ಬಿಜೆಪಿ ಎಕ್ಸ್​ ಪೋಸ್ಟ್ 
ದೇಶ

'ಸುಳ್ಳು ಹಬ್ಬಿಸಿ ಸಾಕಾಯ್ತು, ವಿಯೆಟ್ನಾಂಗೆ ಹೊರಟೆ'; ಲೋಕಸಭೆ ವಿಪಕ್ಷ ನಾಯಕ ರಾಹುಲ್​ ಗಾಂಧಿ ವಿರುದ್ಧ BJP ಟ್ರೋಲ್

  • ಸುಳ್ಳು ಹಬ್ಬಿಸಿ ಸಾಕಾಯ್ತು ಹೀಗಾಗಿ ವಿಯೇಟ್ನಾಂ ತೆರಳುತ್ತಿದ್ದಾರೆ ಎಂದು ಬಿಜೆಪಿ ವ್ಯಂಗ್ಯ.

  • ಫ್ಲೈಟ್​ನಲ್ಲಿ ರಾಹುಲ್​ರಂತೆ ಕಾಣುತ್ತಿರುವ ವಿಡಿಯೋ ಹಂಚಿಕೊಂಡು ಬಿಜೆಪಿ ಟ್ರೋಲ್​​.

  • ಎಸ್​ಐಆರ್​ ಅಕ್ರಮದ ಹೋರಾಟದ ಮಧ್ಯೆ ರಾಹುಲ್​ ಗಾಂಧಿ ವಿದೇಶ ಪ್ರಯಾಣಕ್ಕೆ ಲೇವಡಿ.

BJP mocks Rahul Gandhi: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಅಕ್ರಮಗಳ ಆರೋಪದ ವಿರುದ್ಧ ಕಾಂಗ್ರೆಸ್​ ಕಳೆದ ಕೆಲವು ದಿನಗಳಿಂದ ಭಾರಿ ಪ್ರತಿಭಟನೆ ನಡೆಸುತ್ತಿದೆ. ಸದ್ಯ ಈ ಬೆಳವಣಿಗೆ ಮಧ್ಯೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್​​ ಗಾಂಧಿ ಅವರು ವಿಯೆಟ್ನಾಂ ಭೇಟಿ ನೀಡುತ್ತಿದ್ದಾರೆ ಎಂದು ಉಲ್ಲೇಖಿಸಿ ಬಿಜೆಪಿ ಟ್ರೋಲ್ ಮಾಡಿದೆ.

ವಿಡಿಯೋದಲ್ಲಿ ಕಂಡುಬಂದಿದ್ದು ಏನು?

ವ್ಯಕ್ತಿಯೊಬ್ಬರು ನೀಲಿ ಟಿ-ಶರ್ಟ್ ಮತ್ತು ಏರ್‌ಪಾಡ್‌ಗಳನ್ನು ಧರಿಸಿ ವಿಮಾನದ ವ್ಯಾಪಾರ ದರ್ಜೆಯ ಕ್ಯಾಬಿನ್‌ನಲ್ಲಿ ಕುಳಿತಿರುವುದು ಕಂಡುಬಂದಿದೆ. ಅದೇ ಫ್ಲೈಟ್​ನಲ್ಲಿ ಪ್ರಯಾಣಿಸುವ ವ್ಯಕ್ತಿಯೊಬ್ಬ ವಿಡಿಯೋ ಚಿತ್ರೀಕರಿಸಿ ಆ ವ್ಯಕ್ತಿ ಗಾಂಧಿಯನ್ನು ಹೋಲುವಂತೆ ಕಾಣುತ್ತಿದ್ದಾರೆ ಎಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಬಿಜೆಪಿ ಇಂಡಿಯಾ ಎಕ್ಸ್​ನಲ್ಲಿ ಪೋಸ್ಟ್ ಮಾಡಿ, ಟ್ರೋಲ್ ಮಾಡಿದೆ.

