Khushbu Sundar Slams Udhayanidhi Stalin's Trisha Remark 
ದೇಶ

ತ್ರಿಷಾ ವಿರುದ್ಧ ವಿವಾದಾತ್ಮಕ ಹೇಳಿಕೆ; ನೀವೊಬ್ಬ ಬಲಿಷ್ಠ ನಾಯಕರಾಗಿದ್ರೆ, ಹೆಣ್ಣನ್ನು ನಿಂದಿಸದೆ ಎದ್ದು ನಿಲ್ಲಿ ಎಂದು ಸಿಡಿದೆದ್ದ ನಟಿ khushbu Sundar

ಚೆನ್ನೈ: ಉದಯನಿಧಿ ಸ್ಟಾಲಿನ್​ ಅವರ ಹೇಳಿಕೆ ನನಗೇನು ಆಶ್ಚರ್ಯವೆನಿಸಿಲ್ಲ. ಡಿಎಂಕೆಯಲ್ಲಿ ಈ ರೀತಿಯ ಸ್ತ್ರೀ ದ್ವೇಷ, ಮಹಿಳೆಯರ ಮೇಲಿನ ದೌರ್ಜನ್ಯವನ್ನು ನಾನು ಈ ಹಿಂದೆಯೂ ನೋಡಿದ್ದೇನೆ. ಇದು ವಂಶಪಾರಂಪರ್ಯವಾಗಿ ಬಂದಿದೆ. ಉದಯನಿಧಿ ಸ್ಟಾಲಿನ್​ ಅವರಿಂದ ನಾನಿದನ್ನು ನಿರೀಕ್ಷೆ ಮಾಡಿರಲಿಲ್ಲ. ಯುವಕ, ವಿಪಕ್ಷ ನಾಯಕನಾಗಿರುವ ಇವರ ವ್ಯಕ್ತಿತ್ವ ವಿಭಿನ್ನವಾಗಿರುತ್ತೆ ಎಂದು ನಾನು ಭಾವಿಸಿದ್ದೆ. ಉದಯನಿಧಿ ಸ್ಟಾಲಿನ್ ಈ ರೀತಿಯ ಅಸಭ್ಯ ಹೇಳಿಕೆಗಳನ್ನು ನೀಡುತ್ತಿರುವುದು ಆಶ್ಚರ್ಯಕರವಾಗಿದೆ. ಒಂದು ಸಣ್ಣ ಪಶ್ಚಾತ್ತಾಪದ ಅಂಶವೂ ಕಾಣಲಿಲ್ಲ ಎಂದು ನಟಿ ಮತ್ತು ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಹೇಳಿದರು.
ತಂಜಾವೂರಿನಲ್ಲಿ ಕಾವೇರಿ ನೀರು ಬಿಡುಗಡೆ ಸಂಬಂಧ ಡಿಎಂಕೆ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ತಮಿಳುನಾಡು ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್​​ ಅವರು ತ್ರಿಷಾ ವಿರುದ್ಧ ಅಸಭ್ಯ ಹೇಳಿಕೆ ಕೊಟ್ಟಿದ್ದಾರೆ ಎಂದು ಆರೋಪಿಸಿ ಟಿವಿಕೆ ಮಹಿಳಾ ಆಯೋಗವು ದೂರು ನೀಡಿತ್ತು. ಅದರ ಆಧಾರದ ಮೇಲೆ ಉದಯನಿಧಿ ಅವರನ್ನು ಬಂಧಿಸಿ, ನಿನ್ನೆಯೇ ರಿಲೀಸ್ ಮಾಡಲಾಗಿತ್ತು. ಉದನಿಧಿ ಅವರ ವಿವಾದಾತ್ಮಕ ಹೇಳಿಕೆಯು ಸದ್ಯ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ದ್ಧ ಬಿಜೆಪಿ ನಾಯಕರು ಮತ್ತು ನಾಯಕಿಯರು ಹಾಗೂ ಟಿವಿಕೆ ಕಿಡಿಕಾರುತ್ತಿದೆ.

ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಹೇಳಿದ್ದೇನು?

