Jharkhand students protest kangana on bollywood actors
- ಜಾರ್ಖಂಡ್ ವಿದ್ಯಾರ್ಥಿಗಳ ವಿಷಯದಲ್ಲಿ ಬಾಲಿವುಡ್‌ನ ಮೌನಕ್ಕೆ ಕಂಗನಾ ಆಕ್ಷೇಪ.
- ಬಾಲಿವುಡ್ ಸೆಲೆಬ್ರಿಟಿಗಳ ವರ್ತನೆಯನ್ನು ಮೊಸಳೆ ಕಣ್ಣೀರು ಎಂದು ಕರೆದು ಕಿಡಿಕಾರಿದ ನಟಿ
- ನಸೀರುದ್ದೀನ್ ಶಾರನ್ನು ನರಿ ಎಂದು ಕರೆದು ಕಿಡಿಕಾರಿದ ಬಾಲಿವುಡ್ ಕ್ವೀನ್
ನವದೆಹಲಿ: ಸರ್ಕಾರಿ ಹುದ್ದೆಗೆ ನೇಮಕಾತಿ ಪರೀಕ್ಷೆಗಳಲ್ಲಿ ಉಂಟಾದ ಅಕ್ರಮ ಖಂಡಿಸಿ ಜಾರ್ಖಂಡ್ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರೆದಿದೆ. ಈ ಬಗ್ಗೆ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಮಾತನಾಡಿದ್ದು, ಈ ವಿಚಾರದಲ್ಲಿ ಬಾಲಿವುಡ್ ನಟನ ಹಾಗೂ ನಟಿಯರು ತೋರುತ್ತಿರುವ ಮೌನವು ಇಬ್ಬಗೆ ನೀತಿಯನ್ನು ಪಾಲಿಸಿದಂತಿದೆ ಎಂದು ಕಿಡಿಕಾರಿದ್ದಾರೆ.
ಕಂಗನಾ ಹೇಳಿದ್ದು ಹೀಗೆ..
ಮಾಧ್ಯಮವೊಂದರ ಜೊತೆಗೆ ಮಾತನಾಡಿದ ಕಂಗನಾ ಅವರು, ಬಾಲಿವುಡ್ಮ ಹಿರಿಯ ನಟ ನಾಸಿರುದ್ದೀನ್ ಶಾ ಅವರನ್ನು ನರಿ ಎಂದು ಕರೆದಿದ್ದಾರೆ. ಜೊತೆಗೆ ಬಾಲಿವುಡ್ ಸಿನಿಮಾರಂಗದಲ್ಲಿ ಯಾವಾಗಲೂ ಇಂತಹ ಮನೋಭಾವ ಇರುವವರನ್ನು ಕಾಣಬಹುದು. 'ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ, ನಮ್ಮ ಸಂಸತ್ ಸದಸ್ಯರ ಕಾರು ಪುಡಿ ಮಾಡಲಾಗಿತ್ತು. ನಿದ್ರೆ ಮಾಡಲಾಗದೆ, ಮನೆಗಳ ಬಳಿ ಭದ್ರೆತೆ ಕೇಳಿಕೊಳ್ಳಲಾಗಿತ್ತು. ಅಂತಹ ಪರಿಸ್ಥಿತಿ ಇದ್ದಾಗ, ಕೆಲ ಸೆಲಬ್ರೆಟಿಗಳು ಮೊಸಳೆ ಕಣ್ಣೀರು ಸುರಿಸುತ್ತಿದ್ದರು' ಎಂದು ಕಂಗನಾ ಹೇಳಿದರು.
'ಆದರೆ, ಈಗ ಜಾರ್ಖಂಡ್ನಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಜಿನ್ ಜಿಗಳ ಮೇಲಾಗುತ್ತಿರುವ ಸಮಸ್ಯೆ ಅಲ್ಲವೇ, ಜಂತರ್ ಮಂತರ್ ಪ್ರತಿಭಟನೆಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸಿದ ಚಲನಚಿತ್ರೋದ್ಯಮದ ಜನರು ಈಗ ಜಾರ್ಖಂಡ್ ಮಕ್ಕಳಿಗೂ ಅದೇ ಕಣ್ಣೀರು ಸುರಿಸಬೇಕು. ಆ ಮಕ್ಕಳೂ ಕೂಡ ಸಂಕಷ್ಟ ಎದುರಿಸುತ್ತಿದ್ದಾರೆ' ಎಂದು ಕಂಗನಾ ಮಾತನಾಡಿದರು.
ಪಾಕಿಸ್ತಾನದ ಬಗ್ಗೆಯೇ ವ್ಯಾಮೋಹ
ಸಿನಿಮಾಗಳಾಗಿರಲಿ, ಅವರ ಹೇಳಿಕೆಗಳಾಗಿರಲಿ ಅಥವಾ ಅವರ ಸಂದರ್ಶನಗಳಾಗಿರಲಿ, ಪಾಕಿಸ್ತಾನದ ಮೇಲಿನ ಈ ಪ್ರೇಮಪುರಾಣ ಯಾವಾಗ ಕೊನೆಗೊಳ್ಳುತ್ತದೆ? ಸದಾ ಪಾಕಿಸ್ತಾನದ ಬಗ್ಗೆಯೇ ವ್ಯಾಮೋಹ ಹೊಂದಿರುವಂತೆ ತೋರುತ್ತಿದೆ. ದೇಶ ವಿಭಜನೆಗೊಂಡು ಇಷ್ಟು ವರ್ಷಗಳಾದರೂ, ಈ ಪ್ರೇಮಕಥೆ ಯಾಕೆ ಅಂತ್ಯಗೊಳ್ಳುತ್ತಿಲ್ಲ ಎಂದು ನಾನು ತಿಳಿಯಲು ಬಯಸುತ್ತೇನೆ. ಬಾಲಿವುಡ್‌ನೊಂದಿಗೆ ಪಾಕಿಸ್ತಾನದ ಪ್ರೇಮಕಥೆ ಯಾವಾಗ ಕೊನೆಗೊಳ್ಳುತ್ತದೆ? ಇದಕ್ಕೆ ಅವರು ಉತ್ತರ ನೀಡಬೇಕು" ಎಂದಿದ್ದಾರೆ.
ಬಾಲಿವುಡ್‌ಗೆ ಕಿವಿಮಾತು
ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಿನಾಕಾರಣ ಟೀಕೆಗಳನ್ನು ಮಾಡುತ್ತಾರೆ ಮತ್ತು ಪಾಕಿಸ್ತಾನದ ವಿಷಯದಲ್ಲಿ ಹೆಚ್ಚು ಒಲವು ತೋರುತ್ತಾರೆ ಎಂದು ಕಂಗನಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ನಟ ನಸೀರುದ್ದೀನ್ ಶಾ ಅವರ ಹೇಳಿಕೆಗಳ ಕುರಿತು ಕಂಗನಾ ತೀವ್ರ ವಾಗ್ದಾಳಿ ನಡೆಸಿದ್ದರು,( ಏಜೆನ್ಸೀಸ್)