Bihar man gets cardboard support for fractured leg
- ಮುರಿದ ಕಾಲಿಗೆ ಕಾರ್ಬನ್ ರಟ್ಟು ಸುತ್ತಿದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ.
- ಬಿಹಾರದ ಆರೋಗ್ಯ ವ್ಯವಸ್ಥೆ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ.
- ಸರ್ಕಾರದ ವಿರುದ್ದ ಕಿಡಿಕಾರಿದ ನೆಟ್ಟಿಗರು, ಆರೋಗ್ಯ ವ್ಯವಸ್ಥೆ ಅಭಿವೃದ್ಧಿಗೆ ಒತ್ತಾಯ.
Bihar man gets cardboard support for fractured leg:
ಕಾಲಿಗೆ ಪೆಟ್ಟಾಗಿದೆ ಎಂದು ಚಿಕಿತ್ಸೆ ಪಡೆಯಲು ಬಿಹಾರದ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದ ವ್ಯಕ್ತಿಗೆ, ಕಾಲಿನ ಸುತ್ತ ರಟ್ಟಿನ ಬಾಕ್ಸ್ನ ತುಂಡನ್ನು ಕಟ್ಟಿ, ಮತ್ತೊಂದು ಪ್ರತಿಷ್ಠಿತ ಆಸ್ಪತ್ರೆಗೆ ಸ್ಥಳಾಂತರಿಸಿದ ಘಟನೆ ಬೆಳಕಿಗೆ ಬಂದಿದೆ. ಸದ್ಯ ಈ ಘಟನೆಯು ಇಲ್ಲಿನ ಆರೋಗ್ಯ ವ್ಯವಸ್ಥೆ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ.
ಮಂಝೌಲ್ ಉಪ ವಿಭಾಗೀಯ ಆಸ್ಪತ್ರೆಯಿಂದ ಗಾಯಗೊಂಡ ರೋಗಿಯ ಕಾಲಿಗೆ ಬೇರೆಡೆಗೆ ಕಳುಹಿಸುವ ಮೊದಲು ಕಾರ್ಡ್‌ಬೋರ್ಡ್ ತುಂಡುಗಳ ಮೂಲಕ ಬೆಂಬಲ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಟ್ಟು ಕಟ್ಟಿದ ಸಿಬ್ಬಂದಿ
ಆಗಸ್ಟ್ 3ರ ಸಂಜೆ ಈ ಘಟನೆ ನಡೆದಿದ್ದು, ಹರ್ಸೇನ್ ಸೇತುವೆ ಬಳಿ ನಡೆದ ಅಪಘಾತದಿಂದಾಗಿ ಕೃಷ್ಣಕುಮಾರ್ ಅವರ ಕಾಲಿಗೆ ಗಂಭೀರ ಗಾಯವಾಗಿತ್ತು. ಬಿಹಾರದ ಆಸ್ಪತ್ರೆಗೆ ತೆರಳಿದ್ದ ಅವರಿಗೆ ಅಲ್ಲಿನ ಸಿಬ್ಬಂದಿ, ಹೆಚ್ಚಿನ ಚಿಕಿತ್ಸೆಗಾಗಿ ಬೇಗುಸರಾಯ್‌ನ ಸದರ್ ಆಸ್ಪತ್ರೆಗೆ ಸ್ಥಳಾಂತರಿಸುವ ಮುನ್ನ ಅವರ ಕಾಲಿಗೆ ರಟ್ಟಿನ ತುಂಡನ್ನು ಇರಿಸಿ, ಪ್ರಾಥಮಿಕ ಚಿಕಿತ್ಸೆ ಕೊಟ್ಟ ದೃಶ್ಯವು ವಿಡಿಯೋದಲ್ಲಿ ಇದೆ.
ಕೃಷ್ಣಕುಮಾರ್ ಈ ಬಗ್ಗೆ ಮಾತನಾಡಿದ್ದು, ಸಹೋದರನ ಜೊತೆ ಗರ್ಹ್‌ಪುರದಿಂದ ಮನೆಗೆ ತೆರಳುತ್ತಿದ್ದ ವೇಳೆ ಆಟೋವೊಂದು ನಮ್ಮ ವಾಹನಕ್ಕೆ ಡಿಕ್ಕಿ ಹೊಡೆಯಿತು. ಆ ಪರಿಣಾಮ ಕಾಲಿಗೆ ಬಲವಾದ ಪೆಟ್ಟು ಬೊಟ್ಟು.112 ಕ್ಕೆ ಕರೆ ಮಾಡಿ ಮಾಹಿತಿ ಕೊಟ್ಟೆವು. ಮಂಝೌಲ್ ಉಪ ವಿಭಾಗೀಯ ಆಸ್ಪತ್ರೆಗೆ ತೆರಳುವಷ್ಟರಲ್ಲಿ ನೋವು ತೀವ್ರವಾಗಿತ್ತು ಎಂದು ಅವರು ಹೇಳಿದ್ದಾರೆ.
ಬಿಹಾರದ ಸರ್ಕಾರಿ ಆಸ್ಪತ್ರೆಯಿಂದ ಕೃಷ್ಣಕುಮಾರ್ ಅವರನ್ನು ಬೇಗುಸರಾಯ್‌ನ ಸದರ್ ಆಸ್ಪತ್ರೆಗೆ ಕರೆತಂದ ಬೆನ್ನಲ್ಲೇ ಡ್ರಿಪ್ ಹಾಕಿದರು. ಒಂದು ವಾರದ ಬಳಿಕ ಪ್ಲಾಸ್ಟರ್ ಕಾಸ್ಟ್ ಹಾಕಲಾಗುತ್ತದೆ ಎಂದು ಹೇಳಿದ್ದರು. ಹೀಗಾಗಿ ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಲು ನಿರ್ಧರಿಸಲಾಯ್ತು ಎಂದರು.
ನೆಟ್ಟಿಗರು ಏನಂದ್ರು?
ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಗೆ ಒದಗಿಬಂದಿರುವ ದುಸ್ಥಿತಿ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎನ್ಡಿಎಯಲ್ಲಿ ಇಷ್ಟು ದೊಡ್ಡ ವಿಜ್ಞಾನಿಗಳು ಇರುವಾಗ ಈ ಪ್ರಯೋಗವೆಲ್ಲ ಸಾಮಾನ್ಯವೇ ಮೋದಿ ವಿಜ್ಞಾನಿ, ಚರಂಡಿಯಿಂದ ಚಹಾ, ಗಡ್ಕರಿ ಬಾಹ್ಯಾಕಾಶ ತಂತ್ರಜ್ಞಾನ, ರಸ್ತೆ ಗುಂಡಿ, ಉಳಿದ ಸಚಿವರು ಗೋಮೂತ್ರ ಎಂದು ನೆಟ್ಟಿಗರೊಬ್ಬರು ಲೇವಡಿ ಮಾಡಿದ್ದಾರೆ, (ಏಜೆನ್ಸೀಸ್).