One Vote Win  
ದೇಶ

One Vote Win | ಇದಪ್ಪಾ ಲಕ್​ ಅಂದ್ರೆ...ಕೇವಲ ಒಂದು ಮತದಿಂದ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ

ಮುಂಬೈ: ಮಹಾರಾಷ್ಟ್ರ ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಮತ ಎಣಿಕೆಯ ಮಧ್ಯೆ ರತ್ನಗಿರಿ ಜಿಲ್ಲೆಯ ಚಿಪ್ಲುನ್ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಂದೀಪ್ ಭಿಸೆ ಕೇವಲ ಒಂದು ಮತದಿಂದ ಜಯಗಳಿಸಿದ್ದಾರೆ ಎಂದು ವರದಿಯಾಗಿದೆ.
ಮಹಾರಾಷ್ಟ್ರದ 246 ಪುರಸಭೆಗಳು ಮತ್ತು 42 ನಗರ ಪಂಚಾಯತ್‌ಗಳ ಚುನಾವಣೆಯನ್ನು ಡಿಸೆಂಬರ್ 2 ಮತ್ತು 20 ರಂದು ಎರಡು ಹಂತಗಳಲ್ಲಿ ನಡೆಸಲಾಯಿತು. ಮತ ಎಣಿಕೆ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಯಿತು. ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ, ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಭಾರೀ ಮುನ್ನಡೆ ಸಾಧಿಸಿದೆ. ಡಿಸೆಂಬರ್ 3 ರಂದು ನಿಗದಿಯಾಗಿದ್ದ ಮತ ಎಣಿಕೆಯನ್ನು ದೊಡ್ಡ ಪ್ರಮಾಣದ ಅಕ್ರಮಗಳು ಕಂಡುಬಂದ ಬಳಿಕ ಬಾಂಬೆ ಹೈಕೋರ್ಟ್ ಡಿಸೆಂಬರ್ 21 ಕ್ಕೆ ಮುಂದೂಡಲಾಯಿತು.

ಹೇಗಿದೆ ಟ್ರೆಂಡ್​....?

ಮಹಾರಾಷ್ಟ್ರ ಮುನ್ಸಿಪಲ್ ಕೌನ್ಸಿಲ್ ಚುನಾವಣಾ ಫಲಿತಾಂಶದ ಆರಂಭಿಕ ಟ್ರೆಂಡ್‌ಗಳಲ್ಲಿ ಮಹಾಯುತಿ ಮೈತ್ರಿಕೂಟ 172 ಕೌನ್ಸಿಲ್‌ಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 90, ಶಿವಸೇನೆ 49 ಮತ್ತು ಎನ್‌ಸಿಪಿ 33 ಸ್ಥಾನಗಳಲ್ಲಿ ಮುಂದಿದೆ. ಇತ್ತ ಮಹಾ ವಿಕಾಸ್ ಅಘಾಡಿ 45 ಕೌನ್ಸಿಲ್‌ಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದು, ಕಾಂಗ್ರೆಸ್ 25, ಎನ್‌ಸಿಪಿ (ಶರದ್​ ಬಣ) 12 ಮತ್ತು ಉದ್ಧವ ಶಿವಸೇನೆ 8, ಇತರರು 23 ಕೌನ್ಸಿಲ್‌ಗಳಲ್ಲಿ ಮುಂದಿದ್ದಾರೆ ಎಂದು ವರದಿಯಾಗಿದೆ. ಮಹಾರಾಷ್ಟ್ರ ನಗರ ಪಂಚಾಯತ್ ಚುನಾವಣೆಯಲ್ಲಿ, ಮಹಾಯುತಿ 34 ಸಂಸ್ಥೆಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 26, ಶಿವಸೇನೆ 5 ಮತ್ತು ಎನ್‌ಸಿಪಿ 3 ರಲ್ಲಿ ಮುನ್ನಡೆ ಸಾಧಿಸಿದೆ, ಎಂವಿಎ 5 ಕಾಂಗ್ರೆಸ್ 3 ಮತ್ತು ಶಿವಸೇನೆ ಯುಬಿಟಿ 2, ಇತರ ಇಬ್ಬರು ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
ಡಿಸೆಂಬರ್ 2 ರಂದು 263 ಸ್ಥಳೀಯ ಸಂಸ್ಥೆಗಳಲ್ಲಿ ನಡೆದ ಮೊದಲ ಹಂತದ ಮತದಾನದಲ್ಲಿ ಶೇ. 67.3 ರಷ್ಟು ಮತದಾನ ದಾಖಲಾಗಿದ್ದು, ಶನಿವಾರ 23 ಸ್ಥಳೀಯ ಸಂಸ್ಥೆಗಳಲ್ಲಿ ನಡೆದ ಎರಡನೇ ಹಂತದಲ್ಲಿ ಶೇ. 47.04 ರಷ್ಟು ಮತದಾರರು ತಮ್ಮ ಅಧಿಕಾರ ಚಲಾಯಿಸಿದ್ದಾರೆ. ಧುಲೆಯ ದೊಂಡೈಚಾ ಮುನ್ಸಿಪಲ್ ಕೌನ್ಸಿಲ್ ಮತ್ತು ಸೋಲಾಪುರದ ಅಂಗರ್ ನಗರ ಪಂಚಾಯತ್‌ನ ಸದಸ್ಯರು ಮತ್ತು ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ(ಏಜೆನ್ಸೀಸ್​).