ತಮಿಳು ನಟ ಮತ್ತು ಟಿವಿಕೆ ಪಕ್ಷದ ನಾಯಕ ತಳಪತಿ ವಿಜಯ್, ನಟಿ ತ್ರಿಷಾ ಕೃಷ್ಣನ್ , ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್
- ರಾಜಕೀಯ ಏನೆಂದು ತಿಳಿಯಲು ಮೊದಲು ತ್ರಿಷಾ ಮನೆಯಿಂದ ಅಚೆಬನ್ನಿ: ನೈನಾರ್ ನಾಗೇಂದ್ರನ್
- ವಿಜಯ್ ರಾಜಕಾರಣದಲ್ಲಿ ತ್ರಿಷಾ ಹೆಸರಿನ ಬಳಕೆಗೆ ತೀವ್ರ ವಿರೋಧ
- ವಿರೋಧದ ಹಿನ್ನಲೆ ಕ್ಷಮೆ ಕೇಳಿದ ತಮಿಳುನಾಡು ಬಿಜೆಪಿ ಮುಖ್ಯಸ್ಥ
ತಮಿಳುನಾಡು: ತಮಿಳು ನಟ ಮತ್ತು ಟಿವಿಕೆ ಪಕ್ಷದ ನಾಯಕ ತಳಪತಿ ವಿಜಯ್ ಕುರಿತು ಮಾತನಾಡುತ್ತಾ, ನಟಿ ತ್ರಿಷಾ ಕೃಷ್ಣನ್ ಬಗ್ಗೆ ಪ್ರಸ್ತಾಪ ಮಾಡಿದ್ದಕ್ಕಾಗಿ ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್ (Nainar Nagendran) ವಿಷಾದ ವ್ಯಕ್ತಪಡಿಸಿದ್ದಾರೆ.
ವಿಜಯ್ ರಾಜಕೀಯದಲ್ಲಿ ಅನಾನುಭವಿಯಾಗಿದ್ದು, ರಾಜಕಾರಣ ಏನೆಂದು ತಿಳಿಯಲು, ವಿಜಯ್ ಮೊದಲು ನಟಿ ತ್ರಿಷಾ ಮನೆಯಿಂದ ಹೊರಬರಬೇಕು ಎನ್ನುವ ವಿವಾದಾತ್ಮಕ ಹೇಳಿಕೆಯನ್ನು ನಾಗೇಂದ್ರನ್ ನೀಡಿದ್ದರು.
ನಾನು ನೀಡಿದ ಹೇಳಿಕೆ ತಪ್ಪಾಗಿದೆ, ನಮ್ಮ ಅಖಿಲ ಭಾರತ ಮಹಿಳಾ ವಿಭಾಗದ ಮುಖ್ಯಸ್ಥೆ ವನತಿ ಶ್ರೀನಿವಾಸನ್ ಮತ್ತು ಅಣ್ಣಾಮಲೈ ಈ ವಿಷಯದ ಕುರಿತು ನನ್ನೊಂದಿಗೆ ಮಾತನಾಡಿದ್ದಾರೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ, ನಾನು ಹೃತ್ಪೂರ್ವಕವಾಗಿ ವಿಷಾದವನ್ನು ವ್ಯಕ್ತಪಡಿಸುತ್ತೇನೆ ನಾಗೇಂದ್ರನ್ ಹೇಳದ್ದಾರೆ.
ಮುಂಬರುವ ತಮಿಳುನಾಡು ಚುನಾವಣೆಯಲ್ಲಿ ಡಿಎಂಕೆ ಪಕ್ಷಕ್ಕೆ ತಡೆಒಡ್ಡಲು ಟಿವಿಕೆ ಗೆ ಮಾತ್ರ ಸಾಧ್ಯ ಎಂಬ ವಿಜಯ್ ಹೇಳಿಕೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಮುಖ್ಯಸ್ಥ, ವಿಜಯ್ಗೆ ರಾಜಕೀಯ ಏನೆಂದೆ ಗೊತ್ತಿಲ್ಲ, ಮಾಳಿಗೆ ಹತ್ತಲು ಬಾರದವನು ಸ್ವರ್ಗವನ್ನು ಏರುತ್ತೇನೆಂದು ಹೇಳುತ್ತಿದ್ದಾನೆ. ರಾಜಕೀಯ ಏನೆಂದು ಅರ್ಥವಾಗಬೇಕಾದರೆ ಮೊದಲು ಆ ತ್ರಷಾಳ ಮನೆಯಿಂದ ಆಚೆ ಬಾ ಎಂದು ನಾಗೇಂದ್ರನ್ ಹೇಳಿದ್ದರು.
ತ್ರಿಷಾ ಕೆಂಡಮಂಡಲ
ನಾಗೇಂದ್ರನ್ ಅವರ ಈ ಹೇಳಿಕೆಗೆ, ತ್ರಿಷಾ ತಮ್ಮ ಕಾನೂನು ಸಹಲೆಗಾರರ ಮೂಲಕ ಖಂಡನೆಯನ್ನು ವ್ಯಕ್ತಪಡಿಸಿದರು. ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನ ಹೊಂದಿರುವ ವ್ಯಕ್ತಿಯಿಂದ ಇಂತಹ ಅಸಹ್ಯಕರ ಮತ್ತು ಅನುಚಿತ ಹೇಳಿಕೆ ಬರುತ್ತದೆ ಎಂದು ನನ್ನ ಕಕ್ಷಿದಾರರು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅವರು ತಮ್ಮ ಕೆಲಸದ ಮೂಲಕ ಮಾತ್ರ ವ್ಯಾಖ್ಯಾನಿಸಲ್ಪಡಲು ಬಯಸುತ್ತಾರೆ ಮತ್ತು ಅವರಿಗೆ ಸಂಬಂಧವಿಲ್ಲದ ವಿಷಯಗಳಲ್ಲಿ ಅವರ ಹೆಸರನ್ನು ಎಳೆಯಬಾರದು ಎಂದು ಹೇಳಿದ್ದರು.
ಹೇಳಿಕೆಗೆ ತೀವ್ರ ವಿರೋಧ
ಇಂತಹ ಹೇಳಿಕೆಗಳು ಬಿಜೆಪಿ ನಾಯಕರ ಮಹಿಳೆಯರ ಮೇಲಿನ ಗೌರವದ ಕೊರತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಆರೋಪಿಸಿದರೆ, ವಿಜಯ್ ಅವರ ರಾಜಕೀಯದಲ್ಲಿ ನಟಿಯ ಹೆಸರನ್ನು ಪ್ರಸ್ತಾಪಿಸಿದ್ದು ಖಂಡನೀಯ ಎಂದು ತಮಿಳುನಾಡು ಕಾಂಗ್ರೆಸ್ ವಿರೋಧ ವ್ಯಕ್ತ ಪಡಿಸಿತು. ಆರಂಭದಲ್ಲಿ ತಮ್ಮ ಹೇಳಿಕೆಯನ್ನು ಹಿಂಪಡೆಯಲು ನಿರಾಕರಿಸಿದ ನಾಗೇಂದ್ರನ್ ಈಗ ತಮ್ಮ ಹೇಳಿಕೆಯಿಂದ ಯಾರಿಗಾದರೂ ನೋವುಂಟಾಗಿದ್ದರೆ ವಿಷಾದಿಸುತ್ತೇನೆ ಎಂದು ಹೇಳಿದ್ದಾರೆ,(ಏಜನ್ಸೀಸ್).