ಬಿಜೆಪಿ ಟ್ವೀಟ್​​ನಲ್ಲಿ ಲೇವಡಿ

'ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಸಾಕಾಯ್ತು. ಈಗ ವಿಯಟ್ನಾಂಗೆ ತೆರಳಿ ಒಂದಷ್ಟು ದಿನ ಸುತ್ತಾಡೋಣ. ಅಲ್ಲಿ ನನ್ನನ್ನು ಯಾರು ಪತ್ತೆ ಹಚ್ಚುತ್ತಾರೆ' ಎಂದು ಇಮೋಜಿಯೊಂದನ್ನು ಹಂಚಿಕೊಳ್ಳಲಾಗಿದೆ. ಆದರೆ ಆ ವ್ಯಕ್ತಿ ಯಾರು ನಿಜಕ್ಕೂ ರಾಹುಲ್​ ಗಾಂಧಿ ಅವ್ರೇನಾ? ಆ ಫ್ಲೈಟ್ ವಿಯೇಟ್ನಾ ತೆರಳ್ತಿದ್ಯಾ ಅನ್ನೋದಕ್ಕೆ ಅಧಿಕೃತ ಮಾಹಿತಿ ಇನ್ನೂ ಸಿಕ್ಕಿಲ್ಲ.

ಹಲವು ಮಾಧ್ಯಮಗಳ ವರದಿ ಪ್ರಕಾರ, ರಾಹುಲ್​ ಗಾಂಧಿ ಅವರು ವಿದೇಶ ಪ್ರವಾಸಕ್ಕಾಗಿ ಕೆಲವು ದಿನಗಳ ರಜೆ ತೆಗೆದುಕೊಂಡಿದ್ದಾರೆ. ದಿನಗಳ ಕಾಲ ವಿಯೆಟ್ನಾಂಗೆ ತೆರಳಿದ್ದರು. ನಾಲ್ಕು ದಿನಗಳ ಕಾಲ ಅಲ್ಲಿಯೇ ಉಳಿದುಕೊಳ್ಳಲಿದ್ದಾರೆ ಎನ್ನಲಾಗಿದೆ.

ಗೋಯ್ ರಖೋನ್ ಯಾತ್ರೆ

ಕಾಂಗ್ರೆಸ್​ ನಾಯಕರು ಗೋವಾ ಚುನಾವಣೆ ಆಗಮಿಸುತ್ತಲೇ ಗೋಯ್ ರಖೋನ್ ಯಾತ್ರೆ (ಗೋವಾ ರಕ್ಷಿಸಿ ಯಾತ್ರೆಯನ್ನು) ಸೆಪ್ಟೆಂಬರ್​ನಿಂದ ಅ.18ರವರೆಗೂ ನಡೆಸಿತು. ಗೋವಾದ ಎಲ್ಲಾ 40 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡು ಸುಮಾರು 355 ಕ್ಕೂ ಹೆಚ್ಚು ಕಿಲೋಮೀಟರ್‌ಗಳಷ್ಟು ಸಾಗಿತು. ಗೋವಾ ಸಂಸ್ಕೃತಿ, ಪರಿಸರ, ಸ್ಥಳೀಯರ ಹಕ್ಕು ನೆಲ, ರಾಜ್ಯದ ಅಸ್ಮಿತೆ ಬಗ್ಗೆ ಈ ಸಿನಿಮಾವು ಹೇಳುತ್ತದೆ.

ಅಕ್ಟೋಬರ್ 12 ರಂದು, ಕಾಂಗ್ರೆಸ್ ಮತ್ತು ಇತರ ಇಂಡಿಯಾ ಬ್ಲಾಕ್ ನಾಯಕರು ಸುಪ್ರೀಂ ಕೋರ್ಟ್‌ಗೆ 'ಮಾರ್ಚ್ ಫಾರ್ ಡೆಮಾಕ್ರಸಿ' ಮೆರವಣಿಗೆ ನಡೆಸಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತು ಅರ್ಜಿಯನ್ನು ಸಲ್ಲಿಸಿದರು. ಚುನಾವಣಾ ಪರಿಷ್ಕರಣಾ ಕಾರ್ಯದಲ್ಲಿ ಅಕ್ರಮಗಳ ಆರೋಪದ ಮೇಲೆ ವಿರೋಧ ಪಕ್ಷಗಳು ಹಲವಾರು ಇತರ ಪ್ರತಿಭಟನೆಗಳನ್ನು ನಡೆಸಿವೆ, (ಏಜೆನ್ಸೀಸ್).