಲು ಶಿಕ್ಷೆ ಅನುಭವಿಸುತ್ತಿರುವಾಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಮುಸ್ಕಾನ್ ತನ್ನ ಗೆಳೆಯನ ಮೂಲಕ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಅತ್ತೆ-ಮಾವಂದಿರು ಶಂಕಿಸಿ ಡಿಎನ್ಎ ಪರೀಕ್ಷೆಗೆ ಒತ್ತಾಯಿಸುತ್ತಿದ್ದಾರೆ.
ನೀಲಿ ಡ್ರಮ್ ಕೊಲೆ ಪ್ರಕರಣದ ಹಿನ್ನೆಲೆ:
ಈ ವರ್ಷದ ಮಾರ್ಚ್ 4 ರಂದು, ಉತ್ತರ ಪ್ರದೇಶದ ಮೀರತ್‌ನ ಮುಸ್ಕಾನ್ ರಸ್ತೋಗಿ ತನ್ನ ಗೆಳೆಯ ಸಾಹಿಲ್ ಶುಕ್ಲಾ ಜೊತೆಗೂಡಿ ತನ್ನ ಪತಿ ಸೌರಭ್ ರಜಪೂತ್ ಅವರನ್ನು ಕೊಲೆ ಮಾಡಿದಳು. ನಂತರ, ಅವರು ಪತಿಯ ದೇಹವನ್ನು ತುಂಡುಗಳಾಗಿ ಕತ್ತರಿಸಿ, ಡ್ರಮ್‌ನಲ್ಲಿ ಹಾಕಿ ಮೇಲೆ ಸಿಮೆಂಟ್ ತುಂಬಿಸಿದರು.
ಪತಿಯ ಹತ್ಯೆಯ ನಂತರ, ಮುಸ್ಕಾನ್ ತನ್ನ ಗೆಳೆಯ ಸಾಹಿಲ್ ಜೊತೆ ಶಿಮ್ಲಾಕ್ಕೆ ಹೋಗಿ ಅಲ್ಲಿ ನೆಲೆಸಿದ್ದಳು. ಮಾರ್ಚ್ 17 ರಂದು ಅವರು ಮೀರತ್‌ಗೆ ಹಿಂತಿರುಗಿದರು. ಶವವಿದ್ದ ನೀಲಿ ಡ್ರಮ್ ಅನ್ನು ಎಸೆಯಲು ಪ್ರಯತ್ನಿಸಿದಾಗ, ಆಕೆಯ ಪತಿ ಸೌರಭ್‌ನ ಕೊಲೆ ಬೆಳಕಿಗೆ ಬಂದಿತು. ಪರಿಣಾಮವಾಗಿ, ಪೊಲೀಸರು ಮುಸ್ಕಾನ್ ಮತ್ತು ಆಕೆಯ ಗೆಳೆಯ ಸಾಹಿಲ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ನ್ಯಾಯಾಲಯವು ಎಲ್ಲಾ ಸಾಕ್ಷಿಗಳನ್ನು ಪರಿಶೀಲಿಸಿ ಅವರಿಗೆ ಶಿಕ್ಷೆ ವಿಧಿಸಿತು. ಅಂದಿನಿಂದ, ಅವರಿಬ್ಬರೂ ಜೈಲಿನಲ್ಲಿದ್ದಾರೆ. ಏಪ್ರಿಲ್‌ನಲ್ಲಿ, ಜೈಲಿನಲ್ಲಿ ಕೈದಿಗಳಿಗೆ ನಡೆಸಲಾದ ನಿಯಮಿತ ವೈದ್ಯಕೀಯ ಪರೀಕ್ಷೆಗಳಲ್ಲಿ, ಮುಸ್ಕಾನ್ ಗರ್ಭಿಣಿಯಾಗಿದ್ದಾಳೆಂದು ದೃಢಪಟ್ಟಿತು. ಅಪರಾಧ ಸಾಬೀತಾಗುವ ಹೊತ್ತಿಗೆ ಮುಸ್ಕಾನ್ ಗರ್ಭಿಣಿಯಾಗಿದ್ದಳು.
ಆರೋಪಿ ಮುಸ್ಕಾನ್ ನವೆಂಬರ್ 24 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದಳು. ತನ್ನ ಮಗುವಿಗೆ 'ರಾಧಾ' ಎಂದು ಹೆಸರಿಟ್ಟಳು. ಮಗು ಜನಿಸಿದ ದಿನ ಅದು ಸೌರಭ್ ರಜಪೂತ್ ಅವರ ಜನ್ಮದಿನವೂ ಆಗಿದೆ.
ಜೈಲು ಸೂಪರಿಂಟೆಂಡೆಂಟ್ ವೀರೇಶ್ ರಾಜ್ ಶರ್ಮಾ ಮಾತನಾಡಿ, ನವಜಾತ ಶಿಶುವಿನ ತೂಕ 2.4 ಕೆಜಿ ಇದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಹೆಣ್ಣು ಮಗುವಿಗೆ ಜನ್ಮ ನೀಡಿದ ಮುಸ್ಕಾನ್‌ಗೆ ಜೈಲಿನ ಮಹಿಳಾ ಬ್ಯಾರಕ್‌ಗಳಲ್ಲಿ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗುವುದು. ನವಜಾತ ಶಿಶುವಿಗೆ ಅಗತ್ಯವಾದ ಬಟ್ಟೆ, ಪೋಷಣೆ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುವುದು. ಮಗುವಿಗೆ ಆರು ವರ್ಷ ತುಂಬುವವರೆಗೆ ತಾಯಿಯೊಂದಿಗೆ ಜೈಲಿನಲ್ಲಿ ಉಳಿಯಬಹುದು ಎಂದು ಅವರು ಹೇಳಿದರು. ಆದರೆ ಕಾನೂನು ಏನು ಹೇಳುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ತನ್ನ ಗೆಳೆಯನೊಂದಿಗೆ ತನ್ನ ಗಂಡನನ್ನು ಕೊಂದ ಮುಸ್ತಾನ್, ಸೌರಭ್ ಜನಿಸಿದ ನವೆಂಬರ್ 24 ರಂದು ಕಾಕತಾಳೀಯವಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಆದರೆ, ಆಕೆಯ ಅತ್ತೆ-ಮಾವಂದಿರು ತನ್ನ ಗೆಳೆಯ ಸಾಹಿಲ್ ಮೂಲಕ ಗರ್ಭಿಣಿಯಾಗಿದ್ದಾಳೆ ಎಂದು ಶಂಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಮೊದಲನೆಯ ಮಗಳ ಜೊತೆಗೆ ಹೆಣ್ಣು ಮಗುವಿನ ಡಿಎನ್ಎ ಪರೀಕ್ಷೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಇದಕ್ಕಾಗಿ ನ್ಯಾಯಾಲಯದ ಮೊರೆ ಹೋಗುವುದಾಗಿ ಸೌರಭ್ ತಾಯಿ ಮತ್ತು ಸಹೋದರ ತಿಳಿಸಿದ್ದಾರೆಂದು ನ್ಯಾಷನಲ್ ಮಾಧ್ಯಮಗಳು ವರದಿ ಮಾಡಿವೆ.