ರಾಜಕೀಯ ಲಾಭ ಗಳಿಸಲು ಮಹಿಳೆಯರ ಮೇಲೆ ಎಷ್ಟು ದಿನಗಳ ಕಾಲ ಹೀಗೆ ದೌರ್ಜನ್ಯ ಮಾಡುತ್ತೀರಿ. ಸಾರ್ವಜನಿಕ ವೇದಿಕೆಯಲ್ಲಿ ಮಹಿಳೆಯನ್ನು ನಿಂದಿಸುವ ಜನ್ಮಸಿದ್ಧ ಹಕ್ಕನ್ನು ನಿಮಗೆ ಕೊಟ್ಟವರು ಯಾರು. ಉದಯನಿಧಿ ಸ್ಟಾಲಿನ್ ಒಬ್ಬರಲ್ಲ, ಇದು ಎಲ್ಲಾ ರಾಜಕೀಯ ಪಕ್ಷಗಳಿಗೂ ಅನ್ವಯಿಸುತ್ತದೆ. ಒಂದು ವಿಷಯವನ್ನು ಸಾಬೀತುಪಡಿಸಲು ನೀವು ಎಷ್ಟು ಸಮಯ ಮಹಿಳೆಯನ್ನು ನಿಂದಿಸುತ್ತೀರಿ? ಮಹಿಳೆಯ ಬಗ್ಗೆ ಅಗೌರವದಿಂದ ಮಾತನಾಡಲು, ಮಹಿಳೆಯ ಹೆಗಲ ಮೇಲೆ ಬಂದೂಕುಟ್ಟು 'ನಾನೊಬ್ಬ ಬಲಶಾಲಿ ವ್ಯಕ್ತಿ, ನಾನೊಬ್ಬ ನಾಯಕ' ಎಂದು ಹೇಳಲು ಒಬ್ಬ ಪುರುಷ ಎಷ್ಟು ದುರ್ಬಲನಾಗಿರಬೇಕು? ಇಲ್ಲಿ ನಿಮ್ಮನ್ನು ನೀವು ನಾಯಕ ಎಂದು ಕರೆದುಕೊಳ್ಳಲು ನಿಮಗೆ ಸಿಗ್ಬೇಕು," ಎಂದು ಅವರು ಗುಡುಗಿದರು.
ಡಿಎಂಕೆ ನಾಯಕರೊಬ್ಬರು (ಸಾದಿಕ್) ತಮ್ಮನ್ನು ಮತ್ತು ಇತರೆ ಮಹಿಳೆಯರನ್ನು 'ಐಟಮ್ಸ್' ಎಂದು ಕರೆದಿದ್ದನ್ನು ಮತ್ತು ಅವರನ್ನು ಅಮಾನತುಗೊಳಿಸಿ, ಕೆಲವೇ ತಿಂಗಳುಗಳ ನಂತರ ಮರು ಸೇರ್ಪಡೆ ಮಾಡಿಕೊಳ್ಳಲಾಗಿತ್ತು ಎಂಬುದನ್ನು ನೆನಪಿಸಿಕೊಂಡ ಅವರು, ಸ್ಟಾಲಿನ್ ಕೂಡ ಅದೇ ಮಾರ್ಗದಿಂದ ಬಂದವರು ಎಂದು ಸುಂದರ್ ಆರೋಪಿಸಿದರು.

ಗಂಡಸ್ರೇಆಗಿದ್ರೆ ನಿಂದಿಸದೇ ಎದ್ದು ನಿಲ್ಲಿ

"ನೀವೊಬ್ಬ ಬಲಿಷ್ಠ ನಾಯಕರಾಗಿದ್ರೆ, ಹೆಣ್ಣನ್ನು ನಿಂದಿಸದೆ ಎದ್ದು ನಿಲ್ಲಿ. ನಿಮಗೆ ಹಾಗೆ ಮಾಡಲು ಸಾಧ್ಯವೇ ಎಂದು ನೋಡೋಣ. ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಸದಸ್ಯರೇ ಆ ಪಕ್ಷಕ್ಕೆ ಮತಹಾಕಿಲ್ಲ. ಅವರ ಸ್ವಂತ ಕುಟುಂಬದ ಸದಸ್ಯರೇ ಡಿಎಂಕೆ ಪಕ್ಷಕ್ಕೆ ಮತಹಾಕಿಲ್ಲ. ಹಾಗಾಗಿ ಇಲ್ಲಿ ಕೈತಟ್ಟುತ್ತಿರುವುದು ಸಾರ್ವಜನಿಕರಲ್ಲ. ಇಲ್ಲಿ ಸಿಳ್ಳೆ ಹೊಡೆಯುತ್ತಿರುವುದು ಸಾರ್ವಜನಿಕರಲ್ಲ. ಇದು ನಿಮ್ಮ ಸ್ವಂತ 'ಚಮಚಾಗಳು' ಇವರು ಹೂಟಿಂಗ್ ಚಪ್ಪಾಳೆ ತಟ್ಟಿ, ಸಿಳ್ಳೆ ಹೊಡೆದು, ಗೊತ್ತಾ, ಮಹಿಳೆಯೊಬ್ಬರನ್ನು ನಿಂದಿಸುವುದರಲ್ಲಿ ಈ ರೀತಿಯ ಆನಂದವನ್ನು ಕಂಡುಕೊಳ್ಳುತ್ತಿದ್ದಾರೆ. ಇದು ಅವರ ಕೊಳಕು ಮನಸ್ಥಿತಿಯನ್ನು ಮಾತ್ರ ತೋರಿಸುತ್ತದೆ ಎಂದು ಕಿಡಿಕಾರಿದರು.

ನಮ್ಮನ್ನು ಯಾರಿಂದ ಏನೂ ಮಾಡಲು ಸಾಧ್ಯವಾಗೋದಿಲ್ಲ ಎಂದು ಬಲೂನ್​ನಂತೆ ಡಿಎಂಕೆ ಉಬ್ಬಿತ್ತು. ಆದರೆ, ವಿಧಾನಸಭೆ ಚುನಾವಣೆಯು ಆ ನಂಬಿಕೆಯನ್ನು ಸುಳ್ಳು ಮಾಡಿದೆ ಎಂದು ಖುಷ್ಬೂ ಸುಂದರ್ ಅವರು ಮಾತನಾಡಿದರು,

(ಏಜೆನ್ಸೀಸ್).