- ಬಿಹಾರ 'ಸಿಂಗಂ' ಶಿವದೀಪ್ ಲಾಂಡೆ ಎರಡು ಕಡೆ ಸೋಲು
- ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಫರ್ಧಿಸಿದ್ದ ಮಾಜಿ IPS ಅಧಿಕಾರಿ
ಬಿಹಾರ: ಬಿಹಾರದ 'ಸಿಂಗಂ' ಎಂದೇ ಖ್ಯಾತಿ ಪಡೆದ ಮಾಜಿ IPS ಅಧಿಕಾರಿ ಶಿವದೀಪ್ ಡಬ್ಲ್ಯೂ ಲಾಂಡೆ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಸೋತಿದ್ದಾರೆ.
ಅರಾರಿಯಾ ಮತ್ತು ಜಮಾಲ್ಪುರ ಎರಡರಿಂದಲೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲಾಂಡೆ, ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದರೂ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವಲ್ಲಿ ವಿಫಲರಾಗಿದ್ದಾರೆ.
ಎರಡು ಕ್ಷೇತ್ರದಲ್ಲಿ ಸೋಲು
ಜಮಾಲ್ಪುರ ವಿಧಾನಸಭೆ ಕ್ಷೇತ್ರದಲ್ಲಿ ಜೆಡಿ(ಯು) ಅಭ್ಯರ್ಥಿ ನಚಿಕೇತ ಮಂಡಲ್ 96,683 ಮತಗಳನ್ನು ಗಳಿಸುವ ಮೂಲಕ ವಿಜಯಶಾಲಿಯಾದರು. ಚುನಾಚಣೆ ಪ್ರಚಾರದ ವೇಳೆ ಲಾಂಡೆ ಅವರಿದ್ದ ಪ್ರಸಿದ್ಧಿ ಮತ್ತು ಜನಮನ್ನಣೆ ಗದ್ದಲದ ನಡುವೆ ಅವರ ಜನಪ್ರಿಯತೆಯನ್ನು ಚುನಾವಣಾ ಸಂಖ್ಯೆಗಳಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಇನ್ನು ಅದೇ ರೀತಿ ಅರಾರಿಯಾ ಕ್ಷೇತ್ರದಲ್ಲಿ ಇದೇ ರೀತಿಯ ಫಲಿತಾಂಶವನ್ನು ನೀಡಿದರು. INC ಅಭ್ಯರ್ಥಿ ಅಬಿದುರ್ ರೆಹಮಾನ್ 91,529 ಮತಗಳಿಂದ ಸ್ಥಾನವನ್ನು ಗೆದ್ದಿದ್ದಾರೆ. ಆದರೆ, ಅರಾರಿಯಾ ಸ್ಥಾನವನ್ನು ಪಡೆಯಲು ಲಾಂಡೆ ಮಾಡಿದ ಪ್ರಯತ್ನವು ರಾಜಕೀಯ ಚದುರಂಗದಲ್ಲಿ ವಿಫಲವಾಗಿದೆ.
ಯಾರು ಈ ಶಿವದೀಪ್ ಡಬ್ಲ್ಯೂ ಲಾಂಡೆ?
49 ವರ್ಷದ ಶಿವದೀಪ್ ಡಬ್ಲ್ಯೂ ಲಾಂಡೆ, ಬಿಹಾರದಲ್ಲಿ ಐಪಿಎಸ್ ಅಧಿಕಾರಿಯಾಗಿ ತಮ್ಮದೇ ಶೈಲಿಯಲ್ಲಿ ವಿಭಿನ್ನ ಕೆಲಸ ಮಾಡುವ ಮೂಲಕ ಬಿಹಾರದಲ್ಲಿ ಸಿಂಗಂ ಖ್ಯಾತಿಗಳಿಸಿದ್ದರು. ಪೊಲೀಸ್ ವೃತ್ತಿಜೀವನದಲ್ಲಿ ತಮ್ಮ ಅದ್ಭುತ ಕಾರ್ಯಾಚರಣೆ ಮತ್ತು ಸಾರ್ವಜನಿಕರ ಸಂಪರ್ಕ ಹೊಂದಿರುವ ಈ ಅವರ ಒಳ್ಳೆತನ ಬಿಹಾರ ಮಂದಿಗೆ ಇಷ್ಟವಾಗಿತ್ತು. ಆದರೆ, ಅವರ ಈ ಅಭಿಮಾನವು ಚುನಾವಣೆಯಲ್ಲಿ ಕೈ ಹಿಡಿಯಲಿಲ್ಲ.
20.4 ಕೋಟಿ ಆಸ್ತಿ ಸರದಾರ
ಇನ್ನು ಲಾಂಡೆ ಚುನಾವಣಾ ಅಫಿಡವಿಟ್‌ನಲ್ಲಿ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ, ಪದವೀಧರ ವೃತ್ತಿಪರ ಶೈಕ್ಷಣಿಕ ಹಿನ್ನೆಲೆ, ಒಟ್ಟು ಆಸ್ತಿಯಲ್ಲಿ ರೂ. 20.4 ಕೋಟಿ ಮತ್ತು ಸಾಲದ ಮೊತ್ತ ರೂ. 2.7 ಕೋಟಿ ಎಂದು ಪಟ್ಟಿ ಮಾಡಲಾಗಿದೆ(ಏಜೆನ್ಸೀಸ್).