Udayanidhi Stalin 
ದೇಶ

ಆರ್ಥಿಕವಾಗಿ ಬಲಿಷ್ಠವಾಗಿರುವ ರಾಜ್ಯಗಳನ್ನು ದುರ್ಬಲಗೊಳಿಸಲು ಬಿಜೆಪಿ ಯತ್ನಿಸುತ್ತಿದೆ: DCM ಉದಯನಿಧಿ ಸ್ಟಾಲಿನ್

ತಮಿಳುನಾಡು: ಆರ್ಥಿಕವಾಗಿ ಬಲಿಷ್ಠವಾಗಿರುವ ರಾಜ್ಯಗಳನ್ನು ದುರ್ಬಲಗೊಳಿಸಲು ಬಿಜೆಪಿ ದೇಶದಲ್ಲಿ ಕೆಲಸ ಮಾಡುತ್ತಿದೆ ಎಂದು ತಮಿಳುನಾಡು DCM ಉದಯನಿಧಿ ಸ್ಟಾಲಿನ್ ಆರೋಪಿಸಿದರು.
ಚೆನ್ನೈನಲ್ಲಿ ಸೋಮವಾರ (ನ.25) ನಡೆದ ಎಬಿಪಿ ಸದರ್ನ್ ರೈಸಿಂಗ್ ಶೃಂಗಸಭೆಯಲ್ಲಿ ಮಾತನಾಡಿದರು. ದೇಶದಲ್ಲಿ ಅಧಿಕಾರ ಕ್ರಮೇಣ ಕೇಂದ್ರೀಕೃತವಾಗುತ್ತಿದೆ. ರಾಜ್ಯಗಳ ಹಕ್ಕುಗಳನ್ನು ದುರ್ಬಲಗೊಳಿಸುತ್ತಿದೆ. ಅನ್ಯಾಯದ ತೆರಿಗೆ ಹಂಚಿಕೆ, ನಿಧಿ ತಡೆಹಿಡಿಯುವಿಕೆ, ಹೊಸ ಶಿಕ್ಷಣ ನೀತಿ ಮತ್ತು ಮುಂಬರುವ ಗಡಿ ನಿರ್ಣಯದಂತಹ ಹಲವಾರು ವಿಷಯಗಳಲ್ಲಿ ತಮಿಳುನಾಡು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಅವರು ಹೇಳಿದರು.
ಹಿಂದಿ ಅಥವಾ ಇನ್ನಾವುದೇ ಭಾಷೆಯನ್ನು ಹೇರಲು ಪ್ರಯತ್ನಿಸಿದರೆ, ನಾವು ಮತ್ತೊಂದು ಭಾಷಾ ಯುದ್ಧಕ್ಕೆ ಹಿಂಜರಿಯುವುದಿಲ್ಲ. "ತಮಿಳರು ಎಂದಿಗೂ ತ್ರಿಭಾಷಾ ಸೂತ್ರವನ್ನು ಸ್ವೀಕರಿಸುವುದಿಲ್ಲ. ತಮಿಳುನಾಡು ಯಾವಾಗಲೂ ತನ್ನ ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಗೆ ನಿಲ್ಲುತ್ತದೆ" ಎಂದು ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
"ಭಾರತವು ಬಲವಾದ ರಾಜ್ಯಗಳ ಒಕ್ಕೂಟವಾಗಿ ಕಾರ್ಯನಿರ್ವಹಿಸಲು ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ನೀಡುವ ಸಾಂವಿಧಾನಿಕ ತಿದ್ದುಪಡಿಗಳನ್ನು ನಾವು ಬಯಸುತ್ತೇವೆ" ಎಂದು ಹೇಳಿದರು(ಏಜೆನ್ಸೀಸ್​).