ಸಾಂದರ್ಭಿಕ ಚಿತ್ರ 
ದೇಶ

ರೋಸ್ ಡೇ ವಿಡಿಯೋ ಪೋಸ್ಟ್ ಮಾಡಿದ ಮಹಿಳೆಗೆ ಎದುರಾಯ್ತು ಕಾನೂನು ಸಂಕಷ್ಟ! ಏನಿದು ಘಟನೆ..? Rose Day

ಪ್ರಮುಖ ಮುಖ್ಯಾಂಶಗಳು

  • ಫೆಬ್ರವರಿ ತಿಂಗಳು ಬಂತೆಂದರೆ ಮೊದಲು ನೆನಪಾಗುವುದೇ ವ್ಯಾಲೆಂಟೈನ್ಸ್​ ವೀಕ್
  • ಈ ವಾರ ತಮ್ಮ ಸಂಗಾತಿಗೆ ಚಾಕಲೇಟ್​, ರೋಸ್​ ಸೇರಿದಂತೆ ಇತರ ಉಡುಗೊರೆ ನೀಡುತ್ತಾರೆ
  • ರೋಸ್​​ ಡೇ ಆಚರಣೆಯ ವೇಳೆ ತನ್ನ ಗಂಡನಿಗೆ ಗುಲಾಬಿ ನೀಡಲು ಹೋಗಿ ಕಾನೂನು ಸಂಕಷ್ಟಕ್ಕೆ ಸಿಲುಕಿದ ಮಹಿಳೆ
ಬಿಹಾರ: ಫೆಬ್ರವರಿ ತಿಂಗಳು ಬಂತೆಂದರೆ ಮೊದಲು ನೆನಪಾಗುವುದೇ ವ್ಯಾಲೆಂಟೈನ್ಸ್​ ವೀಕ್​. ಈ ವಾರ ಪ್ರೇಮಿಗಳ (Rose Day) ಪಾಲಿಗೆ ಹಬ್ಬ, ಬಹುತೇಕ ಎಲ್ಲಾ ಪ್ರೇಮಿಗಳು ತಮ್ಮ ಸಂಗಾತಿಗೆ ಚಾಕಲೇಟ್​, ರೋಸ್​ ಸೇರಿದಂತೆ ಇತರ ಉಡುಗೊರೆ ನೀಡುತ್ತಾರೆ. ಆದರೆ, ಇಲ್ಲೊಬ್ಬ ಮಹಿಳೆ ರೋಸ್​​ ಡೇ ಆಚರಣೆಯ ವೇಳೆ ತನ್ನ ಗಂಡನಿಗೆ ಗುಲಾಬಿ ನೀಡಲು ಹೋಗಿ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ.

ವಿಡಿಯೋದಲ್ಲೇನಿದೆ?

ಬಿಹಾರದ ಮುಂಗೇರ್ ಜಿಲ್ಲೆಯ ಕಾಂಚನಾ ದೇವಿ ಎಂಬ ಮಹಿಳೆಯೊಬ್ಬಳು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ತನ್ನ ಗಂಡನಿಗೆ ಗುಲಾಬಿ ಹೂವು ನೀಡುವುದರ ಜೊತೆಗೆ ಮದ್ಯದ ಬಾಟಲಿಯನ್ನು ನೀಡುತ್ತಿದ್ದಾಳೆ. ಈ ವೇಳೆ ಪತಿ ನಗುತ್ತಿರುವುದನ್ನು ನಾವು ಕಾಣಬಹುದು. ಬಿಹಾರದಲ್ಲಿ ಮದ್ಯ ಸಂಪೂರ್ಣ ನಿಷೇಧವಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ದಂಪತಿ ಈ ರೀತಿ ಹುಚ್ಚಾಟ ಮೆರೆದಿದ್ದು, ಹೊಸ ಚರ್ಚೆಗೆ ಗ್ರಾಸವಾಗಿದೆ.

ಘಟನೆ ಏನು?

ಇದೇ ಕಾಂಚನ ಬ್ಯೂಟಿ ಪಾರ್ಲರ್ ಒಳಗೆ ಪಿಸ್ತೂಲ್ ಹಿಡಿದು ಪೋಟೋಗೆ ಪೋಸ್ ನೀಡುತ್ತಿರುವುದು ಸಮಸ್ಯೆಯನ್ನು ಇನ್ನಷ್ಟು ಉಲ್ಬಣವಾಗಲು ಕಾರಣವಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ, ಮುಂಗರ್ ಎಸ್‌.ಪಿ ಸೈಯದ್ ಇಮ್ರಾನ್ ಮಸೂದ್ ಕಾಂಚನ ಮನೆ ಮೇಲೆ ದಾಳಿ ನಡೆಸಿದ್ದಾರೆ.
ತನಿಖೆ ಸಮಯದಲ್ಲಿ ಫೋಟೋದಲ್ಲಿರುವ ಪಿಸ್ತೂಲ್ ದೀನದಯಾಳ್ ಚೌಕ್ ನಿವಾಸಿ ವಿಶಾಲ್ ಕುಮಾರ್​ಗೆ ಸೇರಿದ ಪರವಾನಗಿ ಪಡೆದ ಆಯುಧ ಎಂದು ತಿಳಿದುಬಂದಿದೆ. ಗನ್​ ನಿಯಮಬದ್ಧವಾಗಿದ್ದರು, ಅದನ್ನು ಮತ್ತೊಬ್ಬ ವ್ಯಕ್ತಿಗೆ ನೀಡುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ.
ಸದ್ಯ ಪೊಲೀಸರು ಕಾಂಚನ ದೇವಿ ಮತ್ತು ಗನ್​ ಮಾಲೀಕ ವಿಶಾಲ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ಎಸ್‌.ಪಿ ಸೈಯದ್ ಇಮ್ರಾನ್ ಮಸೂದ್ ತಿಳಿಸಿದ್ದಾರೆ. ಸಾರ್ವಜನಿಕವಾಗಿ ಶಸ್ತ್ರಾಸ್ತ್ರಗಳ ಪ್ರದರ್ಶನ ಮತ್ತು ಮದ್ಯದಂತಹ ನಿಷೇಧಿತ ವಸ್ತುಗಳ ಪ್ರಚಾರ ಮಾಡುವುದು ಗಂಭೀರ ಅಪರಾಧವಾಗಿದೆ ಎಂದಿದ್ದಾರೆ (ಏಜೆನ್ಸೀಸ್​)