Bihar Man Licking Women Poster
- ಬಿಹಾರದಲ್ಲಿ ಲಾರಿ ಮೇಲೆ ಅಂಟಿಸಿದ್ದ ಮಹಿಳೆ ವಿಡಿಯೋ ನೆಕ್ಕಿದ ವ್ಯಕ್ತಿಯ ವಿಡಿಯೋ ವೈರಲ್
- ಭಾರತದಲ್ಲಿ ಮಹಿಳೆಯ ಪೋಸ್ಟರ್ಗಳು ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಕಿಡಿ
- ಬಿಹಾರದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ ಹೇರಿದ ನೆಟ್ಟಿಗರು
Bihar Man Licking Women Poster: ವ್ಯಕ್ತಿಯೊಬ್ಬ ಲಾರಿ ಹಿಂಭಾಗದಲ್ಲಿ ಅಂಟಿಸಲಾಗಿದ್ದ ಮಹಿಳೆಯ ಫೋಟೋವನ್ನು ನಾಲಿಗೆಯಿಂದ ಅಸಭ್ಯವಾಗಿ ಐದಾರು ಬಾರಿ ನೆಕ್ಕುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಇದು ಬಿಹಾರದಲ್ಲಿ ನಡೆದಿದೆ ಎನ್ನಲಾಗಿದ್ದು, ವ್ಯಕ್ತಿಯ ವಿಕೃತ ಮನಸ್ಥಿತಿ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ. ಜೊತೆಗೆ ಮಹಿಳೆಯರ ಸುರಕ್ಷತೆ ಬಗ್ಗೆ ಧ್ವನಿ ಎತ್ತಲಾಗಿದೆ.
ಜಸ್ವಿಂಧರ್ ಕೌರ್ ಎಂಬುವವರ ಎಕ್ಸ್ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಅದಕ್ಕೆ ಶೀರ್ಷಿಕೆ ಕೊಟ್ಟಿರುವುದು ಹೀಗೆ. ಭಾರತದಲ್ಲಿ ಅಂಟಿಸಲಾಗುವ ಪೋಸ್ಟರ್ಗಳಲ್ಲಿಯೂ ಮಹಿಳೆ ಸುರಕ್ಷಿತವಾಗಿಲ್ಲ. ಆ ವ್ಯಕ್ತಿ ಹುಡುಗಿಯ ಪೋಸ್ಟರ್ ಅನ್ನು ಕಾಮುಕತೆಯಿಂದ ನೆಕ್ಕುತ್ತಿದ್ದರೆ, ಅಲ್ಲಿರುವ ಸಣ್ಣ ಮಕ್ಕಳನ್ನು ನೋಡಿ, ಅವರಿಗೆ ಈಗಾಗಲೇ ಭವಿಷ್ಯದ ಬಗ್ಗೆ ಹೆದರಿಕೆಯುಂಟಾಗುವಂತಾಗಿದೆ ಎಂದು ಬರೆದುಕೊಂಡಿದ್ದಾರೆ.
ಎಕ್ಸ್ ವಿಡಿಯೋದಲ್ಲಿ ಏನಿದೆ?
ಬಿಳಿ ಕೂದಲಿನ ವ್ಯಕ್ತಿಯೊಬ್ಬ ತಾನು ತೊಟ್ಟಿದ್ದ ಪಂಚೆಯನ್ನು ಮೇಲಕ್ಕೆ ಸಿಕ್ಕಿಸಿಕೊಂಡು, ಲಾರಿಗೆ ಅಂಟಿಸಲಾಗಿದ್ದ ಯುವತಿಯರ ಫೋಟೋವನ್ನು ಜನರಿದ್ದಾರೆ ಎಂದು ಗಮನಕ್ಕೆ ತೆಗೆದುಕೊಳ್ಳದೇ ನಾಲಿಗೆಯನ್ನು ಹೊರ ಹಾಕಿ ಅವರ ಫೋಟೋಗಳನ್ನು ಅಸಭ್ಯವಾಗಿ ನೆಕ್ಕುತ್ತಿರುವುದು ವೈರಲ್ ಆಗಿದೆ.
ರೇಖಾ ಎನ್ನುವವರು ಕಾಮೆಂಟ್ ಮಾಡಿದ್ದು, 'ವ್ಯಕ್ತಿಯ ಹೆಸರು ಆರ್ಶನ್ ಖಾನ್' ಎಂದಿದ್ದಾರೆ. ಮೊಹ್ಮದ್ ಎಂಬುವವರು ಕಾಮೆಂಟ್ ಮಾಡಿ 'ಆ ವ್ಯಕ್ತಿ ಸರ್ಕಾರದಿಂದ ಉಚಿತ ಪಡಿತರ ಪಡೆದು, ಇಂಟರ್ನೆಟ್ನಲ್ಲಿ ಅಶ್ಲೀಲ ವಿಡಿಯೋಗಳನ್ನೇ ನೋಡಿಕೊಂಡು ಇರುತ್ತಾರೆ. ಆನಂತರ ನಾಯಿ, ಹಲ್ಲಿ ಸೇರಿದಂತೆ ಎಲ್ಲದರ ಮೇಲೂ ಅತ್ಯಾಚಾರ ಮಾಡುತ್ತಾರೆ. ಈಗ ಈ ಪೋಸ್ಟರ್' ಎಂದು ಕಿಡಿಕಾರಿದ್ದಾರೆ.
'ಪ್ರಾಣಿಗಳು ಈ ರೀತಿ ವರ್ತಿಸಲ್ಲ. ನೋಡಲು ಅಸಹ್ಯವಾಗಿದೆ' ಎಂದು ಮತ್ತೊಬ್ಬರು ಉತ್ತರಿಸಿದ್ದಾರೆ. ಇದೇ ವಿಡಿಯೋಗೆ ಮತ್ತೊಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದು, ಬಿಹಾರಿಗಳು ಭಾರತದಲ್ಲಿ ಅಷ್ಟೇ ಅಲ್ಲ ವಿದೇಶಕ್ಕೆ ಹೋಗಿ ಅಲ್ಲಿನ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ. ಆನಂತರ ಭಾರತ ಅಪಖ್ಯಾತಿ ಪಡೆಯುವಂತೆ ಮಾಡುತ್ತಾರೆ' ಎಂದು ಕಿಡಿಕಾರಿದರು. 'ಈ ವ್ಯಕ್ತಿ ಮೇಲೆ ಬಿಹಾರ ಪೊಲೀಸರು ಸೂಕ್ತವಾದ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದ್ದಾರೆ, (ಏಜೆನ್ಸೀಸ್).