ಸಾಂದರ್ಭಿಕ ಚಿತ್ರ 
ದೇಶ

ಪ್ರಧಾನಿ ಮೋದಿ ಕುರಿತು ಎಐ ಆಧಾರಿತ ಆಕ್ಷೇಪಾರ್ಹ ಚಿತ್ರ ಪೋಸ್ಟ್​; ದೆಹಲಿ ಪೊಲೀಸರಿಂದ ಬಿಹಾರ ವ್ಯಕ್ತಿ ಬಂಧನ | Arrested

ನವದೆಹಲಿ: ಕೃತಕ ಬುದ್ದಿಮತ್ತೆ(ಎಐ) ಬಳಿಸಿ ಪ್ರಧಾನಿ ಮೋದಿಯವರ ಆಕ್ಷೇಪಾರ್ಹ ಪೋಟೋಗಳನ್ನು ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಬಿಹಾರದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಶನಿವಾರ(ಮಾ. 20) ವರದಿಯಾಗಿದೆ.
ಆರೋಪಿಯನ್ನು ಸಿದ್ದನಾಥ್ ಕುಮಾರ್ ಎಂದು ಗುರುತಿಸಲಾಗಿದ್ದು, ಬಿಹಾರದ ಅರ್ವಾಲ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಕೃತಕ ಬುದ್ಧಿಮತ್ತೆ ಉಪಕರಣಗಳನ್ನು ಬಳಸಿಕೊಂಡು ಪ್ರಧಾನಿಯವರ ಆಕ್ಷೇಪಾರ್ಹ ಚಿತ್ರಗಳನ್ನು ರಚಿಸಿ ಪ್ರಸಾರ ಮಾಡಿದ್ದ ಎಂದು ಆರೋಪಿಸಲಾಗಿದೆ. 
ಬಿಜೆಪಿ ಮಹಿಳಾ ಶಾಸಕಿ ಮತ್ತು ವಿದೇಶಿ ಮಹಿಳಾ ನಾಯಕಿಯರ ಬಗ್ಗೆಯೂ ಆಕ್ಷೇಪಾರ್ಹ ಚಿತ್ರಗಳನ್ನು ರಚಿಸಿ ಹಂಚಿಕೊಂಡಿರುವ ಬಗ್ಗೆ ಪೊಲೀಸರು ಗಮನಿಸಿದ್ದು, ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆಗೆ ಆರೋಪಿಯನ್ನು ದೆಹಲಿಗೆ ಕರೆತಂದಿದ್ದಾರೆ. ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎನ್ನಲಾಗಿದೆ (ಏಜೆನ್ಸೀಸ